For Quick Alerts
ALLOW NOTIFICATIONS  
For Daily Alerts

ರುಚಿಕರವಾದ ತೆಂಗಿನಕಾಯಿ ರೆಸಿಪಿಗಳು

By Manohar .V
|

ತೆಂಗಿನಕಾಯಿನಿಂದ ಮಾಡಲಾಗುವ ಖಾದ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ? ತೆಂಗಿನಕಾಯಿ ಇಲ್ಲದೆ ಯಾವುದೇ ಪದಾರ್ಥಗಳನ್ನು ಪರಿಗಣಿಸಲು ಕೂಡ ಸಾಧ್ಯವಾಗುವುದಿಲ್ಲ. ಅದರಲ್ಲೂ ದಕ್ಷಿಣ ಭಾರತದ ಅಡುಗೆಯಲ್ಲಿ ತೆಂಗಿನಕಾಯಿ ತನ್ನದೇ ಆದ ಛಾಪು ಮೂಡಿಸಿದೆ !

ಭಾರತದ ಎಲ್ಲಾ ಕಡೆಗಳಲ್ಲಿಯೂ, ತೆಂಗಿನಕಾಯಿನಿಂದ ವಿವಿಧ ರೀತಿಯ ರುಚಿಕರವಾದ ಅಡುಗೆಯನ್ನು ಮಾಡಲು ಬಯಸುತ್ತಾರೆ, ಚಿಕನ್, ಮಟನ್, ಮೊಟ್ಟೆ, ಹಾಗೂ ಯಾವುದೇ ತರಕಾರಿ ಐಟಂಗಳ ತಯಾರಿಕೆಯಲ್ಲಿ ಕೂಡ ತೆಂಗಿನ ಕಾಯಿಯ ಸ್ವಾದವು ಅದರ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.

ಹಾಗಾಗಿ ಬೋಲ್ಡ್ ಸ್ಕೈ ತೆಂಗಿನಕಾಯಿನಿಂದ ಮಾಡಲಾಗಿರುವ ರುಚಿಕರವಾದ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ, ಬನ್ನಿ ನೀವು ಕೂಡ ತೆಂಗಿನಕಾಯಿನಿಂದ ಮಾಡಲಾಗಿರುವ ರೆಸಿಪಿಗಳನ್ನು ಮಾಡಲು ಪ್ರಯತ್ನಿಸಿ.

ತೆಂಗಿನಕಾಯಿಯ ದಾಲ್:

ತೆಂಗಿನಕಾಯಿಯ ದಾಲ್:

ಸಸ್ಯಹಾರಿ ಜನರಿಗೆ ಅಂತೂ ಹೇಳಿ ಮಾಡಿಸಿದಂತಿರುವ ಈ ತೆಂಗಿನಕಾಯಿ ರೆಸಿಪಿ, ಅವರ ನಾಲಿಗೆಯ ರುಚಿಯನ್ನು ಹೆಚ್ಚಿಸುವಲ್ಲಿ ಎರಡು ಮಾತಿಲ್ಲ! ಇದು ಕೇವಲ ಕೆನೆಭರಿತದಿಂದ ಮಾತ್ರ ಕೂಡಿರುವುದಿಲ್ಲ ಬದಲಾಗಿ, ಇನ್ನಷ್ಟು ರುಚಿಕರವಾಗಿರುತ್ತದೆ. ಭಾರತೀಯ ಶೈಲಿಯು ಪ್ರತಿಯೊಂದು ಖಾದ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಮತ್ತು ಇನ್ನಷ್ಟು ರುಚಿಕರವನ್ನಾಗಿಸುತ್ತದೆ, ಅಂತೆಯೇ ಖಾರದಿಂದ ಕೂಡಿರುವ ಹಾಗೂ ಸ್ವಾದಿಷ್ಟ ಸುವಾಸನೆಯುಕ್ತ ತೆಂಗಿನಕಾಯಿ ಮಿಶ್ರಿತ ಈ ರೆಸಿಪಿಯು, ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.

ತೆಂಗಿನಕಾಯಿ ಮಟನ್ ಪದಾರ್ಥ:

ತೆಂಗಿನಕಾಯಿ ಮಟನ್ ಪದಾರ್ಥ:

ವಾವ್ ! ದಕ್ಷಿಣ ಭಾರತದ ಶೈಲಿಯಲ್ಲಿ ಮಾಡಲಾಗುವ ಖಾರ ಮಿಶ್ರಿತ ಮಟನ್ ಪದಾರ್ಥವು, ನಾಲಿಗೆಯ ರುಚಿಯನ್ನು ತಣಿಸುವುದರಲ್ಲಿ ಎರಡು ಮಾತಿಲ್ಲ ! ಅದರಲ್ಲೂ ದಕ್ಷಿಣ ಭಾರತದ ಅಡುಗೆಯಲ್ಲಿ ತೆಂಗಿನಕಾಯಿ ಹಾಗೂ ಬೇವಿನ ಸೊಪ್ಪು ಬಳಸುವುದು ಸಾಮಾನ್ಯ. ಅಲ್ಲದೆ ಇಂತಹ ಡಿಶ್ ಅನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು. ಇವುಗಳೆರಡು ಪದಾರ್ಥದ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ತೆಂಗಿನಕಾಯಿನಿಂದ ಮಾಡಲಾಗುವ ಈ ರುಚಿಕರವಾದ ಸ್ವಾದವು ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಹೆ್ಚ್ಚಿಸಲಿದೆ.

ತೆಂಗಿನಕಾಯಿ ಎಗ್ ಮಸಾಲ:

ತೆಂಗಿನಕಾಯಿ ಎಗ್ ಮಸಾಲ:

ತೆಂಗಿನಕಾಯಿನಿಂದ ಮಾಡಲಾಗಿರುವ ಎಗ್ ಮಸಾಲವನ್ನು ನೀವು ಪ್ರಯತ್ನಿಸಿರುವಿರಾ? ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ ! ರುಚಿಕರವಾದ ಹಾಗೂ ಸ್ವಾದಿಷ್ಟವಾದ ಈ ರೆಸಿಪಿಯು ಎಗ್ ಮಸಾಲದ ರುಚಿಯನ್ನು ಇನ್ನಷ್ಟು ಸ್ವಾದಿಷ್ಟಭರಿತವಾಗಿರುತ್ತದೆ.

ತೆಂಗಿನಕಾಯಿನಿಂದ ಮಾಡಲಾಗಿರುವ ಮೀನಿನ ಪದಾರ್ಥ:

ತೆಂಗಿನಕಾಯಿನಿಂದ ಮಾಡಲಾಗಿರುವ ಮೀನಿನ ಪದಾರ್ಥ:

ದಕ್ಷಿಣ ಭಾರತದಲ್ಲಿ ಮೀನಿನ ಪದಾರ್ಥವನ್ನು ವಿವಿಧ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ, ಅದರಲ್ಲಿಯೂ ತೆಂಗಿನಕಾಯಿ ಮಿಶ್ರಿತ ಪದಾರ್ಥವು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೇರಳ ಶೈಲಿಯಲ್ಲಿ ಮಾಡಲಾಗುವ ಇಂತಹ ಮೀನಿನ ರೆಸಿಪಿಗೆ ಹಿತಕರ ಹಾಗೂ ಪರಿಮಳಯುಕ್ತ ತೆಂಗಿನ ಹಾಲನ್ನು ಸೇರಿಸಿದರೆ ಅದರ ರುಚಿ ಇನ್ನಷ್ಟು ಸ್ವಾದಿಷ್ಟಭರಿತವಾಗಿರುತ್ತದೆ.

ತೆಂಗಿನಕಾಯಿಯ ಟೊಮೇಟೋ ಚಟ್ನಿ:

ತೆಂಗಿನಕಾಯಿಯ ಟೊಮೇಟೋ ಚಟ್ನಿ:

ವಾವ್ ! ಸ್ವಾದಿಷ್ಟಭರಿತವಾದ ಈ ಚಟ್ನಿಯನ್ನು ಇಡ್ಲಿ, ದೋಸೆ, ವಡೆಗಳ ಜೊತೆ ತಿನ್ನುವುದಕ್ಕೆ ಇನ್ನೂ ಮಜವಾಗಿರುತ್ತದೆ. ಖಾರ ಹಾಗೂ ಹುಳಿ ಮಿಶ್ರಿತ ಈ ಚಟ್ನಿಯು ಬಾಯಿಯಲ್ಲಿ ನೀರೂರಿಸುತ್ತದೆ. ತೆಂಗಿನಕಾಯಿನಿಂದ ಹಲವು ರೀತಿಯ ಪದಾರ್ಥಗಳನ್ನು ಬಳಸಿಕೊಂಡು ಅನೇಕ ರೀತಿಯ ಚಟ್ನಿಯನ್ನು ಮಾಡಬಹುದು ಉದಾಹೆರಣೆಗೆ ಕೊತ್ತಂಬರಿ ಮತ್ತು ಕೆಂಪು ಮೆಣಸಿನಕಾಯಿಗಳು, ಟೊಮೇಟೋ ಇತ್ಯಾದಿ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಇಲ್ಲದೆ ಚಟ್ನಿಯನ್ನು ಊಹಿಸಲು ಸಾಧ್ಯವಿಲ್ಲ!

ತೆಂಗಿನಕಾಯಿ ಹಾಲಿನೊಂದಿಗೆ ಚಿಕನ್ ರೆಸಿಪಿ:

ತೆಂಗಿನಕಾಯಿ ಹಾಲಿನೊಂದಿಗೆ ಚಿಕನ್ ರೆಸಿಪಿ:

ತೆಂಗಿನಕಾಯಿ ಹಾಲು ಮಿಶ್ರಿತ ಈ ರೆಸಿಪಿಯು ನಿಮ್ಮ ಬಾಯಿಯಲ್ಲಿ ನೀರೂರಿಸುವುದರಲ್ಲಿ ಎರಡು ಮಾತಿಲ್ಲ. ಚಿಕನ್ ರೆಸಿಪಿಗೆ ತಾಜಾ ತೆಂಗಿನ ಕಾಯಿ ಹಾಲನ್ನು ಸೇರಿಸಿದರೆ ಅದರ ರುಚಿ ಇನ್ನಷ್ಟು ಸ್ವಾದಿಷ್ಟಭರಿತವಾಗಿರುತ್ತದೆ.

English summary

Yummilicious Coconut Recipes To Try

Coconut is a wonder fruit. The taste of this fruit is such that it adds a delicious flavour to whatever it is cooked with. In South India, no dish is deemed complete without adding coconut in one or the other form.
X
Desktop Bottom Promotion