For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿಗೆ ಗರಿ ಗರಿ ಖಾರಾಸೇವ್ ಸ್ಪೆಷಲ್

By Staff
|

ಕೃಷ್ಣ ಜನ್ಮಾಷ್ಟಮಿ ದಿನ ಮಕ್ಕಳಿಗೆ, ಮನೆಗೆ ಬಂದವರಿಗೆ, ಅಕ್ಕಪಕ್ಕದವರಿಗೆ ತಿಂಡಿ ತಿನಿಸು ಹಂಚುವುದು ರೂಢಿ. ಈ ಬಾರಿ ಕೃಷ್ಣ ಜನ್ಮಾಷ್ಟಮಿಗೆ ನೀವೇ ಖುದ್ದಾಗಿ ಖಾರಾಸೇವ್ ತಯಾರಿಸಿ ಹಂಚಬಹುದು. ಮನೆಯಲ್ಲೇ ಸೇವ್ ತಯಾರಿಸುವುದು ತುಂಬಾ ಸುಲಭ. ಭಾರತೀಯ ಅಡುಗೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಖಾರಾಸೇವ್ ನೀವೂ ಮಾಡಿ ನೋಡಿ.

ಸೇವ್ ತಯಾರಿಕೆಗೆ ಬೇಕಾಗುವ ಸಾಮಾನುಗಳು:
* 1 ಕಪ್ ಅಕ್ಕಿ ಹಿಟ್ಟು
* 1 1/4 ಕಪ್ ಕಡಲೆಹಿಟ್ಟು
* 1/4 ಕೆಂಪು ಮೆಣಸಿನ ಪುಡಿ
* 1/2 ಓಂ ಕಾಳಿನ ಪುಡಿ
* ಚಿಕ್ಕ ತೂತಿನ ಶಾವಿಗೆ ಒರಳು
* ಉಪ್ಪು, ತುಪ್ಪ ಮತ್ತು ಎಣ್ಣೆ

ಸೇವ್ ತಯಾರಿಸುವ ವಿಧಾನ:
* ಮೊದಲು ಅಕ್ಕಿ ಹಿಟ್ಟು, ಕಡಲೆಹಿಟ್ಟು, ಉಪ್ಪು ಮತ್ತು ಓಂ ಕಾಳಿನ ಪುಡಿಯನ್ನು ಬಿಸಿ ತುಪ್ಪದೊಂದಿಗೆ ಬೆರೆಸಿ ಚೆನ್ನಾಗಿ ಕಲೆಸಬೇಕು. ನಂತರ ನಿಧಾನವಾಗಿ ಅಗತ್ಯವಿದ್ದಷ್ಟು ನೀರು ಹಾಕಿ ಮೆತ್ತಗಿರುವಂತೆ ಕಲೆಸಿಕೊಳ್ಳಬೇಕು.
* ಒಲೆಯ ಮೇಲೆ ಎಣ್ಣೆ ಕಾಯಲು ಇಟ್ಟು, ಸಣ್ಣ ತೂತಿರುವ ಶಾವಿಗೆ ಒರಳಿಗೆ ಕಲೆಸಿಕೊಂಡ ಮಿಶ್ರಣವನ್ನು ತುಂಬಿ ಎಣ್ಣೆ ಕಾಯುತ್ತಿದ್ದಂತೆ ನಿಧಾನವಾಗಿ ಒರಳನ್ನು ಒತ್ತಿ ಎಣ್ಣೆಗೆ ಸುತ್ತಲೂ ಮಿಶ್ರಣವನ್ನು ಬಿಡಬೇಕು.
* ಸಣ್ಣ ಉರಿಯಲ್ಲೇ ಸೇವ್ ಬೇಯುತ್ತಿರಲಿ, ಅದು ಹಳದಿ ಬಣ್ಣಕ್ಕೆ ತಿರುಗುತ್ತಿದ್ದಂತೆ ಎರಡೂ ಕಡೆಗೂ ಮಗುಚಿ ಬೇಯಿಸಬೇಕು.

ಈಗ ಗರಿ ಗರಿ ಖಾರಾ ಸೇವ್ ತಿನ್ನೋದಕ್ಕೆ ತಯಾರಾಗಿದೆ. ಗಟ್ಟಿ ಮುಚ್ಚುಳವಿರುವ ಡಬ್ಬಕ್ಕೆ ಹಾಕಿಟ್ಟರೆ ತುಂಬಾ ದಿನಗಳ ಕಾಲ ಖಾರಾ ಸೇವ್ ತಾಜಾ ಆಗಿರುತ್ತದೆ. ಜನ್ಮಾಷ್ಟಮಿ ಹಬ್ಬದಂದು ಕೃಷ್ಣನ ಮುಂದೆ ಇಟ್ಟು ಮಕ್ಕಳಿಗೂ ಹಂಚಿ ಖುಷಿಪಡಿಸಬಹುದು.

English summary

Sev recipe for Janmastami | Indian khara sev special recipe | ಜನ್ಮಾಷ್ಟಮಿಗೆ ಸೇವ್ ಸ್ಪೆಷಲ್ | ಭಾರತದ ಸ್ಪೆಷಕ್ ಖಾರಾ ಸೇವ್

Sev is a special festival snack and this Janmashtami you can make sev recipe at home and celebrate the festival. Sev, also known as Karasev, is an easy Indian snack recipe. Lets check out the sev, the Indian snack recipe for Janmashtami.
X
Desktop Bottom Promotion