For Quick Alerts
ALLOW NOTIFICATIONS  
For Daily Alerts

ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸಲಿರುವ ಪನ್ನೀರ್ ರೆಸಿಪಿ!

|

ನಾವು ಭಾರತೀರಿಗೆ ಖಾರದ ತಿಂಡಿಗಳೆಂದರೆ ತುಂಬಾ ಇಷ್ಟ. ರಸ್ತೆ ಬದಿಯ ತಿಂಡಿಯಿಂದ ಹಿಡಿದು ಚೈನೀಸ್ ತಿಂಡಿಯವರೆಗೂ ನಾವು ಪ್ರತಿಯೊಂದು ಖಾದ್ಯವನ್ನು ಮೆಚ್ಚಿಕೊಳ್ಳುತ್ತೇವೆ. ಚೈನೀಸ್ ಸಿಜ್ವನ್ ಕೂಡ ಭಾರತೀಯ ರುಚಿಯನ್ನು ತನ್ನಲ್ಲಿ ಮಿಶ್ರಗೊಳಿಸಿರುತ್ತದೆ. ಆದ್ದರಿಂದಲೇ ಚೈನೀಸ್ ಖಾದ್ಯ ಅಷ್ಟೊಂದು ರುಚಿಯಾಗಿರುತ್ತದೆ.

ಭಾರತೀಯ-ಚೈನೀಸ್ ರುಚಿಯಲ್ಲಿ ಹದವಾಗಿ ಬೆರೆತು ನಿಮ್ಮ ನಾಲಗೆಯ ರುಚಿಯನ್ನು ತಣಿಸುವ ಖಾದ್ಯದೊಂದಿಗೆ ಇಂದಿನ ಲೇಖನ ವಿಶೇಷವಾಗಿದೆ. ಹಾಗಿದ್ದರೆ ಆ ಡಿಶ್ ಅನ್ನು ಅರಿಯುವ ಕುತೂಹಲ ನಿಮ್ಮಲ್ಲಿದ್ದರೆ ತಿಳಿಸುವ ಖಾತರ ನಮಗೂ ಇದೆ. ಚಿಲ್ಲಿ ಪನ್ನೀರ್ ಎಂದು ಕರೆಯಲಾದ ಈ ಡಿಶ್ ಆಂಗ್ಲೋ ಚೈನೀಸ್ ಸ್ವಾದವನ್ನು ತನ್ನಲ್ಲಿ ಹಿತಮಿತವಾಗಿ ಬೆರೆತಿರುವಂಥದ್ದು.

ಈ ಪನ್ನೀರ್ ಕಟ್ಲೇಟ್ ಮೈ ತೂಕ ಹೆಚ್ಚಿಸುವುದಿಲ್ಲ

Hot & Spicy Chilli Paneer Recipe

ಹಾಗಿದ್ದರೆ ಮತ್ತೇಕೆ ತಡ? ನಿಮ್ಮ ಬಾಯಲ್ಲಿ ನೀರೂರಿಸುವಂತೆ ಮಾಡುವ ಈ ಖಾದ್ಯವನ್ನು ತಿನ್ನುವ ಬಯಕೆ ನಿಮ್ಮಲ್ಲಿ ಹೆಚ್ಚಾಗುತ್ತಿದ್ದರೆ ಕೆಳಗಿನ ತಯಾರಿಸುವ ವಿಧಾನದ ಕಡೆಗೆ ಗಮನ ನೀಡಿ.

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
*ಪನ್ನೀರ್ - 500 ಗ್ರಾಮ್
*ಕೋರ್ನ್‌ಫ್ಲೋರ್ - 2 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಬ್ಲಾಕ್ ಪೆಪ್ಪರ್ ಪೌಡರ್ - 1/2 ಸ್ಪೂನ್
*ಬೆಳ್ಳುಳ್ಳಿ - 5 ಎಸಳು (ಜಜ್ಜಿದ)
*ಈರುಳ್ಳಿ - 2 (ಕತ್ತರಿಸಿದ್ದು)
*ಕ್ಯಾಪ್ಸಿಕಂ - 2 (ತುಂಡರಿಸಿದ್ದು)
*ಹಸಿಮೆಣಸು - 4 (ಸೀಳಿದ್ದು)
*ತರಕಾರಿ - 1/2 ಕಪ್
*ಸೋಯಾ ಸಾಸ್ - 2 ಸ್ಪೂನ್
*ಚಿಲ್ಲಿ ಸಾಸ್ - 1 ಸ್ಪೂನ್
*ಟೊಮೇಟೊ ಸಾಸ್ - 1 ಸ್ಪೂನ್
*ಅಜಿನಮೋಟೋ - ಸ್ವಲ್ಪ
*ಎಣ್ಣೆ - ಹುರಿಯಲು
ಎಣ್ಣೆ - 2 ಸ್ಪೂನ್

ನೀರೂರಿಸುವ ಸ್ಪೈಸಿ ಆಚಾರಿ ಪನೀರ್ ರೆಸಿಪಿ

ಮಾಡುವ ವಿಧಾನ:
1. ಕಾರ್ನ್‌ಫ್ಲೋರ್ ಅನ್ನು ಉಪ್ಪಿನೊಂದಿಗೆ ಮಿಶ್ರ ಮಾಡಿ ಇದಕ್ಕೆ ಬ್ಲಾಕ್ ಪೆಪ್ಪರ್ ಸೇರಿಸಿ ಮಿಶ್ರಣವನ್ನು ದಪ್ಪಗೊಳಿಸಿ.

2. ಪ್ಯಾನ್‌ನಲ್ಲಿ ಹುರಿಯಲು ಎಣ್ಣೆಯನ್ನಿಡಿ.

3. ಕಾರ್ನ್‌ಫ್ಲೋರ್ ಮಿಶ್ರಣದಲ್ಲಿ ಪನ್ನೀರ್ ತುಂಡುಗಳನ್ನು ಮುಳುಗಿಸಿ ಎಣ್ಣೆಯಲ್ಲಿ ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

4. ಹುರಿದ ಪನ್ನೀರ್ ತುಂಡುಗಳನ್ನು ತಟ್ಟೆಗೆ ವರ್ಗಾಯಿಸಿ.

5. ಎರಡು ಸ್ಪೂನ್‌ನಷ್ಟು ಎಣ್ಣೆಯನ್ನು ಪ್ಯಾನ್‌ನಲ್ಲಿ ಬಿಸಿ ಮಾಡಿ ಜಜ್ಜಿದ ಬೆಳ್ಳುಳ್ಳಿಯನ್ನು ಅದಕ್ಕೆ ಹಾಕಿ ಸ್ವಲ್ಪ ಸಮಯ ಹುರಿಯಿರಿ.

6. ಇದೀಗ ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಪ್ಯಾನ್‌ಗೆ ಹಾಕಿ ಹಾಗೂ ಅವು ಕಂದು ಮಿಶ್ರಿತ ಚಿನ್ನದ ಬಣ್ಣಕ್ಕೆ ಬರುವವರೆಗೆ ಅದನ್ನು ಹುರಿಯಿರಿ.

7. ಉದ್ದಕೆ ಸೀಳಿದ ಹಸಿಮೆಣಸನ್ನು, ತರಕಾರಿ ಮತ್ತು ಉಪ್ಪನ್ನು ಪ್ಯಾನ್‌ಗೆ ಹಾಕಿ ಮತ್ತು ಅವುಗಳನ್ನು ಬೇಯಿಸಿ.

8. ಅಜಿನಮೋಟೋ, ಸೋಯಾ ಸಾಸ್, ಚಿಲ್ಲಿ ಸಾಸ್ ಅನ್ನು ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಚೆನ್ನಾಗಿ ತಿರುಗಿಸಿ.

9. 1/4 ಕಪ್ ನೀರಿಗೆ ಒಂದು ಸ್ಪೂನ್‌ನಷ್ಟು ಕಾರ್ನ್‌ಫ್ಲೋರ್ ಅನ್ನು ಮಿಶ್ರ ಮಾಡಿ ಮತ್ತು ಪ್ಯಾನ್‌ಗೆ ಇದನ್ನು ಹಾಕಿ. ಚೆನ್ನಾಗಿ ಮಿಶ್ರ ಮಾಡಿ.

10. ಸಣ್ಣ ಉರಿಯಲ್ಲಿ 4-5 ನಿಮಿಷಗಳ ಕಾಲ ಇದನ್ನು ಬೇಯಿಸಿ ಮತ್ತು ನೀರು ಇಂಗುವವರೆಗೆ ಕಾಯಿರಿ.

11. ಈಗ ಪನ್ನೀರ್ ತುಂಡುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.

12. ಒಮ್ಮೆ ಆದ ನಂತರ ಉರಿಯನ್ನು ನಿಲ್ಲಿಸಿ ಮತ್ತು ಬಿಸಿಯಾಗಿ ಬಡಿಸಿ.

ಬಿಸಿಯಾದ ಖಾರ ಚಿಲ್ಲಿ ಪನ್ನೀರ್ ಸವಿಯಲು ಸಿದ್ಧವಾಗಿದೆ. ಫ್ರೈಡ್ ರೈಸ್ ಅಥವಾ ನೂಡಲ್ಸ್‌ನೊಂದಿಗೆ ಈ ಇಂಡೋ - ಚೈನೀಸ್ ಡಿಶ್ ಅನ್ನು ಸವಿಯಿರಿ.

English summary

Hot & Spicy Chilli Paneer Recipe

We Indians love spicy food. We fall in love with any food which sets our tongue on fire. We can convert the most bland dish into the the most colourful and fiery dish through our culinary skills.
Story first published: Saturday, May 24, 2014, 11:00 [IST]
X
Desktop Bottom Promotion