For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಸ್ಪೈಸಿ ಟೊಮೇಟೊ ದಾಲ್ ರೆಸಿಪಿ

|

ಟೊಮೇಟೊ ಸಿಹಿಯಾದ, ರಸದಿಂದ ಕೂಡಿದ ಮತ್ತು ರುಚಿಕರವಾದ ಹಣ್ಣಾಗಿದೆ. ಇದು ಸಾಕಷ್ಟು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ವಿಟಮಿನ್ ಎ, ಸಿ, ಕೆ, ಫೋಲೆಟ್ ಮತ್ತು ಪೊಟ್ಯಾಶಿಯಂ ಅನ್ನು ಒಳಗೊಂಡು ಸಂಪದ್ಭರಿತವಾಗಿದೆ.

ಟೊಮೇಟೊ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ನಿಮ್ಮ ಮೂಳೆಗಳನ್ನು ಸುದೃಢವಾಗಿಸುತ್ತದೆ. ಆದ್ದರಿಂದಲೇ ಇಂದಿನ ಲೇಖನದಲ್ಲಿ ರುಚಿಕರವಾದ ಟೊಮೇಟೊ ದಾಲ್ ರೆಸಿಪಿಯನ್ನು ನೀಡುತ್ತಿದ್ದು ಇದನ್ನು ನೀವು ಟ್ರೈ ಮಾಡಲೇಬೇಕು. ತಮ್ಮ ಆಹಾರ ಸರಳವಾಗಿ ರುಚಿಕರವಾಗಿ ಇರಬೇಕೆಂದು ಬಯಸುವವರಿಗೆ ಟೊಮೇಟೊ ದಾಲ್ ಒಂದು ಸ್ವಾದಿಷ್ಟ ಖಾದ್ಯವಾಗಿದೆ.

Spicy Tomato Dal Recipe

ಇದನ್ನು ನೀವು ಅನ್ನ ಮತ್ತು ಚಪಾತಿಯೊಂದಿಗೆ ಬೆರೆಸಿ ಸೇವಿಸಬಹುದು. ನಿಮ್ಮ ಟೊಮೇಟೊ ದಾಲ್ ಅನ್ನು ಇನ್ನಷ್ಟು ರುಚಿಕರವನ್ನಾಗಿಸಲು, ಪನ್ನೀರ್ ಅಥವಾ ಸೋಯಾ ಕ್ಯೂಬ್ ಅನ್ನು ಇದಕ್ಕೆ ಸೇರಿಸಬಹುದು. ಬಾದಾಮಿಯನ್ನು ಕೂಡ ಇದಕ್ಕೆ ಸೇರಿಸಿ ಇನ್ನಷ್ಟು ರುಚಿಕರ ಮತ್ತು ಸ್ವಾದಿಷ್ಟಗೊಳಿಸಬಹುದು.

ಪ್ರಮಾಣ:2
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಬೊಂಬಾಟ್ ಮೊಟ್ಟೆ ರೆಸಿಪಿಯೊಂದಿಗೆ ದಾಲ್ ತಡ್ಕಾ

ಸಾಮಾಗ್ರಿಗಳು:
*ಈರುಳ್ಳಿ - 1 (ಕತ್ತರಿಸಿದ್ದು)
*ಕ್ಯಾರೇಟ್ - 1 (ಕತ್ತರಿಸಿದ್ದು)
*ಹಸಿಮೆಣಸು - 4 (ಕತ್ತರಿಸಿದ್ದು)
*ಮಧ್ಯಮ ಗಾತ್ರದ ಟೋಮೇಟೊ - 4 (ಕತ್ತರಿಸಿದ್ದು)
*ದಾಲ್ - 1/2 ಕಪ್ (ನೆನೆಸಿದ್ದು)
*ಬೆಳ್ಳುಳ್ಳಿ - 3 (ಜಜ್ಜಿದ್ದು)
*ಶುಂಠಿ - 1 ಇಂಚಿನದ್ದು
*ತೆಂಗಿನ ತುರಿ - 1/2 ಕಪ್
*ಸಾಸಿವೆ - 1/2 ಸ್ಪೂನ್
*ಅರಶಿನ ಹುಡಿ - 1/2 ಸ್ಪೂನ್
*ಜೀರಿಗೆ - 1/2 ಸ್ಪೂನ್
*ಇಂಗು - 1/2 ಸ್ಪೂನ್
*ಲಿಂಬೆ - 1
*ಕರಿಬೇವಿನೆಲೆ - 4
*ಬಾದಾಮಿ - 3

ಮಾಡುವ ವಿಧಾನ:
1. ಪ್ಯಾನ್ ಅನ್ನು ತೆಗೆದುಕೊಂಡು 1/2 ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಇದಕ್ಕೆ ಸಾಸಿವೆ, ಜೀರಿಗೆ, ಹಸಿಮೆಣಸು, ಕಪ್ಪು ಉದ್ದಿನಬೇಳೆಯನ್ನು ಹಾಕಿ. ಒಗ್ಗರಣೆ ಸಿದ್ಧಪಡಿಸಿ.

2. ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೇಟ್ ಮತ್ತು ಟೊಮೇಟೊಗಳನ್ನು ಉಪ್ಪು, ಇಂಗು ಮತ್ತು ಅರಶಿನ ಪುಡಿಯೊಂದಿಗೆ ಸೇರಿಸಿ ಪ್ಯಾನ್‌ಗೆ ಹಾಕಿ ಮತ್ತು ಚೆನ್ನಾಗಿ ಹುರಿದುಕೊಳ್ಳಿ.

3. ದಾಲ್ ಅನ್ನು ಸೇರಿಸಿ ಮತ್ತು ಸ್ವಲ್ಪ ಸಮಯ ಹುರಿದುಕೊಳ್ಳಿ.

4. 2 ಕಪ್ ನೀರಿನೊಂದಿಗೆ ಕರಿಬೇವಿನೆಲೆಯನ್ನು ಸೇರಿಸಿ ಮತ್ತು ಬೇಳೆ ಬೇಯುವವರೆಗೆ ಮುಚ್ಚಳ ಮುಚ್ಚಿ.

5. ಗ್ರೇವಿ ನಿಮಗೆ ದಪ್ಪನಾಗಿ ಕಂಡುಬಂದಲ್ಲಿ ಸ್ವಲ್ಪ ನೀರು ಸೇರಿಸಿ ಇದನ್ನು ತೆಳುವಾಗಿಸಿ.

6. ಸಣ್ಣ ಪ್ಯಾನ್‌ನಲ್ಲಿ ಬಾದಾಮಿಯನ್ನು ಹುರಿದುಕೊಳ್ಳಿ.

7. ತೆಂಗಿನ ತುರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ ಮತ್ತು ಬೇಯಿಸಿದ ಬೇಳೆಗೆ ಸೇರಿಸಿ.

8. 2-3 ನಿಮಿಷಗಳ ಕಾಲ ಬೇಯಿಸಿ ಮತ್ತು ಬಾದಾಮಿಗಳೊಂದಿಗೆ ಅಲಂಕರಿಸಿ.

ಟೊಮೇಟೊ ದಾಲ್ ರೆಸಿಪಿ ಸಿದ್ಧವಾಗಿದೆ. ಅನ್ನ ಅಥವಾ ಚಪಾತಿಯೊಂದಿಗೆ ಇದನ್ನು ಸೇವಿಸಿ.

English summary

Spicy Tomato Dal Recipe

Tomatoes are sweet, juicy, and delicious. They are of great benefit for health. Tomatoes are a great source of Vitamin A, C, K, folate and potassium.
X
Desktop Bottom Promotion