For Quick Alerts
ALLOW NOTIFICATIONS  
For Daily Alerts

ಆರೋಗ್ಯ ವರ್ಧನೆಗೆ ಸಹಕಾರಿ ಮಶ್ರೂಮ್ ಪೆಪ್ಪರ್ ರೈಸ್!

|

ನಮ್ಮ ಆರೋಗ್ಯದಲ್ಲಿ ರುಚಿಯಾದ ಆಹಾರಗಳು ಏರುಪೇರು ಉಂಟಾಗಲು ಕಾರಣವಾಗದಂತಹ ಆರೋಗ್ಯ ಪದ್ಧತಿಯನ್ನು ನಾವು ರೂಢಿಸಿಕೊಳ್ಳಬೇಕು. ಬೆಳಗ್ಗಿನ ತಿಂಡಿ ಹಿತಮಿತವಾಗಿ, ಮಧ್ಯಾಹ್ನದೂಟ ತುಸು ಪುಷ್ಕಳವಾಗಿ ರಾತ್ರಿಯೂಟ ಹೊಟ್ಟೆ ಭರ್ತಿಯಾಗದಂತೆ ಆಹಾರ ವಿಧಾನವನ್ನು ನಾವು ಅನುಸರಿಸಬೇಕಾದ್ದು ಆರೋಗ್ಯಪೂರ್ಣ ದೇಹಕ್ಕೆ ರುವಾರಿ.

ಆಹಾರ ಸೇವನೆಯೊಡನೆ ದೇಹಕ್ಕೆ ಅಗತ್ಯವಾದ ದೈಹಿಕ ವ್ಯಾಯಾಮಗಳನ್ನು ನಾವು ಪಾಲಿಸಬೇಕು. ಹೆಚ್ಚಿನವರಿಗೆ ರಾತ್ರಿ ಭೋಜನವನ್ನು ಮಿತವಾಗಿ ಹೇಗೆ ಸೇವಿಸಬೇಕೆಂಬುದು ತುಂಬಾ ಚಿಂತೆಯಾಗಿಬಿಟ್ಟಿರುತ್ತದೆ. ರಾತ್ರಿ ನಾವು ನಿದ್ದೆ ಮಾಡುವುದರಿಂದ ದೇಹಕ್ಕೆ ವ್ಯಾಯಾಮವಿರುವುದಿಲ್ಲ ಈ ಸಮಯದಲ್ಲಿ ಅತಿಯಾಗಿ ಆಹಾರ ಸೇವಿಸುವುದು ಹೊಟ್ಟೆ ಬಿರಿಯುವಂತೆ ಭೋಜನ ಮಾಡುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಇಲ್ಲಿದೆ ನೋಡಿ ನಿಮ್ಮ ರಾತ್ರಿ ಊಟವನ್ನು ಸುಗಮಗೊಳಿಸುವಂತಹ ಒಂದು ಖಾದ್ಯ. ಇದು ಮಾಡಲು ಸುಲಭ ಮತ್ತು ಇದನ್ನು ತಯಾರಿಸಲು ಅಧಿಕ ಸಮಯದ ಅವಶ್ಯಕತೆ ಸಹ ಬೇಕಾಗಿಲ್ಲ. ಈ ಖಾದ್ಯವನ್ನು ನೀವು ಮೆಚ್ಚಲು ಇರುವ ಪ್ರಮುಖ ಕಾರಣವೆಂದರೆ, ಇದನ್ನು ಅತಿ ಶೀಘ್ರವಾಗಿ ತಯಾರಿಸಬಹುದು. ಇಡೀ ದಿನ ಕೆಲಸ ಮಾಡಿ ಬಳಲಿ ಬೆಂಡಾಗಿ ಮನೆಗೆ ಬಂದ ಮೇಲೆ, ಮನೆಯವರಿಗೆ ಏನಾದರು ವಿಶೇಷವಾಗಿ ಮಾಡಿ ಹಾಕಬೇಕು ಎನಿಸಿದಲ್ಲಿ ನೀವು ಇದನ್ನು ಮಾಡಬಹುದು.

ಈ ಮಶ್ರೂಮ್ ಪೆಪ್ಪರ್ ರೈಸ್ ರೆಸಿಪಿಯು ತಕ್ಷಣಕ್ಕೆ ಮಾಡಿ ಮುಗಿಸಬಹುದಾದ ಖಾದ್ಯವಾಗಿದ್ದು, ಇದರಲ್ಲಿ ಅಧಿಕ ಪೋಷಕಾಂಶಗಳು ಸಹ ಇರುವುದು ಇದರ ಹೆಚ್ಚುಗಾರಿಕೆ. ಬನ್ನಿ ತಡ ಮಾಡದೆ ಇದನ್ನು ತಯಾರಿಸುವ ಬಗೆ ಹೇಗೆಂದು ತಿಳಿದುಕೊಂಡು ಬರೋಣ. ನಾಲಿಗೆಯ ರುಚಿ ತಣಿಸುವ ಮಶ್ರೂಮ್ ಪಲಾವ್!

Mushroom Pepper Rice Recipe

*ಪ್ಮೂರಮಾಣ:3 ಮಂದಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 25 ನಿಮಿಷಗಳು

ಅಗತ್ಯವಾಗಿರುವ ಪದಾರ್ಥಗಳು
*ಅನ್ನ - - 1 ½ ಕಪ್
*ಅಣಬೆ - 500 ಗ್ರಾಂ
*ಈರುಳ್ಳಿ - 1 (ಕತ್ತರಿಸಿದಂತಹುದು)
*ಮೆಣಸು - 2 ಟೀ.ಚಮಚ
*ಖಾರದಪುಡಿ - 1 ಟೀ.ಚಮಚ
*ಸಾಸಿವೆ ಪುಡಿ - 1 ಟೀ.ಚಮಚ
*ಕೊತ್ತಂಬರಿ ಪುಡಿ - 1 ಟೀ.ಚಮಚ
*ಹಸಿ ಮೆಣಸಿನಕಾಯಿಗಳು - 1 (sliced)
*ಬೆಣ್ಣೆ - 1 ಟೀ.ಚಮಚ
*ಎಣ್ಣೆ - 2 ಟೀ.ಚಮಚ
*ಉಪ್ಪು ರುಚಿಗೆ ತಕ್ಕಷ್ಟು ಡ್ರೈ ಮಶ್ರೂಮ್ ಮಂಚೂರಿಯನ್

ವಿಧಾನ
*ಮೊದಲು ನೀವು ಅನ್ನವನ್ನು ಪ್ರತ್ಯೇಕವಾದ ತಯಾರಿಸಿಕೊಳ್ಳಬೇಕು. ಇದಾದ ಮೇಲೆ, ಬೆಂದ ಅನ್ನವನ್ನು ಪಕ್ಕದಲ್ಲಿ ಆರಲು ಬಿಡಿ.
*ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಇದು ಕಾದ ಮೇಲೆ, ಇದಕ್ಕೆ ಕತ್ತರಿಸಿದ ಈರುಳ್ಳಿಗಳನ್ನು ಹಾಕಿ. ಅವುಗಳನ್ನು ಹೊಂಬಣ್ಣಕ್ಕೆ ಬರುವವರೆಗು ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಹಾಕಿ.
*ಈ ಎರಡು ಪದಾರ್ಥಗಳನ್ನು ಎಣ್ಣೆಯೊಂದಿಗೆ 5 ನಿಮಿಷಗಳ ಕಾಲ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಖಾರದ ಪುಡಿ, ಸಾಸಿವೆ ಪುಡಿ ಮತ್ತು ಕೊತ್ತಂಬರಿ ಪುಡಿ ಗಳನ್ನು ಬೆರೆಸಿ. ಈಗ ಎಲ್ಲಾ ಮಸಾಲೆಗಳನ್ನು ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳ ಜೊತೆಗೆ ಚೆನ್ನಾಗಿ ಉರಿಯಿರಿ.
*ಇದಕ್ಕೆ ಅಣಬೆಗಳನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸುತ್ತ ಚೆನ್ನಾಗಿ ಕಲೆಸಿಕೊಡಿ. ನಂತರ ಅಣಬೆಗಳ ಜೊತೆಗೆ ಪೆಪ್ಪರ್ ಪುಡಿಯನ್ನು ಹಾಕಿ, ಚೆನ್ನಾಗಿ ಕಲೆಸಿ ಕೊಡಿ.
*ಈ ಅನ್ನವು ಎಲ್ಲಾ ಪದಾರ್ಥಗಳ ಜೊತೆಗೆ ಸ್ವಲ್ಪ ಬೆರೆಯಲು ಬಾಣಲೆಯಲ್ಲಿಯೇ ಬಿಡಿ. ಅದಕ್ಕಾಗಿ ಒಂದು 10 ನಿಮಿಷ ಬೇಯಿಸಿ.
ಇದು ಮುಗಿದ ಮೇಲೆ, ಈ ಪೆಪ್ಪರ್ ಮಶ್ರೂಮ್ ರೈಸ್ ಮೇಲೆ ಉಪ್ಪನ್ನು ಹಾಕಿ. ಈಗ ನಿಮ್ಮ ಮುಂದೆ ಪೆಪ್ಪರ್ ಮಶ್ರೂಮ್ ರೈಸ್ ರೆಸಿಪಿ ತಯಾರಾಗಿದೆ. ಅನ್ನದ ಮೇಲೆ ಬೆಣ್ಣೆಯನ್ನು ಹಾಕಿ ಸವಿಯಲು ನೀಡಿ.

English summary

Mushroom Pepper Rice Recipe

Tired of preparing two dishes for the night? Here is one of the easiest dinner recipes you can prepare tonight. It is simple and does not take too much time too. What you would like most about this recipe is how quickly you can prepare it.
X
Desktop Bottom Promotion