For Quick Alerts
ALLOW NOTIFICATIONS  
For Daily Alerts

ತೊಗರಿಬೇಳೆ ಮತ್ತು ಮೆಂತೆಸೊಪ್ಪಿನ ಪಲ್ಯ

By Super
|
Fenugreek and Toordal palya
ಕಹಿ ಕಹಿ ಕಹಿಯೆಂದು ದೂರಮಾಡದಿರಿ, ಈ ಮೆಂತೆಸೊಪ್ಪಿನ ಕಹಿಯ ಮಹಿಮೆಯನೇದಾರೂ ಬಲ್ಲಿರಾ ಬಲ್ಲಿರಾ? ಪ್ರೊಟೀಸ್ ಮತ್ತು ಸಿ ಅನ್ನಾಂಗದಿಂದ ಶ್ರೀಮಂತವಾಗಿರುವ ಮೆಂತೆಯನ್ನು ಶತಮಾನಗಳಿಂದ ಆರೋಗ್ಯವೃದ್ಧಿಗಾಗಿ ಉಪಯೋಗಿಸಲಾಗುತ್ತಿದೆ. ಭಾರತೀಯ ಆಯುರ್ವೇದದಲ್ಲಿ ಮೆಂತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಪುರುಷರಲ್ಲಿ ವೀರ್ಯೋತ್ಪಾದನೆಯಿಂದ ಹಿಡಿದು ಅಜೀರ್ಣತೆ, ಗಂಟಲುನೋವು ಮತ್ತು ಮಧುಮೇಹಕ್ಕೆ ಕೂಡ ಮೆಂತೆ ರಾಮಬಾಣ. ಗಮನಿಸಿ, ಮೆಂತೆ ಹೃದಯಬೇನೆಗೆ ಕೂಡ ಉಪಶಮನಕಾರಿ.

* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :

* ತೊಗರಿಬೇಳೆ - 1/2 ಕಪ್
* ಮೆಂತೆ ಸೊಪ್ಪು - 2 ಕಟ್ಟು
* ಈರುಳ್ಳಿ - 2
* ಬೆಳ್ಳುಳ್ಳಿ - 4 ಎಸಳು
* ಗರಂ ಮಸಾಲ - 1/4 ಚಮಚ
* ಅಚ್ಚ ಕಾರದಪುಡಿ - 1/2 ಚಮಚ
* ಹುಚ್ಚೆಳ್ಳು ಪುಡಿ - 1/2 ಚಮಚ
* ಅರಿಶಿಣ ಸ್ವಲ್ಪ
* ರುಚಿಗೆ ತಕ್ಕ ಉಪ್ಪು
* ಒಗ್ಗರೆಣೆಗೆ - ಸಾಸಿವೆ, ಜೀರಿಗೆ, ಕರಿಬೇವು.

ಮಾಡುವ ವಿಧಾನ :

ಮೊದಲಿಗೆ ತೊಗರಿಬೇಳೆ ಯನ್ನು ಪೂರ್ತಿ ಬೇಯಿಸದೇ ಅರ್ಧದಷ್ಟು ಮಾತ್ರ ಬೇಯಿಸಿಟ್ಟುಕೊಳ್ಳಿ. ಮೆಂತೆ ಸೊಪ್ಪು ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ 3 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಹಾಗು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ಆಮೇಲೆ ಹೆಚ್ಚಿಟ್ಟುಕೊಂಡ ಮೆಂತೆ ಸೊಪ್ಪು, ಬೆಳ್ಳುಳ್ಳಿ ಹಾಕಿ ಅರ್ಧ ಬೆಂದ ನಂತರ, ಬೇಯಿಸಿದ ತೊಗರಿಬೇಳೆ, ಅರಿಶಿಣ, ಗರಂ ಮಸಾಲ, ಹುಚ್ಚೆಳ್ಳು ಪುಡಿ, ಅಚ್ಚ ಕಾರದಪುಡಿ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯುವಷ್ಟು ನೀರು ಹಾಕಿ ಮಿಕ್ಸ್ ಮಾಡಿ. ಬೆಂದ ಮೇಲೆ ಕೆಳಗಿಳಿಸಿದರೆ ಪಲ್ಯ ರೆಡಿ.

ಇದು ಕೂಡ ಅನ್ನ, ಚಪಾತಿ, ರೊಟ್ಟಿ, ಎಲ್ಲದಕ್ಕೂ ಸಹ ಚೆನ್ನಾಗಿರುತ್ತದೆ. ಮೆಂತೆ ಸೊಪ್ಪಿನ ಬದಲು ಪಾಲಕ್ ಸೊಪ್ಪು, ಸಬ್ಬಸಿಗೆಸೊಪ್ಪು, ದಂಟು ಮತ್ತು ಹರಿವೆ ಸೊಪ್ಪು ಹಾಗೂ ಬೇರೆ ತರಹದ ಸೊಪ್ಪುಗಳನ್ನು ಕೂಡ ಹಾಕಿ ಪಲ್ಯ ಮಾಡಬಹುದು.

X
Desktop Bottom Promotion