For Quick Alerts
ALLOW NOTIFICATIONS  
For Daily Alerts

ಚಪಾತಿ ಜೊತೆ ಘಮ ಘಮ ಬೆಂಡೆಕಾಯಿ ಹುಳಿ ಗೊಜ್ಜು

|
Bendekayi Palya Recipe
ಬೆಂಡೆಕಾಯಿಯಿಂದ ರುಚಿಯಾದ ಗೊಜ್ಜು ತಯಾರಿಸಿದರೆ ರೊಟ್ಟಿ, ಚಪಾತಿ, ದೋಸೆ, ಪರೋಟ ಯಾವುದಾದರಿಗೊಂದಾದರೂ ಬೆರೆಸಿ ಸ್ವಾದ ಸವಿಯಬಹುದು. ಬೆಂಡೆಕಾಯಿಯೊಂದಿಗೆ ಬೆರೆಸುವ ಹುಳಿ ಮಸಾಲೆ ನಿಮ್ಮ ನಾಲಗೆ ಬಯಸುವ ರುಚಿಯನ್ನು ಒಂದಿಷ್ಟೂ ಕಡಿಮೆಗೊಳಿಸದೆ ನೀಡುತ್ತೆ. ಈ ಬೆಂಡೆಕಾಯಿ ಹುಳಿ ಗೊಜ್ಜು ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ. ನೋಡಬಹುದು.

ಬೆಂಡೆಕಾಯಿ ಗೊಜ್ಜಿಗೆ ಬೇಕಾಗುವ ಪದಾರ್ಥ:
* 1/4 ಕೆ.ಜಿ ಎಳೆ ಬೆಂಡೆಕಾಯಿ
* 6 ಹಸಿರು ಮೆಣಸಿನಕಾಯಿ
* ಕೊತ್ತಂಬರಿ
* ಅರ್ಧ ತೆಂಗಿನ ಕಾಯಿ ತುರಿ
* ಹುಣಸೆ ಹಣ್ಣು
* ಸ್ವಲ್ಪ ಬೆಲ್ಲ
* ಉಪ್ಪು, ಸಾಸಿವೆ

ಬೆಂಡೆಕಾಯಿ ಹುಳಿ ಗೊಜ್ಜು ತಯಾರಿಸುವ ವಿಧಾನ:

* ತೆಂಗಿನ ಕಾಯಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸಾಸಿವೆ, ಸ್ವಲ್ಪ ಬೆಲ್ಲ ಇವೆಲ್ಲವನ್ನೂ ಹಾಕಿ ರುಬ್ಬಿಕೊಳ್ಳಬೇಕು.

* ಬಾಣಲೆಯಲ್ಲಿ ಸ್ವಲ್ಪ ಕಡಲೆ ಕಾಯಿ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಬೆಂಡೆ ಕಾಯಿಯನ್ನು ಹುರಿದುಕೊಳ್ಳಬೇಕು.

* ಚೆನ್ನಾಗಿ ಹುರಿದ ನಂತರ ರುಬ್ಬಿಟ್ಟಿದ್ದ ಮಿಶ್ರಣವನ್ನು ಬಾಣಲೆಗೆ ಹಾಕಿ ಅದರಲ್ಲಿ ಹುಣಸೆ ಹಣ್ಣಿನ ರಸವನ್ನು ಬೆರೆಸಬೇಕು.

* ಈ ಮಿಶ್ರಣ ಕುದಿಯಲು ಆರಂಭಿಸುತ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಬೆರಸಬೇಕು.

* ಎಲ್ಲವೂ ಬೆಂದ ಮೇಲೆ ಇನ್ನೊಂದು ಪ್ರತ್ಯೇಕ ಬಾಣಲೆಯಲ್ಲಿ ಸಾಸಿವೆ ಒಗ್ಗರಣೆ ನೀಡಿದರೆ ಬೆಂಡೆ ಕಾಯಿ ಹುಳಿ ಗೊಜ್ಜು ತಿನ್ನಲು ಮಸಜಾಗಿರುತ್ತೆ.

English summary

Okra Recipe | Bendekayi Palya Recipe | ಬೆಂಡೆಕಾಯಿ ಖಾದ್ಯ | ಬೆಂಡೆಕಾಯಿ ಹುಳಿ ಗೊಜ್ಜು ಮಾಡುವ ವಿಧಾನ

Let your day to day breakfast get nutritious and tasty with this okra recipe. Finely chopped okra are boiled with spicy masala will satisfy your taste buds. Take a look to know how to prepare this Bendekayi Huli Gojju recipe.
Story first published: Tuesday, December 6, 2011, 13:03 [IST]
X
Desktop Bottom Promotion