ಫಟಾಫಟ್ ರೆಸಿಪಿ: ಬರೀ ಅರ್ಧ ಗಂಟೆಯಲ್ಲಿ ಸಿಗಡಿ ಫ್ರೈ ರೆಡಿ!

By: manu
Subscribe to Boldsky

ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಅದರಲ್ಲಿಯೂ ರಕ್ತವಿಲ್ಲದ ಮೃದು ಜೀವಿಗಳು ಅತಿ ಹೆಚ್ಚು ಆರೋಗ್ಯಕರ. ಸಿಗಡಿ, ಬಿಳಿಯ ಮೀನು, ಚಿಪ್ಪು ಮೊದಲಾದವು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ. ಸಿಗಡಿ ಎಲ್ಲರ ಪ್ರಥಮ ಆಯ್ಕೆಯಾಗಿದೆ.

ಸಿಗಡಿಯನ್ನು ಬಳಸಿ ಸಾವಿರಾರು ವಿಧಾನದ ಅಡುಗೆಗಳನ್ನು ಮಾಡಬಹುದು. ಸಿಗಡಿಯನ್ನು ಸ್ವಚ್ಛಗೊಳಿಸುವುದೇ ದೊಡ್ಡ ಪ್ರಯಾಸದ ಕೆಲಸ. ಒಮ್ಮೆ ಸ್ವಚ್ಛವಾಯಿತೆಂದರೆ ಇದು ಬೇಯಲು ಅತ್ಯಂತ ಕಡಿಮೆ ಸಮಯ ತೆಗೆದುಕೊಳ್ಳುವ ಕಾರಣ ಸ್ವಚ್ಛವಾಗಿಸಿದ ಸಿಗಡಿಯನ್ನು ಫ್ರಿಜ್ಜಿನಲ್ಲಿರಿಸುವ ಮೂಲಕ ತಕ್ಷಣವೇ ಸ್ವಾದಿಷ್ಟಕರ ಅಡುಗೆ ಮಾಡಲು ಸಾಧ್ಯವಾಗುತ್ತದೆ.

ಸಾರಿನಿಂದ ಹಿಡಿದು ಹುರಿಯುವವರೆಗೆ ವಿವಿಧ ಸಂಪ್ರದಾಯಗಳಿಗನುಸಾರವಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಗೋವಾದಲ್ಲಿ ಗೋವನ್ ಪ್ರಾನ್ಸ್ ಕರಿ ಎಂದು ಕರೆಯಲ್ಪಡುವ ಸಾರು ಕೊಂಚ ಭಿನ್ನವಾಗಿ ಪಶ್ಚಿಮ ಬಂಗಾಳದಲ್ಲಿ 'ಬೆಂಗಾಲಿ ಚಿಂಗ್ರಿ ಮಾಲಿಯಾಕರಿ' ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಆಹಾ ಅದೇನು ರುಚಿ, ಮಸಾಲೆಯುಕ್ತ ಸೀಗಡಿ ರೆಸಿಪಿ!

ಒಂದು ವೇಳೆ ಮಸಾಲೆಯುಕ್ತ ಮತ್ತು ಗರಿಗರಿಯಾದ ಸಿಗಡಿಯನ್ನು ನೀವು ತಿನ್ನ ಬಯಸಿದರೆ ಇಂದು ಮಸಾಲೆ ಸಿಗಡಿ ಫ್ರೈ ಯನ್ನೇಕೆ ಪ್ರಯತ್ನಿಸಬಾರದು? ನಿಮ್ಮ ಮನೆಗೆ ಅತಿಥಿಗಳು ಆಗಮಿಸಿದ್ದರೆ ಈ ಖಾದ್ಯ ಔತಣದ ಪ್ರಮುಖ ಆಕರ್ಷಣೆಯಾಗುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ, ಸಂಜೆಯ ಟೀ ಕಾಫಿಯ ಸಮಯದಲ್ಲಿ ಗರಿಗರಿಯಾಗಿ ಸೇವಿಸಲೂ ಸೂಕ್ತವಾಗಿದೆ. ಬನ್ನಿ, ಇದನ್ನು ತಯಾರಿಸುವ ಬಗೆಯನ್ನು ಕಲಿಯೋಣ....

Spicy Prawn Fry Recipe

 ಪ್ರಮಾಣ: ಆರು ಜನರಿಗೆ ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು

*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಸ್ವಚ್ಛಗೊಳಿಸಿದ ಸಿಗಡಿ: 600 ಗ್ರಾಂ (ಬೆನ್ನುಹುರಿಯನ್ನು ನಿವಾರಿಸಿರಬೇಕು)

*ಕೆಂಪು ಮೆಣಸಿನ ಪುಡಿ - 2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ನಾಲ್ಕು ಚಿಕ್ಕ ಚಮಚ)

*ಅರಿಶಿನ ಪುಡಿ - ½ ಚಿಕ್ಕ ಚಮಚ

*ಎಣ್ಣೆ - 5 ದೊಡ್ಡ ಚಮಚ

*ಧನಿಯ ಪುಡಿ (ಕೊತ್ತಂಬರಿ ಪುಡಿ) - 1½ ದೊಡ್ಡ ಚಮಚ

*ಉಪ್ಪು ರುಚಿಗನುಸಾರ

*ಬೆಳ್ಳುಳ್ಳಿ-ಶುಂಠಿ ಪೇಸ್ಟ್ - 1½ ದೊಡ್ಡ ಚಮಚ

*ಈರುಳ್ಳಿ - 1 ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)

*ಕರಿಬೇಬಿನ ಎಲೆಗಳು - 7-8

*ನೀರು - ½ ಕಪ್

*ಲಿಂಬೆರಸ ಕೊಂಚ

*ಕೊತ್ತಂಬರಿ ಸೊಪ್ಪು: ಅಲಂಕರಿಸಲು ಸಾಕಾಗುವಷ್ಟು              ಸೀಗಡಿ ಮೀನಿನ ಫ್ರೈ ರೆಸಿಪಿ 

ವಿಧಾನ

*ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಮೆಣಸಿನ ಪುಡಿ, ಧನಿಯ ಪುಡಿ,ಅರಿಶಿನ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ.

*ಒಂದು ತಳ ಆಳವಿರುವ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೊದಲ ಪಾತ್ರೆಯಿಂದ ಸಿಗಡಿಯನ್ನು ಹಾಕಿ ಇದರ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ.

*ಇನ್ನು ಸತತವಾಗಿ ತಿರುವುತ್ತಾ ಸಿಗಡಿ ಕೊಂಚ ಹುರಿಯಿರಿ. ಬಳಿಕ ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.

*ಬಳಿಕ ಮುಚ್ಚಳವನ್ನು ತೆರೆದು ಚೆನ್ನಾಗಿ ತಿರುವುತ್ತಾ ಸಿಗಡಿಯ ಎಲ್ಲಾ ಭಾಗಗಳು ಸರಿಯಾಗಿ ಬೇಯುವಂತೆ ಇನ್ನಷ್ಟು ಹುರಿಯಿರಿ. ತುಂಬಾ ಒಣಗಿದ್ದಂತೆ ಕಂಡುಬಂದರೆ ಕೊಂಚ ಎಣ್ಣೆಯನ್ನು ಸೇರಿಸಬಹುದು.

*ಮಸಾಲೆಯುಕ್ತ ಸಿಗಡಿ ಫ್ರೈ ಈಗ ತಯಾರಾಗಿದೆ. ಇದಕ್ಕೆ ಕೊಂಚ ಲಿಂಬೆ ರಸ ಸಿಂಪಡಿಸಿ ಮತ್ತು ಕೊತ್ತಂಬರಿ ಸೊಪ್ಪುನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಬಡಿಸಿ.

English summary

Spicy Prawn Fry Recipe

if you want something spicy and crispy to make with prawn, you can try your hands at preparing this spicy prawn curry. It goes well as a starter for your house party or you can have it during the evening with tea or coffee. So, here are the ingredients that are required and the procedure to prepare this amazing snack.
Subscribe Newsletter