For Quick Alerts
ALLOW NOTIFICATIONS  
For Daily Alerts

ರುಚಿಕರವಾಗಿರುವ ಮೊಸರು ಅನ್ನ ರೆಸಿಪಿ

By Manohar.v
|

ಆರೋಗ್ಯಕ್ಕೆ ಹಿತಕರವಾಗಿರುವ ಮೊಸರು ಅನ್ನವನ್ನು ಯಾರು ತಾನೇ ಮರೆಯಲು ಸಾಧ್ಯ ? ಇಂತಹ ಸ್ವಾದಿಷ್ಟ ಹಾಗೂ ಹಿತಕರವಾಗಿರುವ ಮೊಸರು ಅನ್ನ ನಿಮ್ಮ ಮಧ್ಯಾಹ್ನದ ಊಟವನ್ನು ಇನ್ನಷ್ಟು ರುಚಿಕರವಾಗಿಸುತ್ತದೆ.

ಇಂತಹ ಸ್ವಾದಿಷ್ಟವಾಗಿರುವ ರೆಸಿಪಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು, ಜೊತೆಗೆ ಇದಕ್ಕೆ ಬಳಸಬಹುದಾದ ಪದಾರ್ಥಗಳನ್ನು ನೀವು ಅಚ್ಚುಕಟ್ಟಾಗಿ ಬಳಸಿದರೆ ಅದರ ರುಚಿ ಇನ್ನಷ್ಟು ಸ್ವಾದಿಷ್ಟವಾಗಿರುವುದಲ್ಲಿ ಎರಡು ಮಾತಿಲ್ಲ.

ಹಾಗಾಗಿ ಬೋಲ್ಡ್ ಸ್ಕೈ ನಿಮಗಾಗಿ ಸುಲಭವಾಗಿ ಮಾಡಬಹುದಾದ ಮೊಸರು ಅನ್ನದ ವಿಧಾನವನ್ನು ಈ ಕೆಳಗೆ ನೀಡುತ್ತಿದೆ.

Delicious lip-smacking curdrice recipe

ಬೇಕಾಗುವ ಸಾಮಾಗ್ರಿಗಳು:

ವೈಟ್ ರೈಸ್ - 1 ಕಪ್

ಮೊಸರು - 4 ಕಪ್

ಹಾಲು - 1/2 ಕಪ್

ದಾಲಿಂಬೆ ಹಣ್ಣಿನ ಬೀಜ - 3-4 ಟೀ ಸ್ಪೂನ್

ಬೇವಿನ ಸೊಪ್ಪು : 5-6 ಎಲೆಗಳು

ಮೆಣಸಿನ ಕಾಯಿ - 2 ( ಕತ್ತರಿಸಲಾಗಿರುವ )

ಶುಂಠಿ - ಸ್ವಲ್ಪ (ಸಣ್ಣಗೆ ಕತ್ತರಿಸಲಾಗಿರುವ)

ಸಾಸಿವೆ ಬೀಜ - 1/2 ಟೀ ಸ್ಪೂನ್

ಕೆಂಪು ಮೆಣಸು - 1

ಕೊತ್ತೊಂಬರಿ ಸೊಪ್ಪು - ಸ್ವಲ್ಪ

ಉಪ್ಪು - ರುಚಿಗೆ ಬೇಕಾಗುವಷ್ಟು

ಮಾಡುವ ವಿಧಾನ:

ಅಕ್ಕಿಯನ್ನು 3-4 ಬಾರಿ ಚೆನ್ನಾಗಿ ತೊಳಿಯಿರಿ, ಹಾಗೂ ಅದಕ್ಕೆ ಬೇಕಾಗುವಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ.

ಇನ್ನೊಂದು ಪ್ಲೇಟ್‪ನಲ್ಲಿ ಸಣ್ಣಗೆ ಕತ್ತರಿಸಲಾಗಿರುವ ಮೆಣಸಿನಕಾಯಿಗಳು, ಕೊತ್ತೊಂಬರಿ ಸೊಪ್ಪು ಹಾಗೂ ದಾಲಿಂಬೆ ಬೀಜಗಳನ್ನು ಬೇರೆ ಬೇರೆಯಾಗಿ ಇಟ್ಟುಕೊಂಡಿರಿ .

ತದನಂತರ ಇನ್ನೊಂದು ಪಾತ್ರೆಗೆ ಬೆಂದಿರುವ ಅನ್ನವನ್ನು ಹಾಕಿ ಹಾಗೂ ಇದಕ್ಕೆ ಮೊಸರನ್ನು ಮಿಕ್ಸ್ ಮಾಡಿಕೊಳ್ಳಿ ಇದರ ಜೊತೆಗೆ ಮೊದಲೇ ಹೇಳಿರುವಂತೆ ಬೇರೆ ಬೇರೆಯಾಗಿ ಇಟ್ಟಿರುವ ಮೆಣಸಿನ ಕಾಯಿ, ಕೊತ್ತೊಂಬರಿ ಸೊಪ್ಪು, ದಾಲಿಂಬೆ ಬೀಜ, ಹಾಗೂ ರುಚಿಗೆ ಬೇಕಾಗುವಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ (ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಲು ಸೇರಿಸಿ)

ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದನಂತರ ಸಾಸಿವೆ, ಕತ್ತರಿಸಲಾಗಿರುವ ಶುಂಠಿ, ಕರಿಬೇವಿನ ಸೊಪ್ಪು, ಹಾಕಿ ಚೆನ್ನಾಗಿ ಹುರಿಯಿರಿ.

ನಂತರ ಇದನ್ನು ತಯಾರಿಸಲಾಗಿರುವ ಮೊಸರು ಅನ್ನಕ್ಕೆ ಮಿಕ್ಸ್ ಮಾಡಿಕೊಳ್ಳಿ.

ಸ್ವಾದಿಷ್ಟ ಹಾಗೂ ಹಿತಕರವಾಗಿರುವ ಮೊಸರು ಅನ್ನ ಸವಿಯಲು ಸಿದ್ಧ!

English summary

Delicious lip-smacking curdrice recipe

No one can easily forget that the taste of the curd rice. Most of the people prepare some of the most delicious and lip-smacking curdrice in their home only.
X
Desktop Bottom Promotion