ಹೈದ್ರಾಬಾದ್ ಶೈಲಿಯ ಬೆಂಡೆಕಾಯಿ ರೆಸಿಪಿ-ಬೊಂಬಾಟ್ ರುಚಿ!

By: Jaya subramanya
Subscribe to Boldsky

ಹೈದ್ರಾಬಾದ್ ಎಂದರೆ ನಮಗೆ ಒಮ್ಮೆಗೆ ನೆನಪಾಗುವುದು ಅಲ್ಲಿ ತಯಾರಾಗುವ ರುಚಿಯಾದ ಚಿಕನ್ ಬಿರಿಯಾನಿ! ರಂಜಾನ್ ಸಮಯದಲ್ಲಿ ಗಲ್ಲಿ ಗಲ್ಲಿಯಲ್ಲೂ ಈ ಬಿರಿಯಾನಿ ಅಲ್ಲಿ ದೊರೆಯುತ್ತದೆ. ಬೆಂಗಳೂರು, ಮುಂಬಯಿ, ದೆಹಲಿ ಮೊದಲಾದ ಪ್ರದೇಶಗಳಲ್ಲಿ ಕೂಡ ಈ ಬಿರಿಯಾನಿ ದೊರೆತರೂ ಅಲ್ಲಿ ದೊರೆಯುವ ಬಿರಿಯಾನಿ ರುಚಿ ಮಾತ್ರ ಅಲ್ಲಿಯೇ ಸವಿದು ನೋಡಬೇಕು. ಹೈದ್ರಾಬಾದ್ ಬಿರಿಯಾನ್ ರೆಸಿಪಿಯನ್ನು ಈ ಹಿಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇಂದು ನಾವು ನೀಡುತ್ತಿರುವ ಹೈದ್ರಾಬಾದ್ ಪಾಕ ವಿಧಾನ ಸಸ್ಯಾಹಾರಿ ಜಿಹ್ವಾ ಪ್ರಿಯರಿಗಾಗಿದೆ.  

ಬಿರಿಯಾನಿ ಪ್ರಿಯರಿಗಾಗಿ-ಹೈದರಾಬಾದ್ ಬಿರಿಯಾನಿ

ಬರಿಯ ಬಿರಿಯಾನಿ ಮಾತ್ರವಲ್ಲದೆ ನವಾಬ ಪಾಕ ವಿಧಾನವು ಸಸ್ಯಾಹಾರಿಗಳ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ಇವರು ಖಾದ್ಯಕ್ಕೆ ಬಳಸುವ ಸಾಮಾಗ್ರಿ ಮತ್ತು ಅದನ್ನು ಸಿದ್ಧಪಡಿಸುವ ಇತರ ಅಂಶಗಳಿಂದ ಹೈದ್ರಾಬಾದ್ ತಿನಿಸುಗಳು ಎಲ್ಲರಿಗೂ ಪ್ರಿಯವಾಗುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಬಾಯಲ್ಲಿ ನೀರೂರಿಸುವ ದಹಿ ಬಿಂಡಿ ಮಸಾಲಾ ರೆಸಿಪಿಯನ್ನು ಇಲ್ಲಿ ತಿಳಿಸುತ್ತಿದ್ದೇವೆ. ಮೊಸರು ಬೆಂಡೆಕಾಯಿ ಮಸಾಲಾ ಈ ಪಾಕ ವೈವಿಧ್ಯದ ಹೆಸರಾಗಿದ್ದು ಹೆಸರು ಕೇಳುವಾಗಲೇ ಬಾಯಲ್ಲಿ ನೀರೂರುವುದು ಖಂಡಿತ. ಹಾಗಿದ್ದರೆ ತಯಾರಿಸುವ ವಿಧಾನವನ್ನು ಇಲ್ಲಿ ಅರಿತುಕೊಳ್ಳಿ...

Bhindi Masala Curry

ಪ್ರಮಾಣ - 4

ಸಿದ್ಧತಾ ಸಮಯ - 10 ನಿಮಿಷಗಳು

ಅಡುಗೆಗೆ ಬೇಕಾದ ಸಮಯ - 30 ನಿಮಿಷಗಳು

ಸಾಮಾಗ್ರಿಗಳು

*ಬೆಂಡೆಕಾಯಿ - 1/2 ಕಿಲೊ (ಸಣ್ಣದಾಗಿ ಹೆಚ್ಚಿದ್ದು)

*ಈರುಳ್ಳಿ - 2 (ದೊಡ್ಡದು ಮತ್ತು ಸಣ್ಣದಾಗಿ ಹೆಚ್ಚಿದ್ದು)

*ಎಣ್ಣೆ - 1/2 ಚಮಚ

*ಟೊಮೇಟೊ - 2 ( ಸಣ್ಣದಾಗಿ ಹೆಚ್ಚಿದ್ದು)

*ಶುಂಠಿ - 1/2 ಚಮಚ (ಸಣ್ಣದಾಗಿ ಹೆಚ್ಚಿದ್ದು)

*ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ

*ಉದ್ದಿನ ಬೇಳೆ - 1 ಚಮಚ

*ಮೆಣಸಿನ ಹುಡಿ - 1 ಚಮಚ

*ಸಾಸಿವೆ - 1/2 ಚಮಚ

*ಅರಿಶಿನ ಹುಡಿ - 1/2 ಚಮಚ

*ತುರಿದ ಕೊಬ್ಬರಿ - 1/2 ಚಮಚ

*ಗರಂ ಮಸಾಲಾ - 1 ಚಮಚ

*ಕರಿಬೇವು - 4-5

*ಅಮಚೂರ್ - 1/2 ಚಮಚ

*ಗೋಡಂಬಿ - 10 (ಹಾಲಿನಲ್ಲಿ ನೆನೆಸಿದ್ದು)

*ಕಸೂರಿ ಮೇಥಿ - 1/2 ಚಮಚ (ಹುಡಿ ಮಾಡಿದ್ದು)

*ಕೊತ್ತಂಬರಿ ಹುಡಿ - 1 1/2 ಚಮಚ

*ಮೊಸರು - 1 ಕಪ್

*ಉಪ್ಪು ರುಚಿಗೆ ತಕ್ಕಷ್ಟು

*ನೀರು - 2 ಕಪ್‌ಗಳು

*ಇಂಗು - ಚಿಟಿಕೆಯಷ್ಟು

*ಜೀರಿಗೆ - 1/2 ಚಮಚ

ಮಾಡುವ ವಿಧಾನ

1. ಹಾಲಿನಲ್ಲಿ ನೆನೆಯಿಸಿದ ಗೋಡಂಬಿಯನ್ನು ಕೊಬ್ಬರಿಯೊಂದಿಗೆ ಅರೆದು ಪಕ್ಕದಲ್ಲಿಡಿ.

2. ಉಪ್ಪಿನಲ್ಲಿ ಬೆಂಡೆಕಾಯಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ

3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಬೆಂಡೆಕಾಯಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ ಕಿಚನ್ ಟವೆಲ್‌ನಲ್ಲಿ ಅದನ್ನು ಮುಚ್ಚಿಡಿ ಇದರಿಂದ ಹೆಚ್ಚುವರಿ ಎಣ್ಣೆಯನ್ನು ಬಟ್ಟೆ ಹಿಡಿದಿಡುತ್ತದೆ.

4. ಮತ್ತೊಮ್ಮೆ ಬಾಣಲೆಗೆ ಎಣ್ಣೆ ಸುರಿಯಿರಿ. ಮತ್ತು ಮೃದುವಾಗುವರೆಗೆ ಮತ್ತೊಮ್ಮೆ ಹುರಿಯಿರಿ. ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಜೀರಿಗೆಯೊಂದಿಗೆ ಒಗ್ಗರಣೆಯನ್ನು ಮಾಡಿ. ಮತ್ತು ಕಂದು ಬಣ್ಣ ಬರಲು ಹುರಿಯುತ್ತಿರಿ.

5. ಈರುಳ್ಳಿ ಮತ್ತು ಶುಂಠಿಯನ್ನು ಬಾಣಲೆಗೆ ಹಾಕಿ ಹುರಿಯಿರಿ. ಮೆಣಸಿನ ಹುಡಿ, ಅರಿಶಿನ, ಕೊತ್ತಂಬರಿ ಹುಡಿ, ಕಸೂರಿ ಮೇಥಿ, ಅಮೆಚೂರ್ ಹುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಗರಂ ಮಸಾಲಾ ಹುಡಿಯನ್ನು ಬಾಣಲೆಗೆ ಹಾಕಿ ಮತ್ತು ಚೆನ್ನಾಗಿ ಫ್ರೈ ಮಾಡಿ.

6. ಇನ್ನು ಮಸಾಲೆಗೆ ಟೊಮೇಟೊವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ಈಗ ಗೋಡಂಬಿ ಮತ್ತು ತೆಂಗಿನ ಪೇಸ್ಟ್ ಅನ್ನು ಸೇರಿಸಿಕೊಳ್ಳಿ ಮತ್ತು ಮೊಸರನ್ನು ಬಾಣಲೆಗೆ ಹಾಕಿ.

7. ಬೆಂಡೆಕಾಯಿ ಹೋಳುಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದರಿಂದ ಮಸಾಲೆಯೊಂದಿಗೆ ಬೆಂಡೆಕಾಯಿ ಬೆರೆದುಕೊಳ್ಳುತ್ತದೆ. ಈಗ ನೀರು ಹಾಕಿ ಮತ್ತು ಬೇಯಲು ಬಿಡಿ.

8. ನಿಮ್ಮ ಕರಿಯ ಅಳತೆಯನ್ನು ನೋಡಿಕೊಳ್ಳಿ. ನಿಮಗೆ ನೀರು ಹೇಗೆ ಬೇಕೋ ಹಾಗೆ ಸೇರಿಸಿಕೊಳ್ಳಿ. ಚಪಾತಿ ಮತ್ತು ಅನ್ನದೊಂದಿಗೆ ಈ ಕರಿ ಹೇಳಿಮಾಡಿಸಿದ್ದಾಗಿದ್ದು ಪ್ರಯತ್ನಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ನಮಗೆ ಬರೆಯಿರಿ.

English summary

Hyderabadi Special: Curd And Bhindi Masala Curry

There are several authentic Hyderabadi veg recipes as well that are a hit in most places. Have you heard of the famous dahi bhindi masala recipe? Well, if not, we suggest you prepare this once. It will surely leave everyone asking for more. Read below to know about the complete list of ingredients required and the procedure to follow.
Story first published: Sunday, May 28, 2017, 7:01 [IST]
Subscribe Newsletter