For Quick Alerts
ALLOW NOTIFICATIONS  
For Daily Alerts

ಶಿಶಿರದ ಚಳಿಗೆ ಮೆಣಸಿನ ಸಾರಿನ ಜೋಡಿ ಏನ ಹೇಳಲಿ!!

By Staff
|
Pepper
ಚಳಿಗಾಲ ಶುರುವಾಗಿದೆ. ಶಿಶಿರದ ಶೀತಗಾಳಿ ಮೈಗೆ ಸೋಕುತ್ತಿದ್ದರೆ ಹಲ್ಲುಗಳನ್ನು ಕಟಕಟ ಎಂದು ಕಡಿಯುತ್ತಾ ಕೂರುವ ಬದಲು, ಬಿಸಿಬಿಸಿ ಅನ್ನದೊಂದಿಗೆ ಮೆಣಸಿನ ಸಾರು ಕಲಸಿ ತಿನ್ನೋದರಲ್ಲಿ ಇರುವ ಮಜಾ ಬೇರೆ ಇಲ್ಲಾ ಬಿಡಿ. ಮೆಣಸು ಶೀತಕ್ಕೆ ಉಪಶಮನ ಕೊಡುತ್ತದೆ ಜೊತೆಗೆ ಆರೋಗ್ಯಕರವೂ ಹೌದು.

ಬೇಕಾಗುವ ಸಾಮಗ್ರಿ :

ಮೆಣಸು : 50ಗ್ರಾಂ
ಒಣ ಮೆಣಸಿನ ಕಾಯಿ : 10-12
ಒಣ ಕೊಬ್ಬರಿ : 2 ಸೀಳು
ಉದ್ದಿನ ಬೇಳೆ : 50 ಗ್ರಾಂ
ಎಣ್ಣೆ : 2 ಟೀ ಚಮಚ
ಹುರಿಗಡಲೆ : 3 ಟೀ ಚಮಚ

ತಯಾರಿಸುವ ವಿಧಾನ :

ಕಾದ ಬಾಣಲೆಗೆ ಎಣ್ಣೆ ಹಾಕಿ ಮೆಣಸನ್ನು ಹದವಾದ ಉರಿಯಲ್ಲಿ ಪಟಪಟನೆ ಶಬ್ದ ಬರುವವರೆ ಕಮ್ಮಗೆ ಹುರಿಯಿರಿ. ಹಾಗೆಯೇ ಮೆಣಸಿನ ಕಾಯಿಯನ್ನೂ ಹುರಿದುಕೊಳ್ಳಿ. ಉದ್ದಿನ ಬೇಳೆಯನ್ನು ಹೊನ್ನಿನ ಬಣ್ಣ ಬರುವವರೆಗೂ ಹುರಿಯಿರಿ. ಹುರಿಗಡಲೆಯೊಂದಿಗೆ ಎಲ್ಲಾ ಪದಾರ್ಥಗಳನ್ನೂ ನುಣ್ಣಗೆ ಪುಡಿಮಾಡಿಕೊಳ್ಳಿ.

ಸಾರು ತಯಾರಿಸಲು ತೊಗರಿ ಬೇಳೆಯನ್ನು ಚೆನ್ನಾಗಿ ಕಟ್ಟು ಬಿಡುವವರೆಗೂ ಬೇಯಿಸಿ. ಇದಕ್ಕೆ ಮೆಣಸು ಸಾರಿನ ಪುಡಿ, ಹುಣಸೆಹಣ್ಣಿನ ರಸ, ಬೆಲ್ಲ, ಉಪ್ಪು, ಕರಿಬೇವು ಹಾಕಿ ಚೆನ್ನಾಗಿ ಕುದಿಸಿ. ತುಪ್ಪ, ಒಣಮೆಣಸಿನ ಕಾಯಿ, ಜೀರಿಗೆಯ ಒಗ್ಗರಣೆ ಕೊಟ್ಟರೆ ರುಚಿ ಇನ್ನೂ ಅದ್ಭುತ.

English summary

Pepper Sambar for winter | Pepper sambar for cold | ಶಿಶಿರದ ಚಳಿಗೆ ಮೆಣಸಿನ ಸಾರಿನ ಜೋಡಿ ಏನ ಹೇಳಲಿ!!

Pepper sambar is the medicine to get rid of common cold and caugh during winter season. Pepper sambar is easy to make too. Try it.
Story first published: Tuesday, December 7, 2010, 14:00 [IST]
X
Desktop Bottom Promotion