For Quick Alerts
ALLOW NOTIFICATIONS  
For Daily Alerts

ಸೀಗಡಿ ಮೀನಿನ ಫ್ರೈ ರೆಸಿಪಿ

|
Prawn Fry Recipe
ಸಮುದ್ರ ಆಹಾರ ಅಧಿಕ ಪೌಷ್ಠಿಕ ಅಂಶಗಳನ್ನು ಹೊಂದಿರುವ ಆಹಾರ. ಸಮುದ್ರ ಆಹಾರಗಳಲ್ಲಿ ಸೀಗಡಿ ಮೀನು ಕೂಡ ಉತ್ತಮವಾದ ಪೋಷಕಾಂಶವನ್ನು ಹೊಂದಿದ್ದು ಇದರಿಂದ ರುಚಿಕರವಾಗಿ, ಅನೇಕ ಬಗೆಯಲ್ಲಿ ಅಡುಗೆಯನ್ನು ತಯಾರಿಸಬಹುದು. ಇವತ್ತು ನಾವು ಸೀಗಡಿ ಮೀನಿನ ಫ್ರೈ ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಯೋಣ.

ಸೀಗಡಿ ಫ್ರೈಗೆ ಬೇಕಾಗುವ ಸಾಮಾಗ್ರಿಗಳು:
* ಒಂದು ಕೆಜಿ ಸೀಗಡಿ
* ದೊಡ್ಡ ಗಾತ್ರದ ಈರುಳ್ಳಿ
* ಅರಿಶಿಣ ಪುಡಿ ಅರ್ಧ ಚಮಚ ಅಥವಾ ಸ್ವಲ್ಪ ಹೆಚ್ಚು
* ಜೀರಿಗೆ ಒಂದು ಚಮಚ
* ಬೆಳ್ಳುಳ್ಳಿ ಎಸಳು 7-8
* ಮೆಣಸಿನ ಪುಡಿ ಒಂದೂವರೆ ಚಮಚ
* ರುಚಿಗೆ ತಕ್ಕ ಉಪ್ಪು
* ಟೊಮೆಟೊ 1
* ಒಂದು ಇಂಚಿನಷ್ಟು ದೊಡ್ಡದಾದ ಶುಂಠಿ (ಜಜ್ಜಿರಬೆಕು)
* ಸ್ವಲ್ಪ ಕರಿಬೇವಿನ ಎಲೆ
* ಎಣ್ಣೆ

ತಯಾರಿಸುವ ವಿಧಾನ:

1. ಸೀಗಡಿ ಮೀನನ್ನು ಸ್ವಚ್ಛಗೊಳಿಸಿದ ನಂತರ ಸ್ವಲ್ಪ ನೀರು ಹಾಕಿ, ಒಂದು ಚಮಚದಷ್ಟು ಉಪ್ಪು, ಒಂದು ಕಪ್ ನೀರು ಹಾಕಿ ಆವಿಯಾಗುವವರೆಗೆ ಬೇಯಿಸಬೇಕು.

2. ನಂತರ ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ 5 ಚಮಚದಷ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಉದ್ದುದ್ದವಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವಾಗ, ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ. ಸ್ವಲ್ಪ ಜಜ್ಜಿದ ಶುಂಠಿ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಮೆಣಸಿನ ಪುಡಿ, ಅರಿಶಿಣ ಪುಡಿ, ಜೀರಿಗೆ, ಸ್ವಲ್ಪ ಉಪ್ಪು , ಕರಿಬೇವಿನ ಎಲೆ ಹಾಕಿ ಮಿಶ್ರ ಮಾಡಬೇಕು.

3. ಈಗ ಬೇಯಿಸಿದ ಸೀಗಡಿ ಮೀನು ಸೇರಿಸಿದರೆ , ಬೇಕಿದ್ದರೆ ಸ್ವಲ್ಪ ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ 5 ನಿಮಿಷ ಬೇಯಿಸಿದರೆ ರುಚಿಕರವಾದ ಸೀಗಡಿ ಮೀನು ಫ್ರೈ ರೆಡಿ.

ಇದನ್ನು ಅನ್ನ ಹಾಗೂ ಪರೋಟ, ಚಪಾತಿ ಜತೆ ತಿನ್ನಬಹುದಾಗಿದೆ.

English summary

Prawn Fry Recipe | Variety Of Fish Fry Recipe | ಸೀಗಡಿ ಮೀನಿನ ಫ್ರೈ ರೆಸಿಪಿ | ಅನೇಕ ಬಗೆಯ ಮೀನಿನ ಖಾದ್ಯಗಳು

Prawn is one of the tasty and healthy sea food. You can prepare variety of food from prawn,. This is good to curry and fry. Today we can learn prawn fry.
Story first published: Saturday, June 23, 2012, 14:19 [IST]
X
Desktop Bottom Promotion