Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯುಗಾದಿಗಾಗಿ ರುಚಿಯಾದ ಚನ್ನಾ ಉಸಾಲ್ ರೆಸಿಪಿ
ಈ ಯುಗಾದಿಗಾಗಿ ನಿಮ್ಮ ನಾಲಿಗೆ ಹಸಿವನ್ನು ತಣಿಸುವ ಮತ್ತು ರುಚಿಕರವಾಗಿರುವ ಚನ್ನಾ ಉಸಾಲ್ ರೆಸಿಪಿಯನ್ನು ತಯಾರಿಸಬಹುದು. ಈ ಹಬ್ಬದ ಸೀಸನ್‌ಗಾಗಿ ಸುಲಭವಾಗಿ ತಯಾರಿಸಲಾದ ಮತ್ತು ಆರೋಗ್ಯಕರವಾಗಿರುವ ಡಿಶ್ ಇದಾಗಿದೆ.
ಬೇಯಿಸಿದ ಮೊಳಕೆಬರಿಸಿದ ಚನ್ನಾ ಹಾಗೂ ಸುಗಂಧಿತ ಹದವಾಗಿ ಬೇಯಿಸಿದ ಮಸಾಲೆಯೊಂದಿಗೆ ಚನ್ನಾ ಉಸಾಲ್‌ನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಕೊತ್ತಂಬರಿ ಪೇಸ್ಟ್ ಅನ್ನು ಸೇರಿಸಿದರೆ, ಪರಿಮಳ ಸಖತ್ತಾಗಿ ಇರುವುದರ ಜೊತೆಗೆ ನಿಜಕ್ಕೂ ಇದು ಇನ್ನಷ್ಟು ಸ್ವಾದಪೂರ್ಣವಾಗಿರುತ್ತದೆ.
ಇನ್ನೇಕೆ ತಡ, ಸ್ವಾದಿಷ್ಟವಾದ ಚನ್ನಾ ಉಸ್ಲಿಯನ್ನು ಮನೆಯಲ್ಲೇ ತಯಾರಿಸಿ ಮತ್ತು ಆರೋಗ್ಯಪೂರ್ಣ ಹಬ್ಬ ಆಚರಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಿಧ ವಿಧ ಪಲ್ಯ ನಿಮ್ಮ ಲಂಚ್ ಬಾಕ್ಸ್‌ಗಾಗಿ!

ಪ್ರಮಾಣ: 4
ಸಿದ್ದತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
.ಮೊಳಕೆ ಬರಿಸಿದ ಚನ್ನಾ 1ಕಪ್ (ಬೇಯಿಸಿದ್ದು)
.ಬೆಳ್ಳುಳ್ಳಿ - 5 ಎಸಳು (ಕೊಚ್ಚಿದ)
.ಕರಿಬೇವಿನೆಲೆ - 5-6
.ಜೀರಿಗೆ - 1 ಸ್ಪೂನ್ (ಹುಡಿಮಾಡಿದ)
.ಲಿಂಬೆರಸ - 2 ಸ್ಪೂನ್
.ಗರಂ ಮಸಾಲಾ ಪೌಡರ್- 1/2 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ತೆಂಗಿನ ತುರಿ - 1/2 ಕಪ್ (ತುರಿದ)
.ಕೊತ್ತಂಬರಿ ಸೊಪ್ಪು - 1 ಸಣ್ಣ ಕಟ್ಟು
.ಹಸಿಮೆಣಸು - 3
.ಈರುಳ್ಳಿ - 1 (ಕತ್ತರಿಸಿದ್ದು)
.ಎಣ್ಣೆ - 2 ಸ್ಪೂನ್
.ನೀರು - 2 ಕಪ್‌ಗಳು
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿ ಸ್ಪೆಶಲ್ ಮಸಾಲಾ ಗರೇಲು ರೆಸಿಪಿ!
ಮಾಡುವ ವಿಧಾನ:
1. ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ನುಣ್ಣಗೆ ಪೇಸ್ಟ್‌ನಂತೆ ಗ್ರೈಂಡ್ ಮಾಡಿ.
2.ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಜಜ್ಜಿದ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಕರಿಬೇವಿನೆಸಳನ್ನು ಅದಕ್ಕೆ ಹಾಕಿ.
3.ಸಿದ್ಧಪಡಿಸಿದ ಪೇಸ್ಟ್ ಅನ್ನು ಅದಕ್ಕೆ ಹಾಕಿ ಮತ್ತು ಮಧ್ಯಮ ಉರಿಯಲ್ಲಿ 2-3 ನಿಮಿಷಗಳ ಕಾಲ ಬೇಯಿಸಿ.
4.ನೀರು ಹಾಕಿ ಅದನ್ನು ಕುದಿಸಿ.
5.ಬೇಯಿಸಿದ ಚನ್ನಾ, ಉಪ್ಪು, ಗರಂ ಮಸಾಲಾ ಪೌಡರ್, ಲಿಂಬೆ ರಸ ಅದಕ್ಕೆ ಸೇರಿಸಿ ಮತ್ತು 8-10 ನಿಮಿಷಗಳ ಕಾಲ ಬೇಯಿಸಿ.
6.ಪೂರ್ತಿ ತಯಾರಾದ ನಂತರ ಗ್ಯಾಸ್ ಆಫ್ ಮಾಡಿ ಮತ್ತು ಕತ್ತರಿಸಿದ ಈರುಳ್ಳಿಯಿಂದ ಅಲಂಕರಿಸಿ.
ಚನ್ನಾ ಉಸಾಲ್ ಸವಿಯಲು ಸಿದ್ಧವಾಗಿದೆ. ಇದನ್ನು ಬಿಸಿ ಬಿಸಿಯಾಗಿ ಸೇವಿಸಿ.



Click it and Unblock the Notifications
