For Quick Alerts
ALLOW NOTIFICATIONS  
For Daily Alerts

ಓಣಂಗೆ ಬಾಳೆಕಾಯಿ ಚಿಪ್ಸ್ ನೀವೇ ಮಾಡಬಹುದು

By Super
|
Banana chips
ಓಣಂ ಎಂದ ಮೇಲೆ ಬಾಳೆಕಾಯಿ ಚಿಪ್ಸ್ ಇರಲೇಬೇಕು. ಕೇರಳ ಮೂಲದ ಈ ಗರಂ ಗರಂ ಚಿಪ್ಸ್ ತಿನ್ನೋದಕ್ಕೆ ತುಂಬಾ ರುಚಿ. ಇದನ್ನು ಕಾಫಿ ಟೀ ಜೊತೆ ಸೇವಿಸಿದರೆ ಇನ್ನೂ ಚೆಂದ. ಓಣಂಗೆ ಬಾಳೆಕಾಯಿ ಚಿಪ್ಸ್ ಅನ್ನು ಸುಲಭವಾಗಿ ತಯಾರಿಸುವ ವಿಧಾನವೊಂದು ಇಲ್ಲಿದೆ. ಅಂಗಡಿಯಿಂದ ತರುವ ಬದಲು ನೀವೇ ಮನೆಯಲ್ಲಿ ಮಾಡಿಕೊಂಡು ತಿನ್ನಬಹುದು.

ಬಾಳೆ ಚಿಪ್ಸ್ ಗೆ ಬೇಕಾಗುವ ಪದಾರ್ಥ:
* ಹಸಿ ಬಾಳೆಕಾಯಿ
* ಉಪ್ಪು, ಮೆಣಸಿನ ಪುಡಿ
* ಅರಿಶಿನ, ಎಣ್ಣೆ
* ಒಂದು ಕಪ್ ನೀರು

ಚಿಪ್ಸ್ ಹೀಗೆ ಮಾಡಿ:
ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅದನ್ನು ಉಪ್ಪು ನೀರಿನಲ್ಲಿ ನೆನೆಸಬೇಕು. ನಂತರ ಬಾಳೆಕಾಯಿಯನ್ನು ತೆಳುವಾಗಿ ಕತ್ತರಿಸಿಕೊಂಡು (ಚಿಪ್ಸ್ ಮೇಕರ್ ನಿಂದಲೂ ಕತ್ತರಿಸಬಹುದು) ಅರಿಶಿನ ಬೆರೆಸಿದ ನೀರಿನಲ್ಲಿ ಸುಮಾರು 10 ನಿಮಿಷ ನೆನೆಯಲು ಬಿಡಬೇಕು. ಇದಾದ ನಂತರ ನೀರು ಹೋಗುವವರೆಗೂ ಬಿಸಿಲಿನಲ್ಲಿ ಒಣಗಿಸಬೇಕು. ಸಂಪೂರ್ಣವಾಗಿ ಒಣಗಿದ ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಬಾಳೆಕಾಯನ್ನು ಹುರಿಯಬೇಕು.

ಚಿಪ್ಸ್ ನಿಂದ ಎಣ್ಣೆ ಪೂರ್ತಿಯಾಗಿ ಹೋಗಲು ಕರಿದ ಚಿಪ್ಸನ್ನು ಪೇಪರ್ ಮೇಲೆ ಹಾಕಬೇಕು. ಎಣ್ಣೆ ಒಣಗಿದ ನಂತರ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಚಿಪ್ಸ್ ಮೇಲೆ ಉದುರಿಸಿ ಒಡೆಯದಂತೆ ಚೆನ್ನಾಗಿ ಕದಡಬೇಕು. ಈಗ ಓಣಂ ಸ್ಪೆಷಲ್ ಬಾಳೆಕಾಯಿ ಚಿಪ್ಸ್ ತಿನ್ನಲು ರೆಡಿಯಾಗಿದೆ.

English summary

Banana Chips Recipe | Onam Recipies | ಬಾಳೆಕಾಯಿ ಚಿಪ್ಸ್ ರೆಸಿಪಿ | ಓಣಂ ಸ್ಪೆಷಲ್ ತಿನಿಸು

On the occasion of onam, here is a simple banana chips recipe that can be enjoyed with onasadhya or even relished like a light snack with coffee or tea. Here is the recipe. Take a look.
X
Desktop Bottom Promotion