For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಎಗ್ ರೋಲ್ ರೆಸಿಪಿ

|

ಸಂಜೆ ಕಾಫಿ/ಟೀಗೆ ಸ್ಪೆಷಲ್ ಸ್ನ್ಯಾಕ್ಸ್ ಆಗಿ ಎಗ್ ರೋಲ್ ಅನ್ನು ಸುಲಭದಲ್ಲಿ ತಯಾರಿಸಬಹುದು. ಎಣ್ಣೆಯಲ್ಲಿ ಕರಿದ ಪದಾರ್ಥಗಳಿಗಿಂತ ಆರೋಗ್ಯಕರವಾದ ಸ್ನ್ಯಾಕ್ಸ್ ಇದಾಗಿದೆ.

ಬಾಯಿ ರುಚಿ ಹೆಚ್ಚಿಸುವ, ಹೊಟ್ಟೆ ತುಂಬಿಸುವ ಈ ಎಗ್ ರೋಲ್ ಟ್ರೈ ಮಾಡ ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Easy And Tasty Egg Roll Recipe

ಬೇಕಾಗುವ ಪದಾರ್ಥಗಳು
4 ಮೊಟ್ಟೆ
2 ಕಪ್ ಮೈದಾ
1 ಈರುಳ್ಳಿ(ಚಿಕ್ಕದಾಗಿ ಕತ್ತರಿಸಿ, ಅದರ ಮೇಲೆ 1 ಚಮಚ ವಿನೆಗರ್ ಹಾಕಿಡಿ)
ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ 2-3
1 ಚಮಚ ಖಾರದ ಪುಡಿ
ಟೊಮೆಟೊ ಸಾಸ್
ಚಿಲ್ಲಿ ಸಾಸ್
ರುಚಿಗೆ ತಕ್ಕ ನಿಂಬೆ ರಸ
ಸೌತೆಕಾಯಿ(ಬೇಕಿದ್ದರೆ ಹಾಕಬಹುದು)
ಎಣ್ಣೆ
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

* ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ. ನಂತರ ಅದರಿಂದ ಮೀಡಿಯಂ ಗಾತ್ರದ ಉಂಡೆಗಳನ್ನು ಮಾಡಿ, ಪರೋಟಕ್ಕೆ ತಟ್ಟಿದಂತೆ ತಟ್ಟಿ.

* ಈಗ ಬಟ್ಟಲಿಗೆ ಮೊಟ್ಟೆ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ.

*ಮತ್ತೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಸೌತೆಕಾಯಿ, ಟೊಮೆಟೊ ಸಾಸ್ . ಚಿಲ್ಲಿ ಸಾಸ್ ಮತ್ತು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇಡಿ.

*ನಂತರ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ಪರೋಟದ ಎರಡೂ ಬದಿಯನ್ನು ಬೇಯಿಸಿ ಪೇಪರ್ ನಲ್ಲಿ ಹಾಕಿಡಿ.

* ನಂತರ ಅದೇ ತವಾಕ್ಕೆ ಸ್ವಲ್ಪ ಎಣ್ಣೆ ಹಾಕಿ ಆಮ್ಲೇಟ್ ಮಾಡಿ, ಆಮ್ಲೇಟ್ ಬಿಸಿಯಾಗಿರುವಾಗಲೇ ಅದನ್ನು ಬೇಯಿಸಿದ ಪರೋಟದ ಮೇಲೆ ಹಾಕಿ, ಮತ್ತೆ ತವಾದ ಮೇಲೆ 2-1 ನಿಮಿಷ ಬಿಸಿ ಮಾಡಿ, ಈಗ ಆಮ್ಲೇಟ್ ಇರುವ ಕಡೆ ಸಾಸ್ ಮಿಕ್ಸ್ ಮಾಡಿರುವ ತರಕಾರಿ ಹಾಕಿ, ಖಾರದ ಪುಡಿ ಚಿಮುಕಿಸಿ, ರೋಲ್ ರೀತಿ ಮಾಡಿ ಸಿಲ್ವರ್ ಪೇಪರ್ ನಿಂದ ಸುತ್ತಿದರೆ ಎಗ್ ರೋಲ್ ರೆಡಿ.

2 ಕಪ್ ಮೈದಾದಿಂದ 5-6 ಎಗ್ ರೋಲ್ ತಯಾರಿಸಬಹುದು.

English summary

Easy And Tasty Egg Roll Recipe

Egg roll recipe is an incredibly simple but delicious option for your evening snacks. Try this egg role in your own kitchen. To prepare this you need not be a expert in cook. Try this. 
X
Desktop Bottom Promotion