For Quick Alerts
ALLOW NOTIFICATIONS  
For Daily Alerts

ವಾರಾಂತ್ಯದ ಸ್ಪೆಷಲ್: ಬಟಾಣಿ ಪ್ಯಾನ್ ‎ಕೇಕ್ ರೆಸಿಪಿ

By Jaya subramanya
|

ಆಹಾರವೆಂಬುದು ನಿತ್ಯ ಜೀವನ ಕ್ರಮದಲ್ಲಿ ಅತ್ಯವಶ್ಯಕವಾಗಿದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮವನ್ನು ಬೀರುವಂತಿರಬಾರದು ಬದಲಿಗೆ ನಮ್ಮ ದೇಹಾರೋಗ್ಯವನ್ನು ಇದು ಇನ್ನಷ್ಟು ಬಲಪಡಿಸುವಂತಿರಬೇಕು.

ಹಾಗಿದ್ದರೆ ನಿತ್ಯವೂ ಒಂದೇ ಬಗೆಯ ತರಕಾರಿ ಸೇವನೆಯನ್ನು ಮಾಡಿ ಎಂಬುದಾಗಿ ನಾವಿಲ್ಲಿ ತಿಳಿಸುತ್ತಿಲ್ಲ. ಆಗಾಗ್ಗೆ ನೀವು ಸೇವಿಸುವ ತರಕಾರಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಿ ಎಂಬುದಾಗಿ ನಾವಿಲ್ಲಿ ಸಲಹೆಯನ್ನು ನೀಡುತ್ತಿದ್ದೇವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಬಟಾಣಿ ಪ್ಯಾನ್‎ ಕೇಕ್ ರೆಸಿಪಿಯನ್ನು ನಾವು ತಿಳಿಸಲಿದ್ದು ಇದು ನಿಮ್ಮ ಸಮಯವನ್ನು ವ್ಯರ್ಥಮಾಡದೆಯೇ ನಿಮಗೆ ಅತಿ ಕಡಿಮೆ ಸಮಯದಲ್ಲಿ ಉಪಹಾರ ತಯಾರಿಯಲ್ಲಿ ಸಹಾಯ ಮಾಡಲಿದೆ. ಕಾರ್ನ್ ಪ್ಯಾನ್ ಕೇಕ್ ರೆಸಿಪಿ

ಅಷ್ಟೇ ಅಲ್ಲದೆ ಬಟಾಣಿಯೊಂದಿಗೆ ಇನ್ನೊಂದಿಷ್ಟು ತರಕಾರಿಗಳನ್ನು ನಾವು ಸೇರಿಸಲಿದ್ದು ಇದರಿಂದ ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಅಂತೆಯೇ ಉತ್ತಮ ಪೋಷಕಾಂಶ ಕೂಡ ನಿಮಗೆ ದೊರೆಯಲಿದೆ. ಹಾಗಿದ್ದರೆ ಪ್ಯಾನ್‎ಕೇಕ್ ಮಾಡುವ ವಿಧಾನವನ್ನು ಅರಿತುಕೊಳ್ಳಿ.

*ಪ್ರಮಾಣ - 30 ಪ್ಯಾನ್‎ಕೇಕ್
*ಸಿದ್ಧತಾ ಸಮಯ - 15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು

ಸಾಮಾಗ್ರಿಗಳು
*ಹಸಿರು ಬಟಾಣಿ - 3/4 ಕಪ್ (ಬೇಯಿಸಿದ್ದು)
*ಅಕ್ಕಿ ಹುಡಿ - 1/2 ಕಪ್
*ಕಡಲೆಹುಡಿ - 1/2 ಕಪ್
*ಅರಿಶಿನ ಹುಡಿ- 1/4 ಚಮಚ
*ಫ್ರುಟ್ ಸಾಲ್ಟ್ - 1/2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ - 2 ಚಮಚ
*ಟೊಮೇಟೊ - 1/4 ಕಪ್
*ಕ್ಯಾರೆಟ್ - 1/2 ಕಪ್
*ಹಸಿಮೆಣಸು - 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
*ಕೋಟೇಜ್ ಚೀಸ್ (ಪನೀರ್) - 4 ಚಮಚ (ತುರಿದದ್ದು)
*ನೀರು ಬೇಕಾದಷ್ಟು ಪ್ಯಾನ್ ಕೇಕ್ ಮಾಡುವುದು ಹೇಗೆ?

Green Peas Pancake

ಮಾಡುವ ವಿಧಾನ
*ಮೊದಲಿಗೆ ಬೇಯಿಸಿದ ಬಟಾಣಿಯನ್ನು ಚೆನ್ನಾಗಿ ಕಡೆದು ಪೇಸ್ಟ್ ಮಾಡಿಕೊಳ್ಳಿ
*ಈಗ, ಪಾತ್ರೆಯನ್ನು ತೆಗೆದುಕೊಂಡು ಬಟಾಣಿ ಪೇಸ್ಟ್ ಅನ್ನು ಅದಕ್ಕೆ ಹಾಕಿ. ಅಕ್ಕಿ ಹುಡಿ, ಕಡ್ಲೆಹಿಟ್ಟು, ಅರಶಿನ, ಹಸಿಮೆಣಸು ಮತ್ತು ಉಪ್ಪು ಸೇರಿಸಿ ನೀರನ್ನು ನಿಧಾನವಾಗಿ ಬೆರೆಸಿಕೊಂಡು ಮಿಶ್ರಮಾಡುವುದನ್ನು ಮುಂದುವರಿಸಿ. ನಿಮಗೆ ದಪ್ಪ ಮಿಶ್ರಣ ದೊರೆತೊಡನೆ, ಫ್ರುಟ್ ಸಾಲ್ಟ್ ಅನ್ನು ಇದಕ್ಕೆ ಹಾಕಿ


*ಚೆನ್ನಾಗಿ ಮಿಶ್ರ ಮಾಡಿ ಆದರೆ ಅತಿಯಾಗಿ ಮಿಶ್ರ ಮಾಡಬೇಡಿ. ಫ್ರುಟ್ ಸಾಲ್ಟ್ ಅನ್ನು ಬೆರೆಸಿದ ನಂತರ ನೀವು ಹೆಚ್ಚು ಮಿಶ್ರಣವನ್ನು ಮಿಶ್ರ ಮಾಡುವಂತಿಲ್ಲ; ಇಲ್ಲದಿದ್ದರೆ ಪ್ಯಾನ್‎ಕೇಕ್ಸ್ ಹೆಚ್ಚು ಪ್ಲಫಿಯಾಗುವುದಿಲ್ಲ
*ಈಗ ಚಪ್ಪಟೆ ನಾನ್ ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಇದಕ್ಕೆ ಎಣ್ಣೆಯನ್ನು ಹಚ್ಚಿ. ಇದರಿಂದ ಪ್ಯಾನ್‎ಕೇಕ್ಸ್ ಅನ್ನು ನಿಮಗೆ ಸುಲಭವಾಗಿ ಮಗುಚಬಹುದಾಗಿದೆ.
*ಈಗ ಒಂದು ಲ್ಯಾಡಲ್ ಮಿಶ್ರಣವನ್ನು ತೆಗೆದುಕೊಂಡು ಪ್ಯಾನ್‎ಗೆ ಸುರಿಯಿರಿ. ಸಣ್ಣ ಪ್ಯಾನ್‎ಕೇಕ್ ತಯಾರಿಸಿ, ನಂತರ ಕೋಟೇಜ್ ಚೀಸ್ ಅನ್ನು ತುರಿದು ಇದರ ಮೇಲೆ ಉದುರಿಸಿ. ಜೊತೆಗೆ ಟೊಮೇಟೊ ಮತ್ತು ಸ್ವಲ್ಪ ಎಣ್ಣೆಯನ್ನು ಪ್ಯಾನ್‎ಕೇಕ್ ಮೇಲಿರಿಸಿ.
ಈಗ ಪ್ಯಾನ್‎ಕೇಕ್ ಮಗುಚಿಸಿ. ಮತ್ತೊಂದು ಬದಿಯನ್ನು ಬೇಯಿಸಿ ಬಟಾಣಿ ಪ್ಯಾನ್‎ಕೇಕ್ ಸಿದ್ಧವಾಗಿದೆ ಇದನ್ನು ಬಿಸಿಯಾಗಿ ಬಡಿಸಿ.
ಇನ್ನು ಚಟ್ನಿ ಮತ್ತು ಸಾಸ್‎ನೊಂದಿಗೆ ಪ್ಯಾನ್‎ಕೇಕ್ ಸವಿಯಲು ಅತ್ಯುತ್ತಮವಾಗಿರುತ್ತದೆ. ಇದೊಂದು ಅತ್ಯುತ್ತಮ ಸ್ನ್ಯಾಕ್ ಆಯ್ಕೆಯಾಗಿದ್ದು, ಇದು ವಿಟಮಿನ್‎ಗಳನ್ನು ಒಳಗೊಂಡಿದೆ ಅಂತೆಯೇ ಫೈಬರ್ ಮತ್ತು ಸಾಕಷ್ಟು ಮಿನರಲ್‎ಗಳನ್ನು ಹೊಂದಿದೆ.

ಹಾಗಿದ್ದರೆ ಈ ರೆಸಿಪಿಯನ್ನು ಪ್ರಯತ್ನಿಸಲು ಖಂಡಿತ ಮರೆಯದಿರಿ.

English summary

Green Peas Pancake: Healthy Snack Recipe

Today, we've shared this recipe of peas pancake that you could include as amazing snack options or have it at the start of the day for breakfast. So, have a look at the ingredients which are required and the procedure that follows.
X
Desktop Bottom Promotion