For Quick Alerts
ALLOW NOTIFICATIONS  
For Daily Alerts

ದಾಲ್ ತಡ್ಕಾ ಸ್ಟಾರ್ ಊಟ ಮನೆಯಲ್ಲಿಯೆ ರೆಡಿ

|
Toor Dal
ಸ್ಟಾರ್ ಹೋಟಲಿಗೆ ಹೋಗಿ ತಂದೂರಿ ರೊಟ್ಟಿ ಜೊತೆ ದಾಲ್ ತಡ್ಕಾವನ್ನು ತಿನ್ನಲು ಬಯಸುತ್ತಾರೆ. ಆದರೆ ಖಾರವಾದ ದಾಲ್ ತಡ್ಕಾವನ್ನು ಮನೆಯಲ್ಲಿಯೆ ಮಾಡಿ ಸ್ಟಾರ್ ಹೋಟಲಿನ ರುಚಿಯನ್ನು ಸವಿಯಬಹುದಾಗಿದೆ.

ಆದರೆ ದಾಲ್ ತಡ್ಕಾವನ್ನು ಸಿದ್ಧ ಮಾಡುವಾಗ ಬೇಳೆಯನ್ನು ಹುರಿಯುವ ಕಲೆ ಗೊತ್ತಿರಬೇಕು. ಬೇಳೆ ಹುರಿಯುವಾಗ ಅದರಿಂದ ಬರುವ ವಾಸನೆ ಕೆಮ್ಮನ್ನು ತರಿಸುವಂತೆ ಇರುತ್ತದೆ. ಆದ್ದರಿಂದ ಫ್ಯಾನ್ ಆನ್ ನಲ್ಲಿಟ್ಟು ಮುಖಕ್ಕೆ ಬಟ್ಟೆ ಕಟ್ಟಿದರೆ ಕೆಮ್ಮು ಉಂಟಾಗುವುದಿಲ್ಲ.

ಹುರಿದ ಉದ್ದಿನ ಬೇಳೆಯಿಂದ ದಾಲ್ ತಡ್ಕಾ ಮಾಡುವ ರೀತಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

1. ಉದ್ದಿನ ಬೇಳೆ 1 ಕಪ್
2. ಕತ್ತರಿಸಿದ ಈರುಳ್ಳಿ 1
3.
ಕ್ತತರಿಸಿದ ಟೊಮೆಟೊ 1
4. ಬೆಳ್ಳುಳ್ಳಿ 4
5. ಒಣಗಿದ ಮೆಣಸು 3
6. ಹಸಿ ಮೆಣಸು 2
7. ಜೀರಿಗೆ 1 ಚಮಚ
8. ಜೀರಿಗೆ ಪುಡಿ 1 ಚಮಚ
9. ಮೆಣಸಿನ ಪುಡಿ 1/2 ಚಮಚ
10. ಇಂಗು 1 ಚಮಚ
11. ತುಪ್ಪ 2 ಚಮಚ
12. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

1. ತುಪ್ಪವನ್ನು ಪ್ರೆಶರ್ ಕುಕ್ಕರ್ ನಲ್ಲಿ ಬಿಸಿ ಮಾಡಿ.

2. ಅದಕ್ಕೆ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ.

3. ಈಗ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ಬರುವ ಹಾಗೆ ಹುರಿಯಿರಿ.

4.
ಟೊಮೆಟೊ,ಮೆಣಸು ಉಪ್ಪನ್ನು ಆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬಿಸಿ ಮಾಡಿ.

5.
ನಂತರ ತೊಳೆದ ಉದ್ದಿನ ಬೇಳೆಯನ್ನು ಹಾಕಿ 3 ಕಪ್ ನೀರು ಬೆರೆಸಿ ಕುಕ್ಕರ್ 3 ವಿಶಲ್ ಹಾಕುವರೆಗೆ ಬೇಯಲು ಬಿಡಿ.

6. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಮೆಣಸಿನ ಪುಡಿ, ಇಂಗು, ಜೀರಿಗೆ ಪುಡಿ , ಒಣ ಮೆಣಸನ್ನು ಹಾಕಿ 1 ನಿಮಿಷದ ಬಿಸಿಯಾದ ನಂತರ ಬಿಸಿಯಾದ ಉದ್ದಿನ ಬೇಳೆ ಮಿಶ್ರಣಕ್ಕೆ ಸುರಿಯಿರಿ.

7. ರೆಡಿಯಾದ ಉದ್ದಿನ ಬೇಳೆ ತಡ್ಕಾಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ತಂದೂರಿ ರೊಟ್ಟಿ ಜೊತೆ ತಿನ್ನಲು ಸೂಪರ್ ಆಗಿರುತ್ತದೆ.

English summary

Recipe For Dal Tadka | Famous Indian Recipe | ದಾಲ್ ತಡ್ಕಾ ಮಾಡುವ ವಿಧಾನ | ಪ್ರಸಿದ್ಧಿ ಭಾರತೀಯ ಅಡುಗೆ

Dal tadka is a famous dish very well liked in India. This dal tadka recipe is your perfect companion for hot tandoori roties. It is basically a toor dal recipe that is spicy and rich in all flamboyance of Indian cuisine. Dal tadka is an easy Indian recipe but involves a specific skill set in making. Take a look.
Story first published: Wednesday, October 12, 2011, 12:11 [IST]
X
Desktop Bottom Promotion