For Quick Alerts
ALLOW NOTIFICATIONS  
For Daily Alerts

ಏನೇನೊ ಅನ್ನಕ್ಕಿಂತ ತೆಂಗಿನಕಾಯಿ ಅನ್ನವೇ ಲೇಸು

By Staff
|


ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳಿಗೆ ತಿಣುಕಾಡಬೇಕಾಗಿಲ್ಲ. ಸಂಜೆ ಇಲ್ಲ ಬೆಳಗಿನ ಉಪಹಾರಕ್ಕೆ ಕ್ಷಣ ಮಾತ್ರದಲ್ಲಿ ತಯಾರಿಸಿಕೊಳ್ಳಬಹುದು. ಚಿತ್ರಾನ್ನ, ಆ ಅನ್ನ, ಈ ಅನ್ನ ತಿಂದು ಬೇಸರವಾಗಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ ನಿಮ್ಮ ಪಾಕ ಪ್ರಾವೀಣ್ಯವನ್ನು ಪ್ರದರ್ಶಿಸಿ.

  • ಲಾವಣ್ಯ ಶಿವರಾಂ, ದಾವಣಗೆರೆ

ಅನ್ನ ಮಾಡುವ ಕೆಳಗಿನ ಪದಾರ್ಥಗಳ ಹೊಂದಿಸಿಕೊಳ್ಳಿ :
  • ಹಸಿ ತೆಂಗಿನ ತುರಿ : 1 ಲೋಟ
  • ಅಕ್ಕಿ : 1 ಲೋಟ
  • ತುಪ್ಪ : 2 ಚಮಚ
  • ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು : 1 ಚಮಚ
  • ಕರಿಬೇವು : ಒಗ್ಗರಣೆಗೆ ಆಗುವಷ್ಟು
  • ಉಪ್ಪು : ರುಚಿಗೆ ತಕ್ಕಷ್ಟು
  • ಸಾಸಿವೆ : ಅರ್ಧ ಚಮಚ
  • ಉದ್ದಿನ ಬೇಳೆ : 1 ಚಮಚ
  • ಕಡಲೆ ಬೇಳೆ : 1 ಚಮಚ
  • ಒಣ ಮೆಣಸಿನ ಕಾಯಿ : 4
  • ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ : 2
  • ಮುರಿದ ಗೋಡಂಬಿ : 1 ಚಮಚ

ಮಾಡುವ ವಿಧಾನ :

ಮೊದಲು ಹುಡಿಹುಡಿಯಾದ ಅನ್ನಕ್ಕೆ ತುಪ್ಪ ಹಾಗೂ ಉಪ್ಪನ್ನು ಬೆರಸಿ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾಯುತ್ತದ್ದಂತೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಗೋಡಂಬಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಹಾಗೆ ಬಿಡಿ.

ಆಮೇಲೆ ತೆಂಗಿನಕಾಯಿ ತುರಿಯನ್ನು ಬೆರೆಸಿ ಒಂದೆರಡು ನಿಮಿಷ ಹುರಿಯಿರಿ. ಈ ಮಿಶ್ರಣವನ್ನು ಅನ್ನಕ್ಕೆ ಬೆರೆಸಿ ಚೆನ್ನಾಗಿ ತಿರುವಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ. ಅಷ್ಟೆ ನಿಮ್ಮಿಷ್ಟದ ತೆಂಗಿನ ಕಾಯಿ ಅನ್ನ ಕ್ಷಣದಲ್ಲಿ ತಯಾರಾಗುತ್ತದೆ.


Story first published: Thursday, September 20, 2007, 18:29 [IST]
X
Desktop Bottom Promotion