For Quick Alerts
ALLOW NOTIFICATIONS  
For Daily Alerts

ನವರಾತ್ರಿಗೆ ನವಧಾನ್ಯದ ಉಸುಳಿ ನೈವೇದ್ಯಕ್ಕಿರಲಿ

|
Navadanya Recipe for Navratri Festival
ನವರಾತ್ರಿ ಹಬ್ಬ ಇನ್ನು ಹತ್ತಿರದಲ್ಲಿದೆ (ಸೆ. 28 ರಿಂದ ಅ. 06 ರವರೆಗೆ). ಹಬ್ಬಗಳ ಸರಮಾಲೆ ತೆರೆದುಕೊಳ್ಳುವ ನವರಾತ್ರಿಗೆ ವಿಶೇಷ ತಿಂಡಿ ತಿನಿಸುಗಳೂ ಇರಲೇಬೇಕು. ಆದ್ದರಿಂದ ಈ ಬಾರಿ ನವರಾತ್ರಿಗೆ ನವಧಾನ್ಯಗಳಿಂದ ಉಸುಳಿ ಮಾಡಿ ನೈವೇದ್ಯವನ್ನು ಅರ್ಪಿಸಿದರೆ ವಿಶೇಷವಾಗಿರುತ್ತೆ. ಆರೋಗ್ಯಕ್ಕೂ ಪೂರಕವಾಗಿರುವ ಈ ನವಧಾನ್ಯದ ಉಸುಳಿ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಿ.

ನವಧಾನ್ಯ ಉಸುಳಿಗೆ ಬೇಕಾಗುವ ಪದಾರ್ಥಗಳು:
* ಹುರುಳಿ ಕಾಳು, ಅಲಸಂದೆ ಕಾಳು, ಹೆಸರು ಕಾಳು, ಕಿಡ್ನಿ ಬೀನ್, ತರಣಿ ಕಾಳು, ಒಣಗಿದ ಬಟಾಣಿ ಕಾಳು, ಸೋಯಾ, ಕಡಲೆ ಕಾಳು, ಕಾಬುಲ್ ಕಡಲೆ ಕಾಳು ತಲಾ 1 1/4 ಕಪ್.
* 2 ಚಮಚ ಹುರಿದು ಪುಡಿ ಮಾಡಿದ ಎಳ್ಳು
* 1 ಚಮಚ ಸಾಸಿವೆ
* 3-4 ಕತ್ತರಿಸಿದ ಹಸಿ ಮೆಣಸಿನ ಕಾಯಿ
* ತೆಂಗಿನ ತುರಿ
* ಕರಿಬೇವು, ಕೊತ್ತಂಬರಿ
* 2 ಚಮಚ ನಿಂಬೆ ರಸ
* ಎಣ್ಣೆ, ಉಪ್ಪು

ನವಧಾನ್ಯ ಉಸುಳಿ ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲ ಧಾನ್ಯಗಳನ್ನು ನೀರಿನಲ್ಲಿ ನೆನೆಸಿ ನಂತರ ಸ್ವಲ್ಪ ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಬೇಯಿಸಬೇಕು. ನಂತರ ಅದನ್ನು ಕೆಳಗಿಳಿಸಿ ನೀರನ್ನು ಬಸಿದುಕೊಳ್ಳಬೇಕು.

ಪಾತ್ರೆಯೊಂದಕ್ಕೆ ಎಣ್ಣೆ ಹಾಕಿ ಕಾಯಿಸಿಕೊಂಡು ಅದಕ್ಕೆ ಸಾಸಿವೆ, ಕರಿಬೇವು, ಹಸಿರು ಮೆಣಸಿನ ಕಾಯಿ ಮತ್ತು ಎಳ್ಳಿನ ಪುಡಿಯನ್ನು ಹಾಕಿ ಹುರಿದುಕೊಳ್ಳಬೇಕು. ಬಸಿದ ಕಾಳುಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿಯಬೇಕು. ಅವಶ್ಯಕವೆನಿಸಿದರೆ ಮಾತ್ರ ಸ್ವಲ್ಪ ಉಪ್ಪನ್ನು ಹಾಕಿಕೊಳ್ಳಬೇಕು.

ಈಗ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ ಅದಕ್ಕೆ ತೆಂಗಿನ ತುರಿ ಮತ್ತು ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಹಾಕಿಕೊಳ್ಳಬೇಕು. ಕೊನೆಯಲ್ಲಿ ಇದರ ಮೇಲೆ ನಿಂಬೆರಸ ಹಾಕಿ ಚೆನ್ನಾಗಿ ತಿರುಗಿಸಬೇಕು. ಈಗ ನವಧಾನ್ಯದ ಉಸುಳಿ ತಯಾರಾಗಿದೆ.

English summary

Navadanya Recipe for Navratri Festival | Navdanya Sundal Recipe | ನವರಾತ್ರಿ ಹಬ್ಬಕ್ಕೆ ನವಧಾನ್ಯದ ಉಸುಳಿ ವಿಶೇಷ

For this Navratri Festival, try out a special Navdanya Sundal Recipe for naivaidyam. This recipe includes a mixture of nine different pulses can be given to guests also. Take a look how to prepare Navdanya Sundal Recipe.
Story first published: Monday, September 26, 2011, 15:47 [IST]
X
Desktop Bottom Promotion