For Quick Alerts
ALLOW NOTIFICATIONS  
For Daily Alerts

ಟೊಮೆಟೊ ಪಪ್ಪು: ಆಂಧ್ರ ಶೈಲಿಯ ಕರಿ

|

ಟೊಮೆಟೊ ಪಪ್ಪು ಆಂಧ್ರ ಕಡೆಯ ಅಡುಗೆಯಾಗಿದೆ. ಇದು ಬೆಜ್ ಅಡುಗೆಯಾಗಿದ್ದು ಖಾರ ಪ್ರಿಯರಿಗೆ ಇಷ್ಟವಾಗುವುದು. ಈ ಅಡುಗೆ ಬೇಳೆ ಸಾರಿನಷ್ಟೇ ಸುಲಭವಾಗಿ ಮಾಡಬಹುದಾದ ಆಹಾರವಾಗಿದೆ.

ಈ ಅಡುಗೆಯನ್ನು 2 ರೀತಿಯಲ್ಲಿ ತಯಾರಿಸಬಹುದು. ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿ ನಂತರ ಟೊಮೆಟೊ ಹಾಕಿ ಮಾಡಬಹುದು ಅಥವಾ ಬೇಳೆ ಮತ್ತು ಟೊಮೆಟೊವನ್ನು ಜೊತೆಯಲ್ಲಿ ಹಾಕಿ ಬೇಯಿಸಿ ನಂತರ ಒಗ್ಗರಣೆ ಕೊಟ್ಟು ಈ ಸಾರು ತಯಾರಿಸಬಹುದು.

ಆಂಧ್ರ ಶೈಲಿಯ ಟೊಮೆಟೊ ಪಪ್ಪಿನ ರೆಸಿಪಿ ನೋಡಿ ಇಲ್ಲಿದೆ:

Tomato Pappu: Andhra Style Dal Recipe

ಬೇಕಾಗುವ ಸಾಮಾಗ್ರಿಗಳು
ತೊಗರಿಬೇಳೆ
ಈರುಳ್ಳಿ
ಒಂದು ಇಂಚಿನಷ್ಟಿರುವ ಶುಂಠಿ
ಹಸಿ ಮೆಣಸಿನಕಾಯಿ 3
ಟೊಮೆಟೊ 3
ಅರಿಶಿಣ ಪುಡಿ ಅರ್ಧ ಚಮಚ
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ
ಒಣ ಮೆಣಸು 2
ಸಾಸಿವೆ 1 ಚಮಚ
ಜೀರಿಗೆ 1 ಚಮಚ
ಬೆಳ್ಳುಳ್ಳಿ ಎಸಳು 4
ಚಿಟಿಕೆಯಷ್ಟು ಇಂಗು
ತುಪ್ಪ 1 ಚಮಚ

ತಯಾರಿಸುವ ವಿಧಾನ:

* ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.

* ಈಗ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆಯನ್ನು ಹಾಕಿ. ಸಾಸಿವೆ ಚಟಾಪಟ ಅಂತ ಶಬ್ದ ಮಾಡುವಾಗ ಜೀರಿಗೆ ಹಾಕಿ ಅದಕ್ಕೆ ಒಣ ಮೆಣಸನ್ನು ಮುರಿದು ಹಾಕಿ. ನಂತರ ಬೆಳ್ಳುಳ್ಳಿ ಹಾಕಬೇಕು. ಶುಂಠಿಯನ್ನು ಜಜ್ಜಿ ಹಾಕಿ.

* ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹೊತ್ತು ಹುರಿದು ಅದಕ್ಕೆ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಸೌಟ್ ನಿಂದ ಅಡಿಸಿ, ನಂತರ ಬೇಳೆ ಹಾಕಿ, ಅರಿಶಿಣ ಪುಡಿ ಹಾಕಿ, ಅರ್ಧ ಕಪ್ ನೀರು ಸೇರಿಸಿ ಸಾರನ್ನು ಕುದಿಸಿ. ನಂತರ ಉಪ್ಪು ನೋಡಿ, ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಪಪ್ಪು ರೆಡಿ.

English summary

Tomato Pappu: Andhra Style Dal Recipe | Variety Of Curry Recipe | ಟೊಮೆಟೊ ಪಪ್ಪು ರೆಸಿಪಿ | ಅನೇಕ ಬಗೆಯ ಸಾರಿನ ರೆಸಿಪಿ

Tomato pappu is a relatively simple dal recipe. It will take about 20 minutes to make this Andhra recipe ready to eat. You can easily prepare withing minutes.
X
Desktop Bottom Promotion