For Quick Alerts
ALLOW NOTIFICATIONS  
For Daily Alerts

ಕಾಲಿಫ್ಲವರ್ ಪಲಾವ್ ರೆಸಿಪಿ

|

ಇದು ಹೂಕೋಸಿನ ಕಾಲ. ಮತ್ತೇಕೆ ತಡ ಈ ತರಕಾರಿಯನ್ನು ಬಳಸಿ ರುಚಿಕರವಾದ ತಿಂಡಿಗಳನ್ನು ಮಾಡಿ. ಹೂಕೋಸಿನಲ್ಲಿ ಹಲವು ಆರೋಗ್ಯಕಾರಿ ಗುಣಗಳಿವೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿದೆ. ಕೊಬ್ಬಿನಂಶ ಕಡಿಮೆಯಿದ್ದು ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಉತ್ತಮ. ಇದರಲ್ಲಿ ಫೈಬರ್ ಕೂಡ ಹೆಚ್ಚಿರುತ್ತದೆ.

ಇಂದು ನಾವು ನಿಮಗೆ ಗೋಬಿ ಪಲಾವ್ ಅಥವ ಕಾಲಿಫ್ಲವರ್ ಪಲಾವ್ ಮಾಡುವ ವಿಧಾನ ಹೇಳಿಕೊಡುತ್ತೇವೆ. ಇದನ್ನು ಮಾಡಲು ಸುಲಭ. ಹೂಕೋಸಿನೊಂದಿಗೆ ಇನ್ನಿತರ ತರಕಾರಿಗಳನ್ನು ಕೂಡ ಸೇರಿಸಬಹುದು. ಇದರಲ್ಲಿ ಪ್ರಮುಖವಾಗಿ ಹೂಕೋಸು ಮತ್ತು ಬಟಾಣಿಯನ್ನು ಬಳಸಲಾಗುತ್ತದೆ.

Delicious Cauliflower Pulao Recipe

ಬೇಕಾಗುವ ಸಾಮಗ್ರಿಗಳು

1.ಬಾಸ್ಮತಿ ಅಕ್ಕಿ- 1 ಕಪ್
2. ಹೂಕೋಸು- 1 (ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ)
3. ಬಟಾಣಿ- 1/2 ಕಪ್
4. ಈರುಳ್ಳಿ- 1 (ಕತ್ತರಿಸಿಕೊಳ್ಳಿ)
5. ಟೊಮೊಟೊ- 3 (ಕತ್ತರಿಸಿಕೊಳ್ಳಿ)
6. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀಚಮಚ
7. ಹಸಿಮೆಣಸಿನಕಾಯಿ- 2
8. ಅರಿಶಿಣ ಪುಡಿ- 1/2 ಟೀಚಮಚ
9. ಅಚ್ಚ ಖಾರದ ಪುಡಿ- 1 ಟೀಚಮಚ
10. ಜೀರಿಗೆ ಪುಡಿ- 1 ಟೀಚಮಚ
11. ಗರಂ ಮಸಾಲ- 1 ಟೀಚಮಚ
12. ಮೆಣಸು ಪುಡಿ- 1/2 ಟೀಚಮಚ
13. ಉಪ್ಪು ರುಚಿಗೆ ತಕ್ಕಷ್ಟು
14. ಚಕ್ಕೆ- 1
15. ಏಲಕ್ಕಿ- 2
16. ಬೇ ಲೀಫ್- 1
17. ಎಣ್ಣೆ- 1 ಟೀಚಮಚ
18. ನೀರು- 2 ಕಪ್

ಮಾಡುವ ವಿಧಾನ
1. ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
2. ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಕಾದ ನಂತರ ಜೀರಿಗೆ, ಬೇ ಲೀಫ್, ಚಕ್ಕೆ, ಏಲಕ್ಕಿಯನ್ನು ಹಾಕಿ ಹುರಿಯಿರಿ.
3. ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 3-4 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ.
4.ನಂತರ ಹೂಕೋಸು, ಬಟಾಣಿ, ಹಸಿಮೆಣಸಿನಕಾಯಿ ಹಾಕಿ 3-4 ನಿಮಿಷಗಳವರೆಗೆ ಹುರಿಯಿರಿ.
5. ನಂತರ ಟೊಮೊಟೊ, ಅರಿಶಿಣಪುಡಿ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಮೆಣಸು ಪುಡಿ, ಗರಂ ಮಸಾಲ ಪುಡಿ ಹಾಕಿ ಕೆಲವು ನಿಮಿಷಗಳವರೆಗೆ ಬೇಯಿಸಿ.
6. ನಂತರ ಬಾಸ್ಮತಿ ಅಕ್ಕಿಯನ್ನು ಹಾಕಿ 2-3 ನಿಮಿಷ ಕಲಸುತ್ತೀರಿ.
7. ನೀರನ್ನು ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 10-12 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ.
8. ಬೆಂದ ನಂತರ ಒಲೆಯನ್ನು ಆರಿಸಿ.

ರುಚಿಕರವಾದ ಕಾಲಿಫ್ಲವರ್ ಪಲಾವ್ ಸವಿಯಲು ಸಿದ್ಧ.

Read more about: rice ಅನ್ನ
English summary

Delicious Cauliflower Pulao Recipe

It is the season for cauliflower and many other lovely vegetables. So, grab this opportunity and use these healthy and tasty greens to make some mouthwatering delights.
Story first published: Friday, December 13, 2013, 10:04 [IST]
X
Desktop Bottom Promotion