For Quick Alerts
ALLOW NOTIFICATIONS  
For Daily Alerts

ಘಮಘಮಿಸುವ ಸಿಹಿ ಕುಂಬಳ ಕಾಯಿ ಸಾಂಬಾರ್

By manu
|

ಸಾಮಾನ್ಯವಾಗಿ ಇತರ ಹಬ್ಬಗಳಲ್ಲಿ ತಯಾರಿಸುವ ಖಾದ್ಯಗಳಿಗೂ ನವರಾತ್ರಿಗಾಗಿ ತಯಾರಿಸುವ ಖಾದ್ಯಗಳಿಗೂ ಕೊಂಚ ವ್ಯತ್ಯಾಸವಿದೆ. ಏಕೆಂದರೆ ನವರಾತ್ರಿಯ ಸಮಯದಲ್ಲಿ ಉಪವಾಸವಿರಬೇಕಾದುದರಿಂದ ಪೌಷ್ಠಿಕವಾದ ಆಹಾರ ಬೇಕು. ಹಾಗೆಂದು ಪ್ರತಿದಿನವೂ ನಿತ್ಯದ ಅಡುಗೆಯಾದ ಆಲೂ ಪಲ್ಯವನ್ನೇ ತಿನ್ನುತ್ತಾ ಹೋದರೆ ಎರಡು ಮೂರು ದಿನಗಳಲ್ಲಿಯೇ ನಾಲಿಗೆ ಜಡ್ದು ಹಿಡಿಯುತ್ತದೆ. ಈ ಬಾರಿ ಹಾಗಾಗದಿರಲು ಒಂದು ಉಪಾಯವಿದೆ. ಅದೆಂದರೆ ಪೌಷ್ಠಿಕವೂ, ರುಚಿಕರವೂ, ತಯಾರಿಸಲು ಸುಲಭವೂ ಆದ ಸಿಹಿಗುಂಬಳದ ರೆಸಿಪಿ ಆಯ್ದುಕೊಳ್ಳುವುದು. ನವರಾತ್ರಿ ಸ್ಪೆಷಲ್: ಆಲೂ ಪನ್ನೀರ್ ಕೋಫ್ತಾ ರೆಸಿಪಿ

ಇದಕ್ಕೆ ಈರುಳ್ಳಿಯಾಗಲೀ ಬೆಳ್ಳುಳ್ಳಿಯಾಗಲೀ ಬಳಸದೇ ಇರುವುದರಿಂದ ನವರಾತ್ರಿಯ ವ್ರತದ ಕಟ್ಟುಪಾಡುಗಳನ್ನು ಪಾಲಿಸಂದತೆಯೂ ಆಗುತ್ತದೆ ಹಾಗೂ ಸಿಹಿಗುಂಬಳದ ಸಿಹಿ ಮತ್ತು ಮಾವಿನ ಪುಡಿಯ ಹುಳಿಯ ಮಿಶ್ರಣದ ವಿಶಿಷ್ಟ ರುಚಿ ನಾಲಿಗೆಯ ಚಪಲವನ್ನೂ ತಣಿಸುತ್ತದೆ. ನವರಾತ್ರಿಯಲ್ಲಿ ದುರ್ಗೆಯ ಅನುಗ್ರಹ ಪಡೆಯಲು ನೀವು ನಡೆಸುವ ಉಪವಾಸ ಮತ್ತು ಇತರ ಕಟ್ಟುಪಾಡುಗಳನ್ನು ದಣಿವಿಲ್ಲದೇ ಆಚರಿಸುವಂತಾಗಲು ಈ ಸಾಂಬರ್ ಉತ್ತಮ ಆಯ್ಕೆಯಾಗಿದೆ. ಬನ್ನಿ, ಇದನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ:

 Pumpkin Curry For Navratri Vrat

ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳೂ
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಗ್ರಿಗಳು:
*ಸಿಹಿಗುಂಬಳ ಕಾಯಿ- ಒಂದು (ಚಿಕ್ಕ ಗಾತ್ರದ್ದು, ಚಿಕ್ಕದಾಗಿ ಚೌಕಾಕಾರದಲ್ಲಿ ಕತ್ತರಿಸಿದ್ದು) ಇದಕ್ಕೆ ಕೂಷ್ಮಾಂಡ ಎಂದೂ ಕರೆಯುತ್ತಾರೆ.
*ಮೆಂತೆ - ಒಂದು ದೊಡ್ಡ ಚಮಚ
*ಅರಿಶಿನ ಪುಡಿ- ½ ಚಿಕ್ಕ ಚಮಚ
*ಹುರಿದ ಜೀರಿಗೆ ಪುಡಿ - 1 ಚಿಕ್ಕ ಚಮಚ
*ಒಣ ಮಾವಿನ ಪುಡಿ (Dry mango powder)- 2 ಚಿಕ್ಕ ಚಮಚ
*ಬೆಲ್ಲ- ಒಂದು ದೊಡ್ಡ ಚಮಚ (ಚಿಕ್ಕದಾಗಿ ತುರಿದದ್ದು) - ಕೆಂಪು ಅಥವಾ ಕಪ್ಪು ಬೆಲ್ಲ, (ಬಿಳಿ ಬೆಲ್ಲ ಬೇಡ, ಇದರಲ್ಲಿ ಸುಣ್ಣ ಇರುತ್ತದೆ)
*ಕಲ್ಲುಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಒಂದು ದೊಡ್ಡ ಚಮಚ
*ನೀರು - 1 ಕಪ್
*ಕೊತ್ತಂಬರಿ ಸೊಪ್ಪು - 2 ದೊಡ್ಡ ಚಮಚ (ಎಲೆಗಳನ್ನು ಬಿಡಿಸಿ ಚಿಕ್ಕದಾಗಿ ಹೆಚ್ಚಿದ್ದು) ಸಿಹಿ ಕುಂಬಳ ಕಾಯಿ ಪಾಯಸ

ವಿಧಾನ:
1) ಕುಂಬಳಕಾಯಿಯ ಸಿಪ್ಪೆ ಸುಲಿದು ಬೀಜ ನಿವಾರಿಸಿ ತಿರುಳನ್ನು ಚಿಕ್ಕದಾದ ಚೌಕಾಕಾರದ ತುಂಡುಗಳನ್ನಾಗಿ ಕತ್ತರಿಸಿ
2) ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಮೆಂತೆ ಹಾಕಿ.
3) ಮೆಂತೆ ಸಿಡಿಯಲು ಪ್ರಾರಂಭಿಸುತ್ತಿದ್ದಂತೆಯೇ ಇದಕ್ಕೆ ಕುಂಬಳದ ತುಂಡುಗಳನ್ನು ಹಾಕಿ ತಿರುವಿ
4) ಮಧ್ಯಮ ಉರಿಯಲ್ಲಿ ನಡುನಡುವೆ ಸುಮಾರು ನಾಲ್ಕು ನಿಮಿಷ ತಿರುವುತ್ತಾ ಎಲ್ಲಾ ಬದಿಗಳು ಸಮಾನವಾಗಿ ಕೆಂಪಗಾಗುವಂತೆ ನೋಡಿಕೊಳ್ಳಿ.
5) ಬಳಿಕ ಜೀರಿಗೆ ಪುಡಿ, ಉಪ್ಪು, ಮಾವಿನ ಪುಡಿ, ಅರಿಶಿನ ಸೇರಿಸಿ ಇನ್ನೂ ಸುಮಾರು ನಾಲ್ಕರಿಂದ ಐದು ನಿಮಿಷ ತಿರುವಿ.
6) ತದನಂತರ ಬೆಲ್ಲ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
7) ನಂತರ ಸುಮಾರು ಐದರಿಂದ ಆರು ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಲು ಬಿಡಿ
8) ಕುಂಬಳದ ತುಂಡುಗಳು ಬೆಂದಿದೆ ಎಂದು ಖಾತ್ರಿಪಡಿಸಿಕೊಂಡು ಉರಿ ನಂದಿಸಿ ಕೆಲವು ನಿಮಿಷ ಮುಚ್ಚಳ ಮುಚ್ಚಿಯೇ ಇರುವಂತೆ ಕೆಲ ನಿಮಿಷ ಬಿಡಿ.
9) ಸಿಹಿ ಹುಳಿಯ ಕುಂಬಳ ಸಾಂಬರ್ ಈಗ ತಯಾರಾಗಿದೆ. ಇದನ್ನು ಅಕ್ಕಿ ರೊಟ್ಟಿ, ಚಪಾತಿ, ನಾನ್, ಕುಲ್ಛಾ ಮೊದಲಾದವುಗಳ ಜೊತೆ ಸೇವಿಸಲು ರುಚಿಯಾಗಿರುತ್ತದೆ.

English summary

Pumpkin Curry For Navratri Vrat

During Navratri It is difficult to think of new dishes everyday which can be consumed during the fast. Eating the same aloo sabji everyday can get extremely monotonous. So, change your taste with this simple, sweet and tangy pumpkin curry. This special pumpkin curry for Navratri vrat is prepared without onions and garlic. So, check out the recipe of this sweet and tangy pumpkin curry. It is definitely worth a try.
X
Desktop Bottom Promotion