For Quick Alerts
ALLOW NOTIFICATIONS  
For Daily Alerts

ಆಹಾರ ಪ್ರಿಯರಿಗೆ ಗೇಗೋ ಸೈಡ್ ಡಿಶ್

|
Ghegho recipe
ಗೇಗೋ, ಇದು ಉತ್ತರ ಭಾರತದ ವಿಶೇಷ ಖಾದ್ಯ. ಈ ಮಸಾಲೆ ಭರಿತ ಗೇಗೋ ರೆಸಿಪಿಯನ್ನ ನೀವು ತಿಂದು ನೋಡಿದರೆ ನಿಮಗೆ ಇಷ್ಟ ಆಗೋದ್ರಲ್ಲಿ ಸಂದೇಹವೇ ಇಲ್ಲ. ಪಾಲಾಕ್ ನಿಂದ ತಯಾರಿಸೋ ಈ ಗೇಗೋನ ಮಾಡಿ ರೋಟಿ ಜೊತೆಗೋ ಇಲ್ಲ ಚಪಾತಿಯೊಂದಿಗೋ ಜೊತೆ ಮಾಡಿಕೊಂಡು ತಿನ್ನಿ, ಆಗ ಅದರ ರುಚಿಯನ್ನ ನೀವೇ ವರ್ಣಿಸೋದಕ್ಕೆ ಶುರು ಮಾಡ್ತೀರ.

ಬೇಕಾಗುವ ಪದಾರ್ಥಗಳು:

* 2 ಕಪ್ ತೊಳೆದು ಕತ್ತರಿಸಿದ ಪಾಲಾಕ್ ಸೊಪ್ಪು
* 3 ಗ್ಲಾಸ್ ಮಜ್ಜಿಗೆ
*1\2 ಕಪ್ ಕಡಲೆಹಿಟ್ಟು
*ಸ್ವಲ್ಪ ಇಂಗು
* ಸ್ವಲ್ಪ ಅಡುಗೆ ಸೋಡಾ
* ಎಣ್ಣೆ, ಅರಿಶಿನ, ಕೊತ್ತಂಬರಿ
* ಕೆಂಪು ಮೆಣಸಿನ ಕಾಯಿ ಪುಡಿ
* ಉಪ್ಪು

ಮಾಡುವ ವಿಧಾನ: ಮೊದಲು ಮಜ್ಜಿಗೆಯೊಂದಿಗೆ ಕಡಲೆಹಿಟ್ಟನ್ನು ಬೆರೆಸಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸ್ವಲ್ಪ ಇಂಗು ಮತ್ತು ಪಾಲಾಕನ್ನು ಹಾಕಿ ಕೆಲವು ನಿಮಿಷ ಉರಿಯಬೇಕು. ಅದಕ್ಕೆ ಚಿಟಿಕೆ ಅಡುಗೆ ಸೋಡ ಹಾಕಿ ನೀರು ಬೆರೆಸಿ ಸೊಪ್ಪು ಮೆತ್ತಗಾಗುವವರೆಗೂ ಕುದಿಸಬೇಕು.

ನಂತರ ಕಡಲೆಹಿಟ್ಟು ಮತ್ತು ಮಜ್ಜಿಗೆಯ ಮಿಶ್ರಣ ಸೇರಿಸಿ ಅದಕ್ಕೆ ಅರಿಶಿನ, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು ಮತ್ತು ಕೊತ್ತಂಬರಿಯನ್ನು ಬೆರೆಸಿ ಚೆನ್ನಾಗಿ ತಿರುಗಿಸಬೇಕು. ಗಟ್ಟಿಯಾಗುವವರೆಗೂ ಇದನ್ನು ತಿರುಗಿಸುತ್ತಲೇ ಇರಬೇಕು.

ಇದೀಗ ಗೇಗೋ ತಿನ್ನಲು ರೆಡಿಯಾಗಿದೆ. ಇದನ್ನು ಬಿಸಿ ರೋಟಿಯೊಂದಿಗೆ ತಿಂದು ನೋಡಿ...

English summary

Spinach leaves recipe | Spinach Ghegho recipe | ಪಾಲಾಕ್ ಸೊಪ್ಪಿನ ಖಾದ್ಯಗಳು | ಪಾಲಾಕ್ ಗೇಗೋ ರೆಸಿಪಿ

Know how to make Ghegho, the tasty side dish prepared for rotis in the northern part of India. The spinach curry is a healthy side dish and contains iron and fibre rich ingredients that helps in digestion during the season. Take a look at how to go about with the mouthwatering ghegho recipe.
Story first published: Wednesday, August 3, 2011, 16:55 [IST]
X
Desktop Bottom Promotion