For Quick Alerts
ALLOW NOTIFICATIONS  
For Daily Alerts

ಅಜ್ಜಿಗೂ ಇಷ್ಟ ಹೂಕೋಸಿನ ಬಜ್ಜಿ!

By Staff
|

ಗೋಬಿಮಂಚೂರಿ ತಿಂದು ಬೇಸರವಾಗಿದ್ದರೆ. ನಾಲಿಗೆ ಜಡ್ಡು ಹಿಡಿದಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ. ಮಾಡುವುದೂ ಸುಲಭ. ಅಜ್ಜಿಯೂ ಇಷ್ಟಪಡುವ ಬಜ್ಜಿ ಇದು. ಅದೇ ಹೂಕೋಸಿನ ಬಜ್ಜಿ.


ಬೇಕಾಗುವ ಪದಾರ್ಥಗಳು :

ಕಡಲೆ ಹಿಟ್ಟು : ಒಂದ್ ಕಪ್ಪು
ಹೂ ಕೋಸು : ಒಂದು
ಹಸಿ ಮೆಣಸಿನ ಕಾಯಿ : 3
ಹರಿಶಿಣ : ಒಂದು ಚಿಟಿಕೆ
ಉಪ್ಪು : ರುಚಿಗೆ ತಕ್ಕಷ್ಟು
ತರಿದ ಕೊತ್ತಂಬರಿ ಸೊಪ್ಪು : ಒಂದು ಹಿಡಿ
ಎಣ್ಣೆ : ಒಂದು ಕಪ್ಪು

ಬಜ್ಜಿ ಮಾಡುವ ವಿಧಾನ :

ತಾಜಾ ಹೂ ಕೋಸನ್ನು ಕತ್ತರಿಸಿ ಕೊಳ್ಳಿ. ಅದಕ್ಕೆ ಉಪ್ಪು ಹಾಕಿ ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ಸಮಯ ಇಡಿ. ಹೀಗೆ ಮಾಡುವುದರಿಂದ ಹೂಕೋಸಿನಲ್ಲಿರುವ ನೀರು ಹೊರಹೋಗುತ್ತದೆ. ಈಗ ಕಡಲೆ ಹಿಟ್ಟು, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ತರಿದ ಕೊತ್ತಂಬರಿ ಸೊಪ್ಪನ್ನು ಹೂ ಕೋಸಿನೊಂದಿಗೆ ಕಲಸಿ. ಕಲಸಿಕೊಳ್ಳಲು ಅಲ್ಪ ಪ್ರಮಾಣದ ನೀರನ್ನೂ ಬಳಸಬಹುದು.

ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈ ಮಿಶ್ರಣವನ್ನು ಹುರಿಯಿರಿ. ಈಗ ನಿಮ್ಮ ನೆಚ್ಚಿನ ಹೂ ಕೋಸಿನ ಬಜ್ಜಿ ತಯಾರ್. ಇದನ್ನು ಬಿಸಿ ಇರುವಾಗಲೇ ತಿಂದರೆ ರುಚಿ ಹೆಚ್ಚು.

ಸೂಚನೆ : ಹುರಿದ ಕೂಡಲೆ ಪೇಪರ್ ಟವೆಲ್ ಮೇಲೆ ಹಾಕಿ. ಏಕೆಂದರೆ ಅದರಲ್ಲಿನ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಪೇಪರ್ ಟವಲ್.

(ದಟ್ಸ್‌ಕನ್ನಡ ಪಾಕಶಾಲೆ)

English summary

ಅಜ್ಜಿಗೂ ಇಷ್ಟ ಈ ಹೂಕೋಸಿನ ಬಜ್ಜಿ! - Indian Snacks : Cauliflower Bajji

How to prepare Cauliflower Bajji?
X
Desktop Bottom Promotion