For Quick Alerts
ALLOW NOTIFICATIONS  
For Daily Alerts

ಸ್ವಾದದ ಘಮಲನ್ನು ಹೆಚ್ಚಿಸುವ ಮಾವಿನಕಾಯಿ ಕರಿ

|

ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವನ್ನು ಮೆಚ್ಚದವರು ಯಾರಿದ್ದಾರೆ ಹೇಳಿ. ಈಗಂತೂ ಹೇಳಿ ಕೇಳಿ ಮಾವಿನ ಸೀಸನ್. ಮಾವಿನ ಬೇರೆ ಬೇರೆ ತಳಿಗಳು ಅವುಗಳ ಗುಣಮಟ್ಟಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಕೆಜಿಗೆ ಇಪ್ಪತ್ತು ರೂಪಾಯಿಯಿಂದ ಹಿಡಿದು ಅರವತ್ತು - ಎಪ್ಪತ್ತು ರೂಪಾಯಿವರೆಗೂ ಮಾವು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

ಮಾವಿನಿಂದ ಖಾದ್ಯ ತಯಾರಿಸುವುದು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಾವಿನ ಚಟ್ನಿ, ರಸಂ, ತಂಬುಳಿ, ಹುಳಿ ಹೀಗೆ ವಿವಿಧ ಬಾಯಿ ಚಪಲವನ್ನು ತೀರಿಸುವ ಮಾವಿನ ರೆಸಿಪಿಗಳನ್ನು ತಯಾರಿಸಬಹುದು. ಅಂತಹುದೇ ಮಾವಿನ ಕಾಯಿ ಒಂದು ರಸಭರಿತ ಖಾದ್ಯದೊಂದಿಗೆ ನಾವು ನಿಮ್ಮ ಮುಂದೆ ಬಂದಿದ್ದು ಇದು ನಿಮ್ಮ ಬಾಯಲ್ಲಿ ನೀರೂರಿಸುವುದು ಖಂಡಿತ. ಬನ್ನಿ ಹಾಗಿದ್ದರೆ ಈ ಖಾದ್ಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ದಿಢೀರ್ ರುಚಿಗೆ ಸಾಥ್ ನೀಡುವ ಮಾವಿನ ಹಣ್ಣಿನ ಚಿತ್ರಾನ್ನ

Yummy Raw Mango Curry Recipe

*ಪ್ರಮಾಣ: 3
*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು

ಬೇಕಾಗಿರುವ ಸಾಮಾಗ್ರಿ
*ಜೀರಿಗೆ - 1/2 ಚಮಚ
*ಎಣ್ಣೆ - 1 ಚಮಚ
*ಬೆಲ್ಲ - 1 ಚಮಚ
*ಕೆಂಪು ಮೆಣಸು - 6
*ಉಪ್ಪು - 3/4 ಚಮಚ
*ತೆಂಗಿನ ತುರಿ - 1/2 ತುಂಡು
*ಈರುಳ್ಳಿ - 2 ಹೆಚ್ಚಿದ್ದು
*ಮಾವಿನ ಕಾಯಿ - 250 ಗ್ರಾಮ್‎ಗಳು
*ಬೆಳ್ಳುಳ್ಳಿ - 6 ಎಸಳು
*ಕೊತ್ತಂಬರಿ ಬೀಜ - 1 ಚಮಚ
*ಅರಿಶಿನ ಹುಡಿ - 1/2 ಚಮಚ
*ಶುಂಠಿ - 1 ಇಂಚು
*ಉಪ್ಪು ರುಚಿಗೆ ತಕ್ಕಷ್ಟು
*ನೀರು - 1 ಕಪ್

ಮಾಡುವ ವಿಧಾನ
1. ಇನ್ನು ಮಾವಿನಹಣ್ಣನ್ನು ಚೆನ್ನಾಗಿ ತೊಳೆದುಕೊಂಡು, ಸಣ್ಣ ತುಂಡುಗಳನ್ನಾಗಿ ಕಾಯಿಯನ್ನು ಕತ್ತರಿಸಿಕೊಳ್ಳಿ.
2. ಈಗ ತೆಂಗಿನ ತುರಿ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಮತ್ತು ಕೊತ್ತಂಬರಿ ಬೀಜವನ್ನು ಅರೆದುಕೊಳ್ಳಿ.
3. ಇನ್ನು ತಳ ಆಳವಿರುವ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಿ.
4. ಇದೀಗ ರುಬ್ಬಿದ ಮಿಶ್ರಣವನ್ನು ಸೇರಿಸಿ ಹುರಿದುಕೊಳ್ಳಿ. (ಮಸಾಲೆಯಿಂದ ಎಣ್ಣೆ ಬಿಡುವವರೆಗೆ ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ)
5. ಈಗ ಕತ್ತರಿಸಿದ ಮಾವಿನ ಕಾಯಿ ಮತ್ತು ಬೆಲ್ಲವನ್ನು ಬಾಣಲೆಗೆ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6. ತದನಂತರ ಬಾಣಲೆಗೆ ಒಂದು ಲೋಟದಷ್ಟು ನೀರು ಸೇರಿಸಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
7. ಮಧ್ಯಮ ಉರಿಯಲ್ಲಿ ಮಾವಿನ ಕಾಯಿ ಪದಾರ್ಥವನ್ನು ಬೇಯಿಸಿ. ಮಾವಿನ ತುಂಡುಗಳು ಮೆತ್ತಗಾಗುವರೆಗೂ ಬೇಯಿಸಿ.

English summary

Yummy Raw Mango Curry Recipe

The king of fruits is everyone's favourite. Mango is loved by all and in any form. The traditional mango rice in South India is a must preparation in homes during the sweet season. This raw mango curry is easy to prepare and though it is a vegetarian dish, you can transform it by adding diced boneless chicken to enhance the taste.
Story first published: Saturday, May 30, 2015, 13:02 [IST]
X
Desktop Bottom Promotion