For Quick Alerts
ALLOW NOTIFICATIONS  
For Daily Alerts

ಬಸಳೆ ಸೊಪ್ಪಿನ ಸಾರು ಈ ರೀತಿ ಮಾಡಿದರೆ ರುಚಿ ಅಧಿಕ

|
Malbar Spinach
ಬಸಳೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬಸಳೆ ಸೊಪ್ಪಿನ ಜೊತೆ ಬೇಳೆ, ತೊಗರಿ ಬೇಳೆ ಅಥವಾ ಹೆಸರು ಕಾಳು ಹಾಕಿ ತಯಾರಿಸಿದರೆ ಬಸಳೆ ಸಾರಿನ ರುಚಿ ಹೆಚ್ಚುವುದು. ಇವತ್ತು ನಾವು ನಾವು ಬಸಳೆ ಸೊಪ್ಪಿನ ಜೊತೆ ಹೆಸರು ಕಾಳು ಹಾಕಿ ಸಾರು ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಗ್ರಿಗಳು:
* ಬಸಳೆ ಸೊಪ್ಪು ಒಂದು ಕಟ್ಟು
* ಮೊಳಕೆ ಬರಿಸಿದ ಹೆಸರು ಕಾಳು 1 ಕಪ್
* ಈರುಳ್ಳಿ 2 (ಕತ್ತರಿಸಿದ)
* ಟೊಮೆಟೊ 2 (ಕತ್ತರಿಸಿದ)
* ಹುಣಸೆಹಣ್ಣಿನ ರಸ ( ಒಂದು ನಿಂಬೆ ಗಾತ್ರ ಹುಣಸೆ ಹಣ್ಣಿನ ಉಂಡೆ ತಗೊಂಡು ಅದನ್ನು ನೀರಿನಲ್ಲಿ ಹಿಂಡಿ ರಸ ತೆಗೆದು ಹಿಂಡಬೇಕು)
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಕರಿಬೇವು
* ಸಾಸಿವೆ
* ಬೆಳ್ಳುಳ್ಳಿ,

ಮಸಾಲೆಗೆ:
ತೆಂಗಿನಕಾಯಿ ತುರಿ - 1 ಕಪ್
ಒಣ ಕೆಂಪು ಮೆಣಸಿನ ಕಾಯಿ - 5-6 ಅಥವಾ ಒಂದೂವರೆ ಚಮಚ ಮೆಣಸಿನ ಪುಡಿ
ಕೊತ್ತಂಬರಿ ಬೀಜ - 2 ಚಮಚ ಅಥವಾ 1/2 ಚಮಚ ಕೊತ್ತಂಬರಿ ಪುಡಿ
ಜೀರಿಗೆ - 1 ಚಮಚ
ಮೆಂತೆ - 6-8 ಬೀಜ
ಅರಿಶಿಣ ಪುಡಿ 1/4 ಚಮಚ

ತಯಾರಿಸುವ ವಿಧಾನ:

1. ಬಸಳೆ ಸೊಪ್ಪನ್ನು ಸ್ವಚ್ಛಗೊಳಿಸಿ , ಅದನ್ನು ಮೊಳಕೆ ಬರಿಸಿದ ಕಾಳು, ಈರುಳ್ಳಿ, ಟೊಮೆಟೊ ಮತ್ತು ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪುಹಾಕಿ ಬೇಯಿಸಲು ಇಡಬೇಕು.

2. ನಂತರ ಮಸಾಲೆ ಸಾಮಾಗ್ರಿಗಳನ್ನು ಹಾಕಿ ನುಣ್ಣನೆ ರುಬ್ಬಬೇಕು. ಹೀಗೆ ರುಬ್ಬುವ ಮುನ್ನ ತೆಂಗಿನ ತುರಿ ಚೆನ್ನಾಗಿ ಹುರಿದು, ಅದಕ್ಕೆ ಉಳಿದ ಸಾಮಾಗ್ರಿಗಳನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿದು ನಂತರ ಅರೆದರೆ ಮಸಾಲೆ ರುಚಿ ಹೆಚ್ಚುವುದು.

3. ಈಗ ಬೇಯುತ್ತಿರುವ ಬಸಳೆ ಸೊಪ್ಪು , ಹೆಸರು ಕಾಳಿನ ಮಿಶ್ರಣಕ್ಕೆ ರುಬ್ಬಿದ ಮಸಾಲೆ ಮತ್ತು ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಹುಣಸೆ ಹಣ್ಣಿನ ರಸ ಸೇರಿಸಿ , ಸ್ವಲ್ಪ ಹೊತ್ತು ಕುದಿಸಿ ಉರಿಯಿಂದ ಸಾರು ಪಾತ್ರೆಯನ್ನು ಇಳಿಸಿ ಬದಿಯಲ್ಲಿಡಬೇಕು.

4. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ , ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಬೇಕು, ಸಾಸಿವೆ ಚಟಪಟಾ ಶಬ್ದ ಬರುವಾಗ ಕರಿಬೇವು ಮತ್ತು ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ಈ ಒಗ್ಗರಣೆಯನ್ನು ಬಿಸಿಯಾದ ಸಾರಿಗೆ ಹಾಕಿ ಒಮ್ಮೆ ತಿರುಗಿಸಿದರೆ ರುಚಿಕರವಾದ ಬಸಳೆ ಸೊಪ್ಪಿನ ಸಾರು ರೆಡಿ.

ಈ ಸಾರನ್ನು ಮಾಡಿದರೆ ದೋಸೆ, ಇಡ್ಲಿ ಜೊತೆ ತಿನ್ನಬಹುದು, ಅನ್ನದ ಜೊತೆ ಕೂಡ ತಿನ್ನಬಹುದು.

English summary

Malbar Spinach Or Basale Soppu Curry Recipe | Variety Of Curry Recipe | ಬಸಳೆ ಸೊಪ್ಪಿನ ಸಾರು ರೆಸಿಪಿ | ಅನೇಕ ಬಗೆಯ ಸಾರಿನ ರೆಸಿಪಿ

Basale soppu or malbar spinach is very good for health. Whenever you prepare this soppu along with if you put some seeds like green gram, dal this basale soppu curry will be more tasty.
Story first published: Tuesday, July 3, 2012, 14:18 [IST]
X
Desktop Bottom Promotion