For Quick Alerts
ALLOW NOTIFICATIONS  
For Daily Alerts

ಅಡುಗೆ ಆರೋಗ್ಯ: ಸವಿಯಿರಿ ನಿಂಬೆಕಾಯಿ ಸಾರು

By Staff
|

ನಿಂಬೆಕಾಯಿ/ನಿಂಬೆ ಹಣ್ಣಿನ ಬಳಕೆ ದಿನನಿತ್ಯ ಅಡುಗೆ ಮನೆಯಲ್ಲಿ ಇದ್ದದ್ದೇ. ಆದರೆ ನಿಂಬೆಯ ಉಪಯೋಗವೂ ಅಷ್ಟೇ ಚೈತನ್ಯದಾಯಕ. ನಿಂಬೆಕಾಯಿ ಸಾರು, ಯಾವುದೇ ಸೂಪ್ ಗೂ ಕಮ್ಮಿಯಿಲ್ಲ. ಸೂಪ್ ಎಂದರೇನು ಎಂದು ತಿಳಿಯೋ ಮೊದಲು ನಾವೆಲ್ಲಾ, ನಿಂಬೆ ಸಾರು, ಹುಣಸೆ ಸಾರು ಮುಂತಾದ ತಿಳಿ ಸಾರುಗಳನ್ನು ಮಾಡಿ ಲೋಟಗಟ್ಟಲೇ ಹೀರಿದ್ದು ಉಂಟು.ದಿನೇ ಅದೇ ತಿಳಿಬೇಳೆ ಸಾರು ಎನ್ನುವವರು ಸುಲಭವಾಗಿ ನಿಂಬೆಸಾರು ಮಾಡಿ ಸವಿಯಬಹುದು.ನಾಲಗೆ ರುಚಿ ಕೆಟ್ಟವರಿಗೆ, ಕೆಮ್ಮು ದಮ್ಮು, ಶೀತ ,ಉಷ್ಣ ಎನ್ನುವವರಿಗೆಲ್ಲಾ ನಿಂಬೆ ಸಾರು ರಾಮಬಾಣ.


ಮನಸ್ವಿನಿ. ನಾರಾವಿ

ತಯಾರಿಸಲು ಬೇಕಾದ ಸಾಮಾಗ್ರಿ:

ನಿಂಬೆ ಹಣ್ಣು : 3 ದೊಡ್ಡ ಗಾತ್ರದ್ದು
ತೊಗರಿಬೇಳೆ:1 ಬಟ್ಟಲು
ಗೂದೆ ಹಣ್ಣು(Tomato):ಹಣ್ಣಾಗಿರೋದು 2
ಹಸಿಮೆನಸಿನಕಾಯಿ: 2
ಕೆಂಪು ಒಣಮೆಣಸಿನ ಕಾಯಿ :3
ಕಡಲೇಬೇಳೆ :1 ಚಮಚ
ಕೊತ್ತಂಬರಿಬೀಜ(ಧನಿಯ):1 ಚಮಚ
ಶುಂಠಿ ರಸ : 1 ಟೀ ಚಮಚ
ಕಡ್ಲೇಕಾಯಿ ಎಣ್ಣೆ ಒಗ್ಗರಣೆಗೆ
ಜೀರಿಗೆ :ಕಾಲು ಚಮಚ
ಮೆಣಸು: ಕಾಲು ಚಮಚ
ಅರಿಶಿನ: ಕಾಲು ಚಮಚ
ಸಾಸಿವೆ: ಕಾಲು ಚಮಚ
ಇಂಗು, ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು ಎಲೆ,

ಮಾಡುವ ವಿಧಾನ:

ಶುದ್ಧವಾದ ನೀರಿಗೆ ತೊಗರಿಬೇಳೆ ಯನ್ನು ಹಾಕಿ ಬೇಯಿಸಿ. ಬೇಯಿಸುವಾಗ ಚಿಟಿಕೆ ಅರಿಶಿನ ಹಾಕಿ,ಚೆನ್ನಾಗಿ ತಿರುವುತ್ತಾ ಇರಿ, ಬೇಳೆ ಕರಗಿದ ಮೇಲೆ ಒಲೆಯಿಂದ ಕೆಳಗಿಸಿ.

ಮಸಾಲೆ ಪುಡಿ ತಯಾರಿಕೆ : ಹುರಿದ ಕೆಂಪು ಮೆಣಸಿನಕಾಯಿ, ಕೊತ್ತಂಬರೀಬೀಜ, ಕಡಲೇ ಬೇಳೆ, ಮೆಣಸು, ಜೀರಿಗೆ, ಇಂಗುಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ,

ಪಾತ್ರೆಯಲ್ಲಿ ಎರಡು ಬಟ್ಟಲು ನೀರು ಕುದಿಸಿ ಅದಕ್ಕೆ ಅರಿಶಿನ ,ಕತ್ತರಿಸಿದ ಟೊಮ್ಯಾಟೊ, ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ, ಕೆಲ ನಿಮಿಷಗಳ ಕಾಲ ಬೇಯಿಸಿ. ನಂತರ ಪುಡಿ ಮಾಡಿದ ಮಸಾಲೆ ಹಾಗೂ ಉಪ್ಪು ಸೇರಿಸಿ, ಸ್ವಲ್ಪ ಹೊತ್ತಿನ ಬಳಿಕ ಬೇಯಿಸಿಟ್ಟ ಬೇಳೆ ಸೇರಿಸಿ. ಬೇಕಿದ್ದರೆ ಸ್ವಲ್ಪ ಹೆಚ್ಚಿಗೆ ನೀರನ್ನು ಬೆರಸಿ.ಚೆನ್ನಾಗಿ ಕುದಿಸಿ.

ನಿಂಬೆರಸ ತೆಗೆದಿಟ್ಟುಕೊಂಡು ಅದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.ಮೇಲಿನ ಮಿಶ್ರಣಕ್ಕೆ ಒಗ್ಗರಣೆ ಜತೆ ಬೆರೆತ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಕದಡಿ, ಕುದಿಸಿರಿ. ನಿಂಬೆ ಸಾರು ತಯಾರಾಗುತ್ತದೆ. ಒಗ್ಗರಣೆ ಸಮಯದಲ್ಲಿ ಶುಂಠಿರಸವನ್ನು ಬೆರಸಿ ಹೆಚ್ಚಿನ ಸ್ವಾದವನ್ನು ಪಡೆಯಬಹುದು.
(ದಟ್ಸ್ ಕನ್ನಡ ಪಾಕಶಾಲೆ)

English summary

Lemon Rasam - ಅಡುಗೆ ಆರೋಗ್ಯ: ಸವಿಯಿರಿ ನಿಂಬೆಕಾಯಿ ಸಾರು

Lemon rasam by Manaswini, Naravi
X
Desktop Bottom Promotion