For Quick Alerts
ALLOW NOTIFICATIONS  
For Daily Alerts

ಘಂ ಎನ್ನುತ್ತೆ ಹೈದರಾಬಾದ್ ದಮ್ ಬಿರಿಯಾನಿ

By Super
|
Hyderabad Dum Biryani Recipe
ಭಾರತದ ಎಲ್ಲಾ ಬಿರಿಯಾನಿಗಳಿಗೆ ಸೆಡ್ಡು ಹೊಡೆಯುವ ಹೈದರಾಬಾದಿನ ದಮ್ ಬಿರಿಯಾನಿ ಎಂದರೆ ಬಾಯಿ ನೀರೂರುತ್ತೆ. ಹಬೆಯಲ್ಲಿ ತಯಾರು ಮಾಡುವ ದಮ್ ಬಿರಿಯಾನಿ ರುಚಿಯಲ್ಲಂತೂ ಪಕ್ಕಾ. ಈ ಬಾಡೂಟ ಹೋಟೆಲ್ ಗಳಿಗೇ ಸರಿ, ಮನೆಯಲ್ಲಿ ಮಾಡೋದು ಕಷ್ಟ ಎಂದು ನೀವಂದುಕೊಳ್ಳಬಹುದು. ಮನೆಯಲ್ಲೇ ಹೈದರಾಬಾದ್ ದಮ್ ಬಿರಿಯಾನಿ ತಯಾರಿಸಬಹುದು. ಹೇಗೆ ಎಂದು ಮುಂದೆ ನೋಡಿ.

ಬಿರಿಯಾನಿಗೆ ಬೇಕಾಗುವ ಪದಾರ್ಥಗಳು:
* 500 ಗ್ರಾಂ ಚಿಕನ್
* 800 ಗ್ರಾಂ ಬಾಸುಮತಿ ಅಕ್ಕಿ
* 1/2 ಕಪ್ ಮೊಸರು
* 1 ಚಮಚ ಜೀರಿಗೆ
* 1 ಕಟ್ಟು ಕೊತ್ತಂಬರಿ ಮತ್ತು ಪುದೀನಾ
* 5 ಹಸಿರು ಮೆಣಸಿನಕಾಯಿ
* 1 ಚಮಚ ಕೆಂಪು ಮೆಣಸಿನ ಪುಡಿ
* 1 ಚಮಚ ಅರಿಶಿಣ
* 1/2 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
* 1 ಚಮಚ ಗರಂ ಮಸಾಲಾ ಪುಡಿ
* 2 ದೊಡ್ಡ ಈರುಳ್ಳಿ
* ಸ್ವಲ್ಪ ಕೇಸರಿ
* 1/4 ಕಪ್ ಹಾಲು
* ಎಣ್ಣೆ, ಉಪ್ಪು

ದಮ್ ಬಿರಿಯಾನಿ ತಯಾರಿಸುವ ವಿಧಾನ:
* ನೀರಿನಲ್ಲಿ ಅಕ್ಕಿಯನ್ನು ನೆನೆಸಿ ಒಂದೆಡೆ ಇಡಬೇಕು.

* ಚಿಕನನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು.

* ಈಗ ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ ಪುಡಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಮತ್ತು ಮೊಸರನ್ನು ಚೆನ್ನಾಗಿ ಕಲೆಸಬೇಕು.

* ಕೊತ್ತಂಬರಿ, ಪುದೀನಾ ಮತ್ತು ಹಸಿರು ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮಸಾಲೆ ಮಿಶ್ರಣಕ್ಕೆ ಬೆರೆಸಬೇಕು.

* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿದುಕೊಂಡು ಚಿಕನ್ ಗೆ ಬೆರೆಸಿ ಒಂದು ಗಂಟೆ ಕಾಲ ಹಾಗೆಯೇ ಬಿಡಬೇಕು. ಮೇಲೆ ಹೇಳಿದ ಮಸಾಲೆ ಮಿಶ್ರಣವನ್ನು ಬೆರೆಸಬೇಕು.

* ಪಾತ್ರೆಯಲ್ಲಿ ನೆನೆಸಿದ ಅಕ್ಕಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಗರಂ ಮಸಾಲೆ ಮತ್ತು ಬೇಯುವುದಕ್ಕೆ ಅಗತ್ಯದಷ್ಟು ನೀರು ಹಾಕಿ ಬೇಯಲು ಬಿಡಬೇಕು.

* ಅಕ್ಕಿ ಅರ್ಧ ಬೇಯುವವರೆಗೂ ಇದ್ದು, ನೀರನ್ನು ಬಸಿಯಬೇಕು. ಅನ್ನವನ್ನು ಬೇರೆ ತೆಗೆದಿಟ್ಟುಕೊಳ್ಳಬೇಕು.

* ಅದೇ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಸ್ವಲ್ಪ ಚಿಕನ್ ಮಿಶ್ರಣ ಮತ್ತು ಸ್ವಲ್ಪ ಅನ್ನ, ಹೀಗೆ ಒಂದಾದರೊಂದಂತೆ ತುಂಬುತ್ತಾ ಬರಬೇಕು.

* ಹಾಲಿನಲ್ಲಿ ಕೇಸರಿಯನ್ನು 1 ನಿಮಿಷ ನೆನೆಸಿ ಅನ್ನದ ಮೇಲೆ ಹಾಕಬೇಕು.

* ಈಗ ಪಾತ್ರೆಗೆ ಮುಚ್ಚುಳ ಮುಚ್ಚಿ 20 ನಿಮಿಷ ಹಬೆ ಬರುವ ತನಕ ಬೇಯಿಸಿದರೆ ದಮ್ ಬಿರಿಯಾನಿ ತಿನ್ನಲು ರೆಡಿಯಾಗಿರುತ್ತೆ.

ಬಿರಿಯಾನಿ ಜೊತೆ ಬೇಯಿಸಿದ ಮೊಟ್ಟೆ ಮತ್ತು ರಾಯತ ಇದ್ದರೆ ರುಚಿ ಇನ್ನೂ ಜೋರು.

English summary

Hyderabad Dum Biryani Recipe | Non Vegetarian Biryani | ಹೈದರಾಬಾದ್ ದಮ್ ಬಿರಿಯಾನಿ | ಬಿರಿಯಾನಿ ರೆಸಿಪಿ

Dum Biryani, especially the Hyderabadi Dum biryani makes everyone's mouth water. Among the many dishes offered in this cuisine, Hyderabad Dum Biryani is a sumptuous and grand dish. This biryani recipe is considered to be the most famous among the many celebrity recipes. Though this recipe involves considerable time in preparing, we have a tempting and tasty Hyderabad dum biryani recipe for you, which will leave you licking your fingers.
X
Desktop Bottom Promotion