For Quick Alerts
ALLOW NOTIFICATIONS  
For Daily Alerts

ಸುಲಭದಲ್ಲಿಯೆ ರೆಡಿ ಚೈನೀಸ್ ಫ್ರೈಡ್ ರೈಸ್

|
Chinese Fried Rice Recipe
ಇತರ ವಿದೇಶಿ ಮಾದರಿ ತಿಂಡಿಗಳಿಗಿಂತ ಚೈನೀಸ್ ಫುಡ್ ಭಾರತದಲ್ಲಿ ಜನಪ್ರಿಯತೆಯನ್ನು ಪಡೆದಿದೆ. ಅದಕ್ಕೆ ಕಾರಣ ಅವರ ರುಚಿಯಾದ ಮತ್ತು ವಿಭಿನ್ನವಾದ ಅಡುಗೆ. ಇವತ್ತು ನಾವು ಚೈನೀಸ್ ಫ್ರೈಡ್ ರೈಸ್ ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಅನ್ನ
* 2 ಈರುಳ್ಳಿ
* 1 ದೊಡ್ಡ ಮೆಣಸು
* 2-3 ಕ್ಯಾರೆಟ್
* ಹಸಿಮೆಣಸಿನ ಕಾಯಿ
* ಸೋಯಾ ಸಾಸ್
* ಟೊಮೆಟೊ ಸಾಸ್
* ಹಸಿಮೆಣಸಿನ ಕಾಯಿ ಸಾಸ್
* ರುಚಿಗೆ ತಕ್ಕ ಉಪ್ಪು
* ಕರಿಮೆಣಸಿನ ಪುಡಿ
* ಎಣ್ಣೆ

ತಯಾರಿಸುವ ವಿಧಾನ:

1. ಎಲ್ಲಾ ತರಕಾರಿಗಳನ್ನು ಉದ್ದವಾದ ಆಕಾರದಲ್ಲಿ ಕತ್ತರಿಸಿ.

2. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಹಾಕಿ ಹುರಿಯಬೇಕು. ಅದಕ್ಕೆ ಉಪ್ಪು, ಕರಿಮೆಣಸಿನ ಪುಡಿ, ಸೋಯಾ ಸಾಸ್, ಟೊಮೆಟೊ ಸಾಸ್ ಮತ್ತು ಹಸಿಮೆಣಸಿನ ಕಾಯಿ ಸಾಸ್ ಹಾಕಿ 2-3 ನಿಮಿಷ ಹುರಿಯಬೇಕು.

3. ಈಗ ಅದಕ್ಕೆ ಬೇಯಿಸಿದ ಅನ್ನವನ್ನು ಹಾಕಿ ಮಿಶ್ರ ಮಾಡಬೇಕು. ಫ್ರೈಡ್ ರೈಸ್ ಕಲರ್ ಬರಲಿಲ್ಲ ಅಂದರೆ ಇನ್ನೂ ಸ್ವಲ್ಪ ಸೋಯಾ ಸಾಸ್ ಹಾಕಿ 5 ನಿಮಿಷ ಬೇಯಿಸಬೇಕು.
ಫ್ರೈಡ್ ರೈಸ್ ಬಿಸಿಯಾಗಿರುವಾಗಲೆ ತಿನ್ನಿ.

English summary

Chinese Fried Rice Recipe | Healthy Lunch Recipe | ಚೈನೀಸ್ ಫ್ರೈಡ್ ರೈಸ್ ರೆಸಿಪಿ | ಮಧ್ಯಾಹ್ನಕ್ಕೆ ಆರೋಗ್ಯಕರ ಅಡುಗೆ

Chinese recipes basically comprises of soy sauce. To bring this Chinese flavour in your normal meal, you can simply add soy sauce with few vegetables. If you want to add a new taste to the white rice, try this Chinese fried rice recipe.
Story first published: Tuesday, March 6, 2012, 16:15 [IST]
X
Desktop Bottom Promotion