For Quick Alerts
ALLOW NOTIFICATIONS  
For Daily Alerts

ರಂಜಾನ್ ಹಬ್ಬಕ್ಕಾಗಿ ವಿಶೇಷ ಅಡುಗೆ ಈರುಳ್ಳಿ ಅನ್ನ!

|

ಪವಿತ್ರ ಹಬ್ಬ ರಂಜಾನ್‌ನ ತಿಂಗಳು ಪ್ರಾರಂಭವಾಗುತ್ತಿವೆ. ವಿಶ್ವದಲ್ಲಿರುವ ಸಮಸ್ತ ಮುಸ್ಲಿಮ್ ಬಾಂಧವರು ಸೂರ್ಯಾಸ್ತವಾಗುವ ಮುನ್ನ ಆಹಾರವನ್ನು ಸೇವಿಸಿ ಇಡೀ ದಿನ ಉಪವಾಸವನ್ನು ಆಚರಿಸಿ ನಂತರ ಸಂಜೆಯ ಸಮಯದಲ್ಲಿ ಉಪವಾಸವನ್ನು ತ್ಯಜಿಸುತ್ತಾರೆ. ಆದ್ದರಿಂದ ನಿಮಗೆ ಸುಲಭದಲ್ಲಿ ಹಾಗೂ ಹೆಚ್ಚು ತ್ರಾಸದಾಯಕವಾಗಿರದ ಖಾದ್ಯವನ್ನು ತಯಾರಿಸಲು ಸಹಾಯಕವಾಗುವಂತೆ ಇಂದು ಮ್ಯಾಶ್‌ಕೋಲ್ ರೆಸಿಪಿಯೊಂದಿಗೆ ನಾವು ಬಂದಿದ್ದೇವೆ.

ಈ ಖಾದ್ಯವು ಸೌದಿ ಅರೇಬಿಯಾ ಪ್ರಾಂತ್ಯದಿಂದ ಬಂದಿರುವಂತದ್ದಾಗಿದೆ. ಅನ್ನವನ್ನು ಈರುಳ್ಳಿಯೊಂದಿಗೆ ಬೇಯಿಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ನಿಮ್ಮ ಇಫ್ತಾರ್ ಕೂಟಕ್ಕೆ ಈ ಮ್ಯಾಶ್‌ಕೋಲ್ ಅನ್ನ ವಿಶೇಷ ಸ್ವಾದವನ್ನು ನೀಡುವುದಂತೂ ಖಂಡಿತ.

Mashkoul: Rice With Onions Recipe For Ramzan

ಈ ಹಬ್ಬದ ತಿಂಗಳಿನ ಉಪವಾಸಕ್ಕೆ ವಿಶೇಷವಾಗಿ ಮತ್ತು ಆರಾಮದಾಯಕವಾಗಿ ಸಿದ್ಧಪಡಿಸಬಹುದಾದ ವಿಶೇಷ ಅನ್ನದ ಖಾದ್ಯ ಇದಾಗಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ. ಹಾಗಿದ್ದರೆ ಇನ್ನೇಕೆ ತಡ ಈ ವಿಶೇಷ ಮತ್ತು ಸೊಗಸಾಗಿರುವ ಅನ್ನದ ಖಾದ್ಯವನ್ನು ತಯಾರಿಸಿ ನಿಮ್ಮ ಉಪವಾಸ ವೃತವನ್ನು ಪವಿತ್ರವಾಗಿ ಕೈಗೊಳ್ಳಿ.

ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
1. ಬಾಸ್ಮತಿ ಅಕ್ಕಿ - 2 ಕಪ್‌ಗಳು
2. ಈರುಳ್ಳಿ - 2 (ಕತ್ತರಿಸಿದ್ದು)
3. ತುಪ್ಪ - 1/2 ಕಪ್
4.ನೀರು - 6 ಕಪ್‌ಗಳು
5. ಕೇಸರಿ - ಕೆಲವು ತುಂಡುಗಳು
6. ರೋಸ್ ವಾಟರ್ - 1 ಸ್ಪೂನ್
7. ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
* ದೊಡ್ಡ ಪಾತ್ರೆಯಲ್ಲಿ 6 ಕಪ್‌ಗಳಷ್ಟು ನೀರನ್ನು ಕುದಿಸಿ. ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಅಕ್ಕಿಯನ್ನು ಸೇರಿಸಿ.
* ಸಣ್ಣ ಉರಿಯಲ್ಲಿ ಅದಕ್ಕೆ ಮುಚ್ಚಿ ಮತ್ತು ಹತ್ತು ನಿಮಿಷಗಳ ಕಾಲ ಬೇಯಿಸಿ.
* ಈ ಸಮಯದಲ್ಲಿ, ತುಪ್ಪವನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಈರುಳ್ಳಿಯನ್ನು ಸೇರಿಸಿ ಫ್ರೈ ಮಾಡಿ.
*ನೀವು ಹುರಿದಿಟ್ಟ ಅರ್ಧದಷ್ಟು ಈರುಳ್ಳಿಯ ಮೇಲೆ ಬೇಯಿಸಿದ ಅನ್ನದಿಂದ ಪದರವನ್ನು ಮಾಡಿ.
* ಇನ್ನು ಅನ್ನವನ್ನು ಬಸಿದು ಈರುಳ್ಳಿಯ ಮೇಲೆ ಹರಡಿಕೊಳ್ಳಿ. ಅನ್ನದ ಮೇಲೆ ಸ್ವಲ್ಪ ರೋಸ್ ವಾಟರ್ ಮತ್ತು ಕೇಸರಿ ದಳಗಳನ್ನು ಚೆಲ್ಲಿ.
* ಈಗ ಮೇಲ್ಭಾಗದಲ್ಲಿ ಮತ್ತಷ್ಟು ಹುರಿದ ಈರುಳ್ಳಿಯನ್ನು ಹರಡಿ. ಬೇಕಿದ್ದಲ್ಲಿ ಅರ್ಧ ಕಪ್‌ನಷ್ಟು ನೀರನ್ನು ಕೂಡ ಸೇರಿಸಬಹುದು.
* ಪ್ಲಾಸ್ಟಿಕ್ ಹಾಳೆಯಿಂದ ಖಾದ್ಯವನ್ನು ಮುಚ್ಚಿ.
150 ಡಿಗ್ರಿಯಲ್ಲಿ ಓವನ್ ಅನ್ನು ಮುಂಚಿತವಾಗಿ ಬಿಸಿ ಮಾಡಿಕೊಳ್ಳಿ ಮತ್ತು ಅನ್ನವನ್ನು 7-8 ನಿಮಿಷಗಳ ಕಾಲ ಬೇಯಿಸಿ.
ರುಚಿಕರ ಮ್ಯಾಶ್‌ಕೋಲ್ ಅನ್ನ ಸವಿಯಲು ಸಿದ್ಧವಾಗಿದೆ. ಇದನ್ನು ಚಿಕನ್ ಕರಿ ಅಥವಾ ರುಚಿಕರ ಕಬಾಬ್‌ನೊಂದಿಗೆ ಸವಿಯಿರಿ

X
Desktop Bottom Promotion