For Quick Alerts
ALLOW NOTIFICATIONS  
For Daily Alerts

ಶೀತ, ಗಂಟಲು ಕೆರತ ಕಡಿಮೆ ಮಾಡುವ ರಸಂ

|

ಹುರುಳಿಕಾಳಿನಲ್ಲಿ ಪ್ರೊಟೀನ್ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಳೆ ಮತ್ತು ಚಳಿಗಾಲದಲ್ಲಿ ಇದರಿಂದ ರಸಂ ತಯಾರಿಸಿ ಕುಡಿದರೆ ಹಿಡಿದಿರುವ ಶೀತ, ಗಂಟಲು ಕೆರೆತ ಕಡಿಮೆಯಾಗುವುದು.

ಬನ್ನಿ ಹುರುಳಿಕಾಳಿನ ರಸಂ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಹುರುಳಿಕಾಳು ಅರ್ಧ ಕಪ್
ಟೊಮೆಟೊ 2 (ಮ್ಯಾಶ್ ಮಾಡಿದ್ದು)
ಬೆಳ್ಳುಳ್ಳಿ 3-4 ಎಸಳು
ಹುಣಸೆ ಹಣ್ಣಿನ ರಸ 2 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಚಿಟಿಕೆಯಷ್ಟು ಇಂಗು
ಕರಿ ಮೆಣಸಿನ ಪುಡಿ ಒಂದು ಚಮಚ
ಸಾಸಿವೆ ಅರ್ಧ ಚಮಚ
ಒಣ ಮೆಣಸು 2
ಸ್ವಲ್ಪ ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಹುರುಳಿಕಾಳನ್ನು ಬಾಣಲೆಗೆ ಹಾಕಿ ಅದರ ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿಯಿರಿ. ನಂತರ ತಣ್ಣಗಾದ ಮೇಲೆ ತೊಳೆದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಬೇಯಿಸಲು ತಕ್ಕ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ 2-3 ವಿಶಲ್ ಬರುವವರೆಗೆ ಬೇಯಿಸಿ.

* ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಜೀರಿಗೆ ಹಾಕಿ, ನಂತರ ಬೆಳ್ಳುಳ್ಳಿ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಇಂಗು ಹಾಕಿ, ಒಣ ಮೆಣಸನ್ನು ಮುರಿದು ಹಾಕಿ, ನಂತರ ಕರಿ ಬೇವಿನ ಎಲೆ, ನಂತರ ಟೊಮೆಟೊ ಹಾಕಿ ಮೆತ್ತಗಾದ ಮೇಲೆ, ಮ್ಯಾಶ್ ಮಾಡಿ.

* ನಂತರ ಕರಿ ಮೆಣಸಿನ ಪುಡಿ ಮತ್ತು ಅರಿಶಿಣ ಪುಡಿ ಹಾಕಿ, ಬೇಯಿಸಿದ ಹುರುಳಿಕಾಳು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ನಂತರ ಹುಣಸೆ ಹಣ್ಣಿನ ರಸ ಹಾಕಿ ಮತ್ತೆ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹುರುಳಿಕಾಳಿನ ರಸಂ ರೆಡಿ.

English summary

Kollu Rasam Recipe

There are many rasam recipes that you can try everyday! Kollu rasam is a healthy dish that aids weight loss and also cures cold and cough.
X
Desktop Bottom Promotion