For Quick Alerts
ALLOW NOTIFICATIONS  
For Daily Alerts

ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

By Super
|

ಖಾರವಾದ ಮಶ್ರೂಮ್ ರೈಸ್ ಎಂಬುದು ಭಾರತೀಯ ಖಾದ್ಯವಾಗಿದ್ದು, ಇದನ್ನು ಅಣಬೆಗಳಿಂದ ತಯಾರಿಸಲಾಗುತ್ತದೆ. ಅಣಬೆಗಳಿಂದ ತಯಾರಿಸುವ ಈ ಖಾದ್ಯವು ಖಾರವಾಗಿ ಮತ್ತು ಮೃದುವಾಗಿ ಇದ್ದು, ತಿನ್ನಲು ಭಾರೀ ರುಚಿಯಾಗಿರುತ್ತದೆ. ಈ ಖಾದ್ಯವು ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಖಾದ್ಯವಾಗಿದೆ. ಬಹುಶಃ ನೀವು ಅಣಬೆಗಳಿಂದ ತಯಾರಿಸುವ ಹಲವಾರು ಬಗೆಯ ಖಾದ್ಯಗಳ ಕುರಿತು ತಿಳಿದುಕೊಂಡಿರಬಹುದು.

ಆದರೆ ಈ ಮಶ್ರೂಮ್ ರೈಸ್ ಬಗೆಯು ಈಗ ಅತ್ಯಂತ ಜನಪ್ರಿಯವಾಗಿದೆ ಮತ್ತು ಇದನ್ನು ಮಾಡಿದರೆ ನಿಮ್ಮ ಮನೆ ಮಂದಿಯವರೆಲ್ಲ ಈ ಖಾದ್ಯವನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಶೀಘ್ರವಾಗಿ ತಯಾರಿಸಬಹುದು. ಮಶ್ರೂಮ್ ರೈಸ್ ಮಧ್ಯಾಹ್ನ ಮತ್ತು ರಾತ್ರಿಯ ಭೋಜನಕ್ಕಾಗಿ ವಾರದ ಯಾವುದೇ ದಿನಗಳಲ್ಲಿ ತಯಾರಿಸಿಕೊಳ್ಳಬಹುದು.

ಮಾಂಸಾಹಾರಿ ಪ್ರಿಯರಿಗೆ ಅಣಬೆಗಳು ಎಂದರೆ ಪಂಚ ಪ್ರಾಣ. ಕಾರಣ ಇದು ಸಹ ಅವರಿಗೆ ಮಾಂಸಾಹಾರದಂತೆಯೇ ರುಚಿಯನ್ನು ನೀಡುತ್ತದೆ. ಈ ಮಶ್ರೂಮ್ ಫ್ರೈಡ್ ರೈಸ್ ಖಾದ್ಯದಲ್ಲಿ ನೀವು ವೈವಿಧ್ಯಮಯ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ಖಾದ್ಯವ ವೈಶಿಷ್ಟ್ಯವೇನೆಂದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯದ ಅಗತ್ಯವಿಲ್ಲ. ಬನ್ನಿ ಹಾಗಾದರೆ ಈ ಅಣಬೆಯ ರುಚಿ ರುಚಿಯಾದ ಖಾದ್ಯವನ್ನು ತಯಾರಿಸುವ ಬಗೆಯನ್ನು ಹೇಗೆ ಎಂದು ತಿಳಿಯೋಣ. ಇದನ್ನು ತಯಾರಿಸಲು ನೀವೇನು ಅಡುಗೆ ತಜ್ಞರೇ ಆಗಿರಬೇಕಾಗಿಲ್ಲ. ಅಣಬೆಯಿಂದ ತಯಾರಿಸುವ ಇನ್ನಿತರ ಖಾದ್ಯಗಳಂತಲ್ಲದೆ ಇದನ್ನು ಅತ್ಯಂತ ಸುಲಭವಾಗಿ ತಯಾರಿಸಬಹುದು. ಮೆಂತೆ ಸೊಪ್ಪಿನ ಅನ್ನ-ಬ್ಯಾಚುಲರ್ ರೆಸಿಪಿ

Spicy Mushroom Rice Recipe

ಪ್ರಮಾಣ: 2-3 ಜನಕ್ಕೆ ಬಡಿಸಬಹುದು
*ತಯಾರಿಕೆಗೆ ಹಿಡಿಯುವ ಸಮಯ - 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ - 25-30 ನಿಮಿಷ

ಅಗತ್ಯವಾದ ಪದಾರ್ಥಗಳು
*ಬಾಸ್ಮತಿ ಅಕ್ಕಿ -2 ಕಪ್
*ಬಿಳಿಯ ಗುಂಡಗಿನ ಅಣಬೆಗಳು -200 ಗ್ರಾಂಗಳು (ಕತ್ತರಿಸಿದಂತಹವು)
*ಈರುಳ್ಳಿ - 3 (ಕತ್ತರಿಸಿದಂತಹವು)
*ಬೆಳ್ಳುಳ್ಳಿ - 5 ತುಂಡುಗಳು
*ಹಸಿ ಮೆಣಸಿನಕಾಯಿ - 4-5
*ಕೊತ್ತಂಬರಿ ಸೊಪ್ಪು ಸೋಯಾ ಸಾಸ್ - 1 1/2 ಟೀ.ಚಮಚ
*ಮೆಣಸು -1 ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ ಸುಲಭವಾಗಿ ತಯಾರಿಸಬಹುದು ಶುಂಠಿ ಫ್ರೈಡ್ ರೈಸ್
1. ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ, ಅಣಬೆಗಳನ್ನು ಸಹ ಚೆನ್ನಾಗಿ ತೊಳೆಯಿರಿ.
2. ಈಗ, ಅಕ್ಕಿಯಿಂದ ಅನ್ನವನ್ನು ತಯಾರಿಸಿಕೊಳ್ಳಿ. ಆದರೆ ಹೆಚ್ಚಾಗಿ ಬೇಯಿಸಬೇಡಿ.
3. ಇನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ. ಅಧಿಕ ಉರಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ.
4. ತದನಂತರ, ಅದಕ್ಕೆ ಅಣಬೆಗಳನ್ನು ಹಾಕಿ. ಹೊಂಬಣ್ಣಕ್ಕೆ ಬರುವವರೆಗೆ ಅದನ್ನು ಉರಿಯಿರಿ. ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲೆಸಿ ಕೊಡಿ.
5. ಇದೇ ಸಮಯದಲ್ಲಿ ಕುಕ್ಕರಿನಿಂದ ಅನ್ನವನ್ನು ತೆಗೆದುಕೊಂಡು, ಅದನ್ನು ಆರಿಸಲು ಬಿಡಿ.
6. ಹೀಗೆ ಒಮ್ಮೆ ಅನ್ನ ಆರಿದ ನಂತರ, ಅದನ್ನು ಪಾತ್ರೆಗೆ ಹಾಕಿ. ಇದಕ್ಕೆ ಸೋಯಾ ಸಾಸ್ ಸೇರಿಸಿ, ಅದಕ್ಕೆ ಮೆಣಸು ಮತ್ತು ಉಪ್ಪನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ.
7. ನಂತರ ಇದನ್ನು ಮಧ್ಯಮ ಗಾತ್ರದ ಉರಿಯಲ್ಲಿ ಇಟ್ಟು, ಇಡೀ ಮಿಶ್ರಣವು ಒಂದರ ಜೊತೆಗೆ ಒಂದು ಬೆರೆಯುವಂತೆ ಮಾಡಿಕೊಳ್ಳಿ. ಇದರ ಸುವಾಸನೆ ನಿಮಗೆ ತಿಳಿಯಬೇಕು ಅಲ್ಲಿಯವರೆಗೆ ಇದನ್ನು ಮುಂದುವರಿಸಿ. ಸುವಾಸನೆ ಬಂದ ಮೇಲೆ ಈ ಅಣಬೆ ಖಾದ್ಯವು ತಯಾರಾಗಿದೆ ಎಂದು ಭಾವಿಸಿ. ಇದನ್ನು ಮೊಸರು, ರಾಯಿತ ಮತ್ತು ಉಪ್ಪಿನ ಕಾಯಿಯ ಜೊತೆಗೆ ಬಡಿಸಿ.

ಪೋಷಕಾಂಶಗಳ ಪ್ರಮಾಣ
*ಮಶ್ರೂಮ್‍ಗಳಲ್ಲಿ ವಿಟಮಿನ್ ಡಿ ಪ್ರಮಾಣ ಅಧಿಕವಾಗಿರುತ್ತದೆ. ಇದು ನಿಮಗೆ ಸದೃಢವಾದ ಮೂಳೆಗಳನ್ನು, ಹಲ್ಲುಗಲನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಣಬೆಗಳು ಪೋಷಕಾಂಶ ಭರಿತವಾದ ತರಕಾರಿಗಳಾಗಿವೆ.
*ನೀವು ಒಂದು ವೇಳೆ ಸಸ್ಯಾಹಾರಿಗಳಾಗಿದ್ದಲ್ಲಿ, ಅಣಬೆಗಳನ್ನು ಹೆಚ್ಚಾಗಿ ತಿನ್ನಲು ಆರಂಭಿಸಿ. ಇದರಲ್ಲಿರುವ ಹಲವಾರು ಪೋಷಕಾಂಶಗಳು ಮಾಂಸದಲ್ಲಿರುವಷ್ಟೇ ಶಕ್ತಿಶಾಲಿಗಳಾಗಿವೆ. ಅನ್ನದಲ್ಲಿ ಸಹ ಅಧಿಕ ಪೋಷಕಾಂಶಗಳು ಇರುತ್ತವೆ, ವಿಶೇಷವಾಗಿ ಕಾರ್ಬೊಹೈಡ್ರೇಟ್‍ಗಳು, ಇದು ಸಹ ಶಕ್ತಿಶಾಲಿ ಮತ್ತು ಆರೋಗ್ಯಕರವಾಗಿರುತ್ತದೆ.

#ಸಲಹೆ
ಒಂದು ವೇಳೆ ನೀವು ಈರುಳ್ಳಿಗಳನ್ನು ಬೇಗ ಉರಿಯ ಬೇಕಾದಲ್ಲಿ, ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಉರಿಯಿರಿ. ನೀವು ಮಶ್ರೂಮ್ ರೈಸನ್ನು ಪ್ರೆಶ್ಶರ್ ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕಾದಲ್ಲಿ, ಇದು ಪಾತ್ರೆಗಿಂತ ಬೇಗ ಕುಕ್ಕರಿನಲ್ಲಿ ಬೇಯುತ್ತದೆ.

English summary

Spicy Mushroom Rice Recipe

Spicy mushroom rice is an Indian dish that is prepared by cooking mushrooms and rice till it becomes spicy and soft. The recipe for mushroom rice is popular in north India. You must be well acquainted with different mushroom recipes. But the recipe for this fried mushroom rice will surely be a hit amongst your family members.
X
Desktop Bottom Promotion