For Quick Alerts
ALLOW NOTIFICATIONS  
For Daily Alerts

ಬೇಬಿ ಕಾರ್ನ್ -ಮಶ್ರೂಮ್ ಮಂಚೂರಿಯನ್ ಡ್ರೈ

|

ಅಣಬೆ ಮತ್ತು ಬೇಬಿ ಕಾರ್ನ್ ಮಿಕ್ಸ್ ಮಾಡಿ ಮಾಡುವ ಮಂಚುರಿಯನ್ ರುಚಿ ನೋಡಿದ್ದೀರಾ? ಇದು ಮೂಲತಃ ಚೈನೀಸ್ ರೆಸಿಪಿಯಾಗಿದೆ. ಇದರ ರುಚಿ ಇನ್ನೂ ನೋಡಿಲ್ಲವೆಂದರೆ ನಿಮಗಾಗಿ ರುಚಿಕರವಾದ ಬೇಬಿ ಕಾರ್ನ್-ಮಶ್ರೂಮ್ ಮಂಚೂರಿಯನ್ ನೀಡಿದ್ಧೇವೆ ನೋಡಿ:

ಎಣ್ಣೆ ಕಮ್ಮಿ ಬಳಸಿ ಮಾಡುವ ಈ ಮಂಚೂರಿಯನ್ ರುಚಿಕರ ಮಾತ್ರವಲ್ಲ ಆರೋಗ್ಯಕರ ಕೂಡ ಹೌದು. ಇದನ್ನು ತಯಾರಿಸಲು ನೀವು ಮಾಡಬೇಕಾದದು ಇಷ್ಟೇ..

Baby Corn Mushroom Manchurian Dry

ಈ ಕೆಳಗಿನ ಸಾಮಾಗ್ರಿಗಳನ್ನು ಜೋಡಿಸಿ
ಮಶ್ರೂಮ್ 1 ಕಪ್ (ಶುಚಿ ಮಾಡಿ ಕತ್ತರಿಸಿದ್ದು)
ಬೇಬಿ ಕಾರ್ನ್ 1 ಕಪ್ (ಕತ್ತರಿಸಿದ್ದು)
ಈರುಳ್ಳಿ 1
ಬೆಳ್ಳುಳ್ಳಿ ಎಸಳು 2-3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿ ಮೆಣಸಿನಕಾಯಿ 3
ಕರಿ ಮೆಣಸಿನ ಪುಡಿ ಅರ್ಧ ಚಮಚ
ಸೋಯಾ ಸಾಸಿ 2 ಚಮಚ
ಟೊಮೆಟೊ ಸಾಸ್ 1 ಚಮಚ
ಜೋಳದ ಹಿಟ್ಟು 1 ಚಮಚ
ರುಚಿಗೆ ತಕ್ಕ ಉಪ್ಪು
ಚಿಕ್ಕ ಈರುಳ್ಳಿ2
ಎಣ್ನೆ 2 ಚಮಚ
ನೀರು ಅರ್ಧ ಕಪ್

ತಯಾರಿಸುವ ವಿಧಾನ

* ಬಾಣಲಿಯನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈಗ ಬೇಬಿ ಕಾರ್ನ್ ಸೇರಿಸಿ 2-3 ನಿಮಿಷ ಹುರಿಯಿರಿ.

* ಈಗ ಅಣಬೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಹಸಿಮೆಣಸಿನಕಾಯಿ ಹಾಕಿ ಕಡಿಮೆ ಉರಿಯಲ್ಲಿ 5-6 ನಿಮಿಷ ಹುರಿಯಿರಿ.

* ಇದೇ ಸಮಯದಲ್ಲಿ ಜೋಳದ ಹಿಟ್ಟನ್ನು ಅರ್ಧ ಕಪ್ ನೀರು ಹಾಕಿ ಕಲೆಸಿ. ನಂತರ ಬಾಣಲಿಗೆ ಹಾಕಿ. ಈಗ ಸೋಯಾ ಸಾಸ್, ಟೊಮೆಟೊ ಸಾಸ್, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ. ಮಿಶ್ರಣ ಡ್ರೈಯಾಗುವವರೆಗೆ ಸೌಟ್ ನಿಂದ ಆಡಿಸುತ್ತಾ ಬೇಯಿಸಿ.

* ನಂತರ ನಿಮಗೆ ಇಷ್ಟ ಬಂದಂತೆ ಕೊತ್ತಂಬರಿ ಸೊಪ್ಪಿನಿಂದಲೂ, ಈರುಳ್ಳಿಯಿಂದಲೋ ಅಲಂಕರಿಸಿ. ಇಷ್ಟು ಮಾಡಿದರೆ ಬೇಬಿ ಕಾರ್ನ್-ಮಶ್ರೂಮ್ ಮಂಚೂರಿಯನ್ ಡ್ರೈ ರೆಡಿ.

English summary

Baby Corn Mushroom Manchurian Dry | Variety Of Starters Recipe | ಬೇಬಿಕಾರ್ನ್-ಮಶ್ರೂಮ್ ಮಂಚೂರಿಯ್ ಡ್ರೈ | ಅನೇಕ ಬಗೆಯ ಸ್ಟಾಟರ್ಸ್ ರೆಸಿಪಿ

Chilli mushroom with babycorn is an Indo-Chinese fusion recipe, which is a craze among many especially the kids and youngsters. The blend of spicy Indian ingredients and the Chinese sauces give this mushroom recipe an exquisite flavour and taste.
X
Desktop Bottom Promotion