For Quick Alerts
ALLOW NOTIFICATIONS  
For Daily Alerts

ಖೀಮಾ ಪರೋಟ- ರಂಜಾನ್ ಸ್ಪೆಷಲ್

|

ರಂಜಾನ್ ತಿಂಗಳಿನಲ್ಲಿ ಉಪವಾಸ ಮಾಡುವವರು ಸಂಜೆ ಉಪವಾಸ ಮುರಿಯುವ ಸಮಯಕ್ಕೆ ರುಚಿಕರವಾದ, ಪೋಷಕಾಂಶವಿರುವ ಅನೇಕ ತಿಂಡಿ, ತಿನಿಸುಗಳನ್ನು ಮಾಡುವುದು ಸಹಜ. ಅದರಲ್ಲೂ ನಾನ್ ವೆಜ್ ಸ್ಪೆಷಲ್ ಇದ್ದೇ ಇರುತ್ತದೆ. ಈ ದಿನ ನಾನ್ ವೆಜ್ ಸ್ಪೆಷಲ್ ಆಗಿ ಈ ಖೀಮಾ ಚಿಕನ್ ಟ್ರೈ ಮಾಡಿ.

ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

Stuffed Keema Paratha

ಬೇಕಾಗುವ ಸಾಮಾಗ್ರಿಗಳು
ಮಟನ್ ಖೀಮಾ ಅರ್ಧ ಕೆಜಿ
ಮೊಸರು ಅರ್ಧ ಕಪ್
ಈರುಳ್ಳಿ 2 (ಕತ್ತರಿಸಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿ ಮೆಣಸಿನಕಾಯಿ 2
ರುಚಿಗೆ ತಕ್ಕ ಉಪ್ಪು
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಗರಂ ಮಸಾಲ 1 ಚಮಚ
ನೀರು ಅರ್ಧ ಕಪ್
ಎಣ್ಣೆ 1 ಚಮಚ

ಪರೋಟಕ್ಕೆ
ಮೈದಾ ಹಿಟ್ಟು 2 ಕಪ್
ರುಚಿಗೆ ತಕ್ಕ ಉಪ್ಪು
ಬಿಸಿ ನೀರು
3 ಚಮಚ ಎಣ್ಣೆ

ತಯಾರಿಸುವ ವಿಧಾನ:

* ಖೀಮಾವನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೊಸರು, ಅರಿಶಿಣ ಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ 1 ಗಂಟೆ ಕಾಲ ಇಡಿ.

* ಅರ್ಧ ಗಂಟೆಯ ಬಳಿಕ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ, ಮಿಕ್ಸ್ ಮಾಡಿಟ್ಟ ಖೀಮಾ ಹಾಕಿ, ಗರಂ ಮಸಾಲ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಅರ್ಧ ಗಂಟೆ ಬೇಯಿಸಿ. ( ಹೀಗೆ ಬೇಯಿಸುವಾಗ ತಳ ಹಿಡಯದಂತೆ ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಿ).

* ಖೀಮಾ ಸಂಪೂರ್ಣ ಬೆಂದು, ಡ್ರೈ ರೀತಿ ಆದ ಮೇಲೆ ಉರಿಯಿಂದ ಇಳಿಸಿ, ಪರೋಟ ಮಾಡುವತ್ತ ಗಮನ ಹರಿಸಿ.

* ಪರೋಟದ ಹದಕ್ಕೆ ಮೈದಾ ಹಿಟ್ಟನ್ನು ಕಲೆಸಿ, ಅವುಗಳನ್ನು ಉಂಡೆ ಕಟ್ಟಿ, ನಂತರ ರೌಂಡಾಗಿ ತಟ್ಟಿ, ಅದರಲ್ಲಿ ಖೀಮಾ ಡ್ರೈ ಹಾಕಿ ಪುನಃ ಉಂಡೆ ಕಟ್ಟಿ ತಟ್ಟಿ, ನಂತರ ತವಾದಲ್ಲಿ ಎಣ್ಣೆ ಸವರಿ ಪರೋಟದ ಎರಡೂ ಬದಿ ಬೇಯಿಸಿದರೆ ಖೀಮಾ ಪರೋಟ ರೆಡಿ.

ಇದೇ ರೀತಿ ಉಳಿದ ಪರೋಟಗಳನ್ನು ಮಾಡಿ. ಈಗ ರೆಡಿಯಾದ ಪರೋಟವನ್ನು ಮಟನ್ ಸಾರು ಅಥವಾ ಮೊಸರು ಬಜ್ಜಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

English summary

Stuffed Keema Paratha

Keema paratha is an authentic Indian bread stuffed with minced meat. This dish is originally taken from the royal Mughlai cuisine.Stuffed keema paratha is a perfect recipe to try out during Ramzan. It is tasty, filling and nutritious.
 
X
Desktop Bottom Promotion