For Quick Alerts
ALLOW NOTIFICATIONS  
For Daily Alerts

ಸಿಹಿ ಹಣ್ಣುಗಳೊಂದಿಗೆ ಹುಳಿ ಸೀಗಡಿಯ ಅಪ್ರತಿಮ ಸಲಾಡ್!

|

ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ನೇರವಾಗಿ ಅವಲಂಬಿತವಾಗಿದೆ. ಇಕ್ಕೆಲಗಳಲ್ಲಿ ಧಾರಾಳವಾಗಿ ಗೋಚರಿಸುವ ಆಹಾರ ಉತ್ಪನ್ನಗಳ ಜಾಹೀರಾತುಗಳು ಬಾಯಿ ಚಪ್ಪರಿಸುವಂತೆ ಮಾಡಿದರೂ ಇವುಗಳು ಆರೋಗ್ಯಕರವೇ ಎಂಬ ಪ್ರಶ್ನೆಗೆ ಮಂದಹಾಸವೇ ಉತ್ತರವಾಗಿ ದೊರಕುತ್ತದೆ.

ಅಂತೆಯೇ ನೋಡಲೂ ಮನಮೋಹಕವಾದ, ಆರೋಗ್ಯಕರವೂ ಆದ ಹಣ್ಣುಗಳ ಸಿಹಿ ಮತ್ತು ಸೀಗಡಿಯ ಹುಳಿ ರುಚಿಯನ್ನು ಮೇಳೈಸಿರುವ ಇಂದಿನ ಸಲಾಡ್ ಮಧ್ಯಾಹ್ನದ ಊಟದ ಬಳಿಕ ಸೇವಿಸಲು ಅತ್ಯುತ್ತಮವಾದ ಆಯ್ಕೆಯಾಗಿದೆ.

ಅತಿ ಕಡಿಮೆ ಸಮಯದಲ್ಲಿ ತಯಾರಿಸಲು ಸಾಧ್ಯವಿರುವುದರಿಂದ ಇದನ್ನು ರಜಾದಿನಗಳಲ್ಲೇ ಮಾಡಬೇಕೆಂದಿಲ್ಲ, ಯಾವುದೇ ದಿನವಾದರೂ ಸರಿ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ದಿನದ ಚಟುವಟಿಕೆಗೆ ಅಗತ್ಯವಾದ ಶಕ್ತಿಯನ್ನೂ ವಿವಿಧ ಹಣ್ಣುಗಳ ಮೂಲಕ ಲಭ್ಯವಾದ ನಾರು ಪಚನಕ್ರಿಯೆಯನ್ನೂ ಸುಲಭಗೊಳಿಸುತ್ತದೆ. ಇಡಿಯ ಕುಟುಂಬದವರು ಮೆಚ್ಚುವ ಈ ಸಲಾಡ್ ಮಾಡುವ ಬಗೆಯನ್ನು ಇಲ್ಲಿ ನೀಡಲಾಗಿದೆ: ರುಚಿಕರವಾದ ಮೊಟ್ಟೆ ಸಲಾಡ್ ರೆಸಿಪಿ

Tangy Shrimp And Fruit Salad

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಐದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಸೀಗಡಿ: 250 ಗ್ರಾಂ (ಸ್ವಚ್ಛಪಡಿಸಿದ್ದು)
*ಈರುಳ್ಳಿ - ½ (ಚಿಕ್ಕದಾಗಿ ಹೆಚ್ಚಿದ್ದು)
*ರಾಸ್ಬೆರಿ ಜ್ಯೂಸ್ - 1 ಕಪ್
*ಸಲಾಡ್ ಗೆ ಉಪಯೋಗಿಸುವ ಹಸಿರು ತರಕಾರಿಗಳು - 50 ಗ್ರಾಂ (ನಿಮ್ಮ ಆಯ್ಕೆಯ)
*ವಿವಿಧ ಹಣ್ಣುಗಳ ಸಾಲಾಡ್ - 1 ½ ಕಪ್ (ನಿಮ್ಮ ಆಯ್ಕೆಯ)
*ಸ್ಟ್ರಾಬೆರಿ - 1 ಕಪ್
*ಕರಿ ಎಳ್ಳು - 1 ಚಿಕ್ಕಚಮಚ
*ಸಕ್ಕರೆಯ ಸಿರಪ್ - 2 ಚಿಕ್ಕ ಚಮಚ (ಬದಲಿಗೆ ಖರ್ಜೂರದ ಸಿರಪ್ ಆಯ್ದುಕೊಳ್ಳಬಹುದು)
*ಉಪ್ಪು ರುಚಿಗನುಸಾರ.

ವಿಧಾನ:
*) ಸ್ವಲ್ಪ ನೀರಿನಲ್ಲಿ ಸೀಗಡಿಯನ್ನು ಕೊಂಚ ಉಪ್ಪು ಬೇಯಿಸಿ. ಸುಮಾರು ಅರ್ಧ ಭಾಗ ಬೆಂದಿದೆ ಅನ್ನುವಾಗ ಇಳಿಸಿ ಸೋಸಿ.
*) ಸೀಗಡಿ, ರಾಸ್ಬೆರಿ ಜ್ಯೂಸ್ ಮತ್ತು ಈರುಳ್ಳಿಯನ್ನು ಚೆನ್ನಾಗಿ ಮಿಶ್ರಣಮಾಡಿ ಹತ್ತುನಿಮಿಷ ಫ್ರಿಜ್ಜಿನಲ್ಲಿಡಿ (ಸೀಗಡಿ ರಾಸ್ಬೆರಿ ಜ್ಯೂಸ್ ಅನ್ನು ಹೀರಿಕೊಂಡು ಕೊಂಚ ಹುಳಿ ಬರುತ್ತದೆ).
*) ಸುಮಾರು ಹತ್ತು ನಿಮಿಷಗಳ ಬಳಿಕ, ಸೀಗಡಿ ಜ್ಯೂಸ್ ಅನ್ನು ಹೀರಿಕೊಂಡಿದೆ ಅಂದಾಗ ಹೊರತೆಗೆದು ಇತರ ಹಣ್ಣುಗಳೊಡನೆ ಮಿಶ್ರಣ ಮಾಡಿ (ಕೆಲವು ಸೀಗಡಿಗಳಿಗೆ ಸುಮಾರು ಇಪ್ಪತ್ತು ನಿಮಿಷಗಳೂ ಬೇಕಾಗಬಹುದು)
*) ಈಗ ಸಕ್ಕರೆಯ ಸಿರಪ್ ಮತ್ತು ಹಸಿರು ತರಕಾರಿಗಳ ಸಲಾಡ್ ಹಾಕಿ ಮಿಶ್ರಣ ಮಾಡಿ.
*) ಇನ್ನು ಇದನ್ನು ಅಗಲವಾದ ಹರಿವಾಣದಲ್ಲಿ ಹರಡಿ (ಅಥವಾ ದೊಡ್ಡ ತಟ್ಟೆಯಲ್ಲಿ) ಮೇಲೆ ಸ್ಟ್ರಾಬೆರಿಗಳನ್ನಿರಿಸಿ ಅಲಂಕರಿಸಿ
*) ತದನಂತರ ಇದರ ಮೇಲೆ ಕರಿ ಎಳ್ಳನ್ನು ಚಿಮುಕಿಸಿ ಆಕರ್ಷಕವಾಗುವಂತೆ ಮಾಡಿ. ಸ್ವಾದಿಷ್ಟ ಸಲಾಡ್ ಈಗ ತಯಾರಾಗಿದೆ

ಸಲಹೆ
1) ಈ ಸಲಾಡ್ ನಲ್ಲಿ ಪ್ರೋಟೀನು ಮತ್ತು ವಿಟಮಿನ್‌ಗಳು ಹೇರಳವಾಗಿರುವುದರಿಂದ ಹೆಚ್ಚು ಶಕ್ತಿಯುತವಾಗಿದೆ.
2) ಗ್ರಿಲ್ ಚಿಕನ್ ಮತ್ತು ಹುರಿದ ಹಾಗೂ ಖಾರವಾದ ಖಾದ್ಯದ ಸೇವನೆಯ ಬಳಿಕ ಈ ಸಲಾಡ್ ಹೆಚ್ಚು ರುಚಿ ನೀಡುತ್ತದೆ.

English summary

Tangy Shrimp And Fruit Salad

Eating healthy food is everybody's motive. Including salads along with your regular meals help you stay healthy as you tend to avoid junk due to the fact that salads keep you filled. Today, we are here to share a tangy shrimp and fruit salad recipe which is really easy to make. Try this yummy, finger licking shrimp and fruit salad recipe this noon with and enjoy it your family!
X
Desktop Bottom Promotion