Just In
- 7 min ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 1 hr ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 9 hrs ago
ಶನಿವಾರದ ದಿನ ಭವಿಷ್ಯ (14-12-2019)
- 19 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
Don't Miss
- News
ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ನೀರೂರಿಸುವ ಸ್ಪೈಸಿ ಆಚಾರಿ ಪನೀರ್ ರೆಸಿಪಿ
ಹೋಳಿ ಮೆನುವಿನೊಂದಿಗೆ ತಯಾರಾಗಿದ್ದೀರಾ? ನಿಮ್ಮ ಪಟ್ಟಿಗೆ ಇನ್ನೊಂದು ರುಚಿಕರವಾದ ಖಾದ್ಯವನ್ನು ಸೇರಿಸೋಣ. ಈ ಹಬ್ಬದ ಸೀಸನ್‌ನಲ್ಲಿ ನೀವು ತಯಾರಿಸಲೇಬಾಕಾದ ರೆಸಿಪಿಯಾಗಿದೆ ಆಚಾರಿ ಪನೀರ್.
ಆಚಾರಿ ಪನೀರ್‌ನ ಪದಶಃ ಅರ್ಥವೆಂದರೆ ಉಪ್ಪಿನಕಾಯಿ ಪನೀರ್ ಎಂದಾಗಿದೆ. ಏಕೆಂದರೆ ಗ್ರೇವಿಯನ್ನು ತಯಾರಿಸಲು ಬಳಸುವ ಮಸಾಲೆ ಉಪ್ಪಿನಕಾಯಿಯದ್ದಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೋಳಿ ಹಬ್ಬದ ವಿಶೇಷ ರೆಸಿಪಿ ಪಿಸ್ತಾ ಬರ್ಫಿ
ಆಚಾರಿ ಪನೀರ್‌ನ ಸುವಾಸನೆ ತುಂಬಾ ಸೊಗಸಾಗಿರುತ್ತದೆ. ಇದರ ರುಚಿ ನಿಮಗೆಷ್ಟು ಹಿಡಿಸುತ್ತದೆಂದರೆ ತಿಂದಷ್ಟು ಇನ್ನೂ ಬೇಕೆಂಬ ತುಡಿತ ನಿಮ್ಮಲ್ಲಿ ಹೆಚ್ಚಾಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಮಾನಿನ ಕಾಯಿ
ಉಪ್ಪಿನಕಾಯಿಯನ್ನು ಈ ರೆಸಿಪಿ ತಯಾರಿಗೆ ಬಳಸಲಾಗುತ್ತದೆ. ಆದರೆ ನಿಮ್ಮ ಇಚ್ಛೆಯ ಯಾವುದೇ ಉಪ್ಪಿನಕಾಯಿಯನ್ನು ಈ ರೆಸಿಪಿಗೆ ನೀವು ಬಳಸಬಹುದು.
ಆಚಾರಿ ಪನೀರ್ ನಿಮ್ಮ ಹೋಳಿಯ ಹಬ್ಬದಡುಗೆಗೆ ಮೆರುಗನ್ನು ನೀಡುವುದು ಖಂಡಿತ ಮತ್ತು ನಿಮ್ಮ ಅತಿಥಿಗಳು ಈ ಡಿಶ್ ಅನ್ನು ಹೆಚ್ಚು ಇಷ್ಟಪಡುತ್ತಾರೆ ಮತ್ತು ನಿಮ್ಮನ್ನು ಅಭಿನಂದಿಸುತ್ತಾರೆ.
ಹಾಗಿದ್ದರೆ ಮತ್ತೇಕೆ ತಡ, ಆಚಾರಿ ರೆಸಿಪಿಯ ಮೆನು ನೋಡಿಕೊಳ್ಳಿ ಮತ್ತು ಹೋಳಿಯ ಸಡಗರವನ್ನು ಇನ್ನಷ್ಟು ರುಚಿಯನ್ನಾಗಿಸಿ.
ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಹೋಳಿಗೆ ಸ್ಪೆಷಲ್ ಪೂರನ್ ಪೋಲಿ
ಸಾಮಾಗ್ರಿಗಳು:
.ಪನೀರ್ - 500 ಗ್ರಾಂ
.ಕ್ಯಾಪ್ಸಿಕಂ - 1 (ದಪ್ಪಗೆ ಹೆಚ್ಚಿದ್ದು)
.ಈರುಳ್ಳಿ - 1(ಕತ್ತರಿಸಿದ್ದು)
.ಹಸಿ ಮೆಣಸು - 2
.ಬೇಳ್ಳುಳ್ಳಿ - 5-6 ಎಸಳು
.ಶುಂಠಿ - ಒಂದು ಮಧ್ಯಮ ಗಾತ್ರದ್ದು
.ಟೊಮೇಟೊ -2 (ತುಂಡರಿಸಿದ್ದು)
.ಅಮಚೂರ್ (ಡ್ರೈ ಮ್ಯಾಂಗೊ) ಪೌಡರ್ - 1ಸ್ಪೂನ್
.ಜೀರಿಗೆ ಹುಡಿ - 1ಸ್ಪೂನ್
.ಕೊತ್ತಂಬರಿ ಹುಡಿ - 1ಸ್ಪೂನ್
.ಅರಶಿನ - 1ಸ್ಪೂನ್
.ಗರಂ ಮಸಾಲಾ ಹುಡಿ - 1/2 ಸ್ಪೂನ್
.ಮೆಣಸಿನ ಹುಡಿ - 1/2 ಸ್ಪೂನ್
.ಕಾಲೊಂಜಿ (ಈರುಳ್ಳಿ ಬೀಜಗಳು) 1 ಸ್ಪೂನ್
.ಮೆಂತೆ ಬೀಜಗಳು - 1/2 ಸ್ಪೂನ್
.ಬೇ ಲೀಫ್ - 1
.ಉಪ್ಪು - ರುಚಿಗೆ ತಕ್ಕಷ್ಟು
.ಉಪ್ಪಿನಕಾಯಿ ಮಸಾಲಾ - 1ಸ್ಪೂನ್ (ನಿಮ್ಮ ಆಯ್ಕೆಯ ಯಾವುದೇ ಉಪ್ಪಿನಕಾಯಿ)
.ಎಣ್ಣೆ - 1 ಸ್ಪೂನ್
.ಕರಿಬೇವಿನ ಎಲೆ - 2 ಸ್ಪೂನ್ (ಕತ್ತರಿಸಿದ್ದು)
ಮಾಡುವ ವಿಧಾನ:
1.ಈರುಳ್ಳಿ, ಟೊಮೇಟೊ, ಹಸಿಮೇಣಸು, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಮಿಕ್ಸರ್‌ನಲ್ಲಿ ದಪ್ಪ ಪೇಸ್ಟ್‌ನಂತೆ ನುಣ್ಣಗೆ ರುಬ್ಬಿ.
2.ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಇದಕ್ಕೆ ಕಾಲೊಂಜಿ, ಮೆಂತೆ, ಬೇ ಲೀಫ್ ಸೇರಿಸಿ. ಸ್ವಲ್ಪ ಸಮಯ ಹುರಿದುಕೊಳ್ಳಿ.
3.ಕತ್ತರಿಸಿದ ಕ್ಯಾಪ್ಸಿಕಂ ಸೇರಿಸಿ ಮತ್ತು ಸ್ವಲ್ಪ ನಿಮಿಷ ಹುರಿಯಿರಿ.
4.ನಂತರ ಈರುಳ್ಳಿ ಪೇಸ್ಟ್ ಸೇರಿಸಿ ಮತ್ತು 5-6 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
5.ಒಂದರ ನಂತರ ಒಂದರಂತೆ ಅರಶಿನ, ಮೆಣಸಿನ ಹುಡಿ, ಜೀರಿಗೆ ಹುಡಿ, ಕೊತ್ತಂಬರಿ ಹುಡಿ, ಅಮೆಚೂರ್ ಹುಡಿ, ಗರಂ ಮಸಾಲಾ ಹುಡಿ ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಬೇಯಿಸಿ.
6.ಇದೀಗ ಉಪ್ಪಿನಕಾಯಿ ಮಸಾಲೆಯನ್ನು ಸೇರಿಸಿ. ಉಪ್ಪಿನಕಾಯಿ ಹೋಳುಗಳನ್ನು ಹಾಕಬೇಡಿ. 2-3 ನಿಮಿಷಗಳ ಕಾಲ ಚೆನ್ನಾಗಿ ಸೌಟಾಡಿಸಿ.
7.ಪನೀರ್ ಮತ್ತು ಉಪ್ಪು ಸೇರಿಸಿ. 3-4 ನಿಮಿಷಗಳ ಕಾಲ ಬೇಯಿಸಿ.
8.ಸ್ವಲ್ಪ ನೀರು ಹಾಕಿ, ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ.
9.ಪನೀರ್ ಸಂಪೂರ್ಣ ಬೆಂದ ನಂತರ, ಮುಚ್ಚಳವನ್ನು ತೆಗೆಯಿರಿ, ಉರಿಯನ್ನು ನಿಲ್ಲಿಸಿ ಮತ್ತು ಕತ್ತರಿಸಿದ ಕರಿಬೇವಿನೆಲೆಗಳಿಂದ ಅಲಂಕರಿಸಿ.
ಹುಳಿ ಮತ್ತು ಖಾರ ಬೆರೆತ ಆಚಾರಿ ಪನೀರ್ ಬಡಿಸಲು ಸಿದ್ಧವಾಗಿದೆ. ಈ ರೆಸಿಪಿಯನ್ನು ರೋಟಿಯೊಂದಿಗೆ ಸವಿಯಿರಿ.