For Quick Alerts
ALLOW NOTIFICATIONS  
For Daily Alerts

ತಣ್ಣನೆಯ ಸೌತೆಕಾಯಿ ಸಾಸಿವೆ (ರಾಯತ)

By Staff
|
Cooling Cucumber Raita
ಬೇಸಿಗೆಯ ಬಿಸಿಯಲ್ಲೂ ನಾಲಗೆ ಚಪಲ ಮಸಾಲ ತಿಂಡಿಗಳನ್ನು ಬಯಸುವುದು ಸಹಜ. ಪಲಾವ್, ಫ್ರೈಡ್ ರೈಸ್ ಮುಂತಾದ ಮಸಾಲೆ ಭರಿತ ತಿಂಡಿಯ ಘಾಟನ್ನು ತಂಪಾಗಿಸಲು ಜೊತೆಗೆ ರಾಯ್ತ ಇರಲೇಬೇಕು.ಸುಲಭವಾಗಿ 10 ನಿಮಿಷದೊಳಗೆ ತಯಾರಿಸಬಹುದಾದ ರಾಯ್ತ(ಕಾಯಿ ಸಾಸಿವೆ)ಕ್ಕೆ ಸೌತೆಕಾಯಿ, ಪಡುವಲಕಾಯಿ, ಗೂದೆ ಹಣ್ಣು(tomato) ಬಳಸುವುದುಂಟು.

*ಮನಸ್ವಿನಿ,ನಾರಾವಿ

ಬೇಕಾದ ಸಾಮಾಗ್ರಿಗಳು:
ಜೀರಿಗೆ -3/4 ಟೀ ಚಮಚ
ಪುದೀನ ಎಲೆಗಳು 3 ರಿಂದ ನಾಲ್ಕು
ಸಾಸಿವೆ -1 ಟೀ ಚಮಚ
ಹಸಿಮೆಣಸಿನಕಾಯಿ -ಸಣ್ಣಗಾತ್ರ8 / ದೊಡ್ಡದು 5
ಇಂಗು -1/4 ಟೀ ಚಮಚ
ತೆಂಗಿನಕಾಯಿ ತುರಿ -1 ಬಟ್ಟಲು
ರುಚಿಕೆ ತಕ್ಕಷ್ಟು ಉಪ್ಪು
ಗಟ್ಟಿ ಮೊಸರು 2 ಕಪ್


ಒಗ್ಗರಣೆಗೆ:

ಎಣ್ಣೆ -1 ಟೀ ಚಮಚ
ಸಾಸಿವೆ -1 ಟೀ ಚಮಚ
ತರಕಾರಿ -ಸೌತೆಕಾಯಿ ಅಥವಾ ಪಡವಲಕಾಯಿ

ಒಗ್ಗರಣೆಗೆ ಸ್ವಲ್ಪ ಕಡಲೇಬೇಳೆ, ಉದ್ದಿನಬೇಳೆ ಅವಶ್ಯವಿದ್ದರೆ ಬಳಸಬಹುದು

ಮಾಡುವ ವಿಧಾನ:
ಹಸಿ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ಕೊಚ್ಚಿ ಹಾಕಿ. ಪಡವಲಕಾಯಿ ಬಳಸಿದರೆ ಅದನ್ನು ಸಣ್ಣಗೆ ಹೆಚ್ಚಿ ಎಣ್ಣೆ ಸಾಸಿವೆ ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ. ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ, ಉಪ್ಪು, ಇಂಗು, ತೆಂಗಿನ ತುರಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಮೊಸರಿಗೆ ಎಲ್ಲಾ ಮಿಶ್ರಣವನ್ನು, ತರಕಾರಿಯನ್ನು ಹಾಕಿ ಸರಿಯಾಗಿ ಬೆರೆಸಿ. ಒಗ್ಗರಣೆ ಬೇಡವಾದರೆ ಮೊಸರಿಗೆ ಹಾಕಿದ ಮಿಶ್ರಣವನ್ನು ಫ್ರೀಜರ್ ನಲ್ಲಿಟ್ಟು ನಂತರ ಬಳಸಬಹುದು. ಊಟದ ಜೊತೆ ಅಥವಾ ತಿಂಡಿಯ ಜೊತೆಗೆ ಬಡಿಸಬಹುದು. ಪುದೀನ ಎಲೆ ,ಒಗ್ಗರಣೆ ಹಾಕುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ತೆಂಗಿನ ತುರಿ ಬದಲು ತೆಂಗಿನ ಹಾಲನ್ನು ಸಹ ಬಳಸಬಹುದು.

Story first published: Monday, February 16, 2009, 17:48 [IST]
X
Desktop Bottom Promotion