For Quick Alerts
ALLOW NOTIFICATIONS  
For Daily Alerts

ಓದುತ್ತಾ ತಿನ್ನಿ ಚೀಸ್ ಚಿಲ್ಲಿ ರೋಸ್ಟ್

|
Cheese Chilli Recipe
ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗಿದೆ. ಪರೀಕ್ಷೆ ಭಯ ಮತ್ತು ಅಧಿಕ ಅಂಕಗಳಿಸುವ ಛಲದಲ್ಲಿ ಮಕ್ಕಳು ನಿದ್ದೆ ಊಟ ಬಿಟ್ಟು ಓದುತ್ತಾ ಇರುತ್ತಾರೆ. ಈ ಸಮಯದಲ್ಲಿ ಅಮ್ಮಂದಿರು ಮಕ್ಕಳ ತಿಂಡಿ-ತಿನಸುಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು. ಏಕೆಂದರೆ ಆರೋಗ್ಯ ಕೆಡಿಸಿಕೊಂಡರೆ ಅದು ಪರೀಕ್ಷೆಯಲ್ಲಿ ಗಳಿಸುವ ಅಂಕದ ಮೇಲೆ ಕೆಟ್ಟ ಪರಣಾಮ ಬೀರುವುದು.

ಪರೀಕ್ಷೆ ಸಮಯದಲ್ಲಿ ತುಂಬಾ ಓದುವುದರಿಂದ ಹೊಟ್ಟೆ ಹಸಿವು ಜಾಸ್ತಿಯಾಗುತ್ತದೆ. ಹೊರಗಿನ ಕುರುಕಲು ತಿಂಡಿ ತಿನ್ನುವ ಬದಲು ಚೀಸ್ ಮತ್ತು ಮೆಣಸಿನಿಂದ ತಯಾರಿಸುವ ಈ ತಿಂಡಿ ಬೆಸ್ಟ್. ಚೀಸ್ ನಲ್ಲಿರುವ ವಿಟಮಿನ್ ಬಿ ಮತ್ತು ಮೆಣಸು ಎಕ್ಸಾಂಗೆ ಓದುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:
* ಚೀಸ್
* ಬ್ರೆಡ್ ಚೂರುಗಳು 8
* ಈರುಳ್ಳಿ 4
* ಹಸಿಮೆಣಸು 8
* ಸ್ವಲ್ಪ ಕೊತ್ತಂಬರಿ ಸೊಪ್ಪು
* ನಿಂಬೆ ಹಣ್ಣು 1
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಬೇಕು.
2. ಈ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ನಿಂಬೆ ರಸ ಹಾಕಿ ಮಿಶ್ರಮಾಡಬೇಕು.
3. ಬ್ರೆಡ್ ಅನ್ನು ತವಾದಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಿಸಿಮಾಡಬೇಕು.
4. ಈಗ ಆ ಬ್ರೆಡ್ ನ ಮೇಲೆ ಮಿಶ್ರ ಮಾಡಿದ ಸಾಮಾಗ್ರಿಗಳನ್ನು ಹಾಕಿ ಅದರ ಮೇಲೆ ಚೀಸ್ ತುಂಡು ಹಾಕಬೇಕು. 5. ನಂತರ ತವಾದಲ್ಲಿ ಸ್ವಲ್ಪ ತುಪ್ಪ ಹಾಕಿ ಅದರಲ್ಲಿ ಈ ಬ್ರೆಡ್ ಅನ್ನು ಹಾಕಿ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಿದರೆ ಚೀಸ್ ಚಿಲ್ಲಿ ರೋಸ್ಟ್ ರೆಡಿ.

ಇದನ್ನು ಬಿಸಿ-ಬಿಸಿಯಾಗಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Cheese Chilli Recipe | Cheese Snacks Recipe | ಚೀಸ್ ಚಿಲ್ಲಿ ರೆಸಿಪಿ | ಚೀಸ್ ತಿಂಡಿ ರೆಸಿಪಿ

During exam time children should eat healthy snacks. Having cheese and chilli is healthy for physical and mental health. Therefor here there are cheese chilli recipe. Take a look.
Story first published: Wednesday, February 29, 2012, 13:11 [IST]
X
Desktop Bottom Promotion