For Quick Alerts
ALLOW NOTIFICATIONS  
For Daily Alerts

ಕೇವಲ 15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪುಲಾವ್ ರೆಸಿಪಿ!

|

ನಾವೆಲ್ಲರು ಕೇವಲ 15 ನಿಮಿಷಗಳಲ್ಲಿ ಒಂದು ಒಳ್ಳೆಯ ಆಹಾರವನ್ನು ಮಾಡಿಕೊಂಡು ತಿನ್ನಲು ಸಾಧ್ಯ ಎಂದರೆ ಏಕೆ ತಾನೇ ಬೇಡ ಅನ್ನುತ್ತೀವಿ. ಪಟಾಪಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ. ಏಕೆಂದರೆ ಈ ಬ್ಯುಸಿ ಜೀವನದಲ್ಲಿ ನಿಧಾನವಾಗಿ, ಅಧಿಕ ಸಮಯ ಅಡುಗೆಗೆ ಮೀಸಲಿಡಲು ಯಾರ ಬಳಿ ತಾನೇ ಸಮಯ ಇದೆ.

ಅದರಲ್ಲೂ ವಾರದ ದಿನಗಳಲ್ಲಿ ಇದು ಕಷ್ಟ ಕಷ್ಟ. ಅದಕ್ಕಾಗಿ ಇಂದು ನಾವು ಕೇವಲ 15 ನಿಮಿಷಗಳಲ್ಲಿ ಪಟಾಪಟ್ ಎಂದು ಮಾಡಬಹುದಾದ, ಮಧ್ಯಾಹ್ನದ ಊಟಕ್ಕೆ ಹೇಳಿ ಮಾಡಿಸಿದಂತಹ ಅನ್ನದ ಬಗೆಯನ್ನು ತಿಳಿಸುತ್ತಿದ್ದೇವೆ ಮಾಡಿಕೊಳ್ಳಿ. ಇದಕ್ಕೆ ನೀವು ರೆಫ್ರಿಜಿರೇಟರಿನಲ್ಲಿರುವ ರಾತ್ರಿ ಉಳಿದ ಅನ್ನವನ್ನು ಬೇಕಾದರು ಬಳಸಬಹುದು ಅಥವಾ ಬೆಳಗ್ಗೆ ತಯಾರಿಸಿದ ಅನ್ನವನ್ನಾದರು ಬಳಸಬಹುದು.

Jhatpat Egg Pulao Recipe In Just 15 Minutes

ಮೊಟ್ಟೆಗಳು ಪ್ರೋಟೀನ್ ಮತ್ತು ಪೋಷಕಾಂಶಗಳ ಸಮೃದ್ಧ ಆಗರವಾಗಿವೆ. ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಈ ಮೊಟ್ಟೆ ಪುಲಾವ್‍‌ವನ್ನು ತಯಾರಿಸಲು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವಂತಹ ಪದಾರ್ಥಗಳನ್ನು ಬಳಸಿಕೊಳ್ಳಬೇಕಷ್ಟೇ. ಬನ್ನಿ ಇನ್ನು ತಡ ಮಾಡದೆ 15 ನಿಮಿಷಗಳಲ್ಲಿ ಎಗ್ ಪಲಾವನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಒಮ್ಮೆ ಪ್ರಯತ್ನಿಸಿ ನೋಡಿ. ಟಪ್ಪರ್ ಡಬ್ಬಿಗೆ ಹೇಳಿ ಮಾಡಿಸಿದ ಫಟಾಫಟ್ ಪುಲಾವ್

ಮೂವರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
ಅಡುಗೆ ಮಾಡಲು ತಗುಲುವ ಸಮಯ: 15 ನಿಮಿಷಗಳು

ಬೇಕಾದ ಪದಾರ್ಥಗಳು
*ಅನ್ನ - 2 ಕಪ್
*ಮೊಟ್ಟೆ- 2
*ಈರುಳ್ಳಿ- 2 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ- 4 ತುಂಡುಗಳು (ಕತ್ತರಿಸಿದಂತಹುದು)
*ಟೊಮೇಟೊ - 2 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ- 2 (ಕತ್ತರಿಸಿದಂತಹುದು)
*ತಾಜಾ ಅವರೆ ಕಾಳು - 1/4 ಕಪ್
*ಅರಿಶಿಣ ಪುಡಿ- 1/2 ಟೀ.ಚಮಚ
*ಖಾರದ ಪುಡಿ- 1 ಟೀ.ಚಮಚ
*ಕರಿ ಮೆಣಸಿನ ಪುಡಿ - 1 ಟೀ.ಚಮಚ
*ಗರಂ ಮಸಾಲ ಪುಡಿ- 1 ಟೀ.ಚಮಚ
*ಉರಿದ ಎಳ್ಳಿನ ಪುಡಿ - 1 ಟೀ.ಚಮಚ
*ಉಪ್ಪು- ರುಚಿಗೆ ತಕ್ಕಷ್ಟು
*ಎಣ್ಣೆ - 2 ಟೀ.ಚಮಚ

ತಯಾರಿಸುವ ವಿಧಾನ ಬಾಯಿ ಚಪ್ಪರಿಸುವಂತೆ ಮಾಡುವ ಮೆಂತ್ಯೆ ಪುಲಾವ್
*ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿ, ಅದರಲ್ಲಿ ಈರುಳ್ಳಿಗಳನ್ನು ಹಾಕಿಕೊಂಡು ಹೊಂಬಣ್ಣ ಬರುವವರೆಗೆ ಉರಿಯಿರಿ.
*ನಂತರ ಕತ್ತರಿಸಿದ ಬೆಳ್ಳುಳ್ಳಿಗಳನ್ನು ಸೇರಿಸಿ, ಕೆಲವು ಕ್ಷಣಗಳವರೆಗೆ ಉರಿಯಿರಿ.
*ಮೊಟ್ಟೆಗಳನ್ನು ಹುಷಾರಾಗಿ ಒಡೆದು, ಬಾಣಲೆಗೆ ಹಾಕಿ. ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತ ಬೇಯಿಸಿ.
*ಈಗ ಉಪ್ಪು, ಕರಿ ಮೆಣಸು, ಅರಿಶಿಣ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊ, ಅವರೆಕಾಳುಗಳನ್ನು ಹಾಕಿ 3-4 ನಿಮಿಷಗಳ ಕಾಲ ಬೇಯಿಸಿ.
*ಈಗ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಗರಂ ಮಸಾಲ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ.
*ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ. ಈ ಖಾದ್ಯದ ಮೇಲೆ ಎಳ್ಳು ಪುಡಿಯನ್ನು ಚಿಮುಕಿಸಿ. ಬಿಸಿಯಾಗಿರುವಾಗಲೆ ಬಡಿಸಿ. ಈಗ ನೋಡಿ ರುಚಿ ರುಚಿಯಾದ ಮೊಟ್ಟೆ ಪುಲಾವ್ ನಿಮ್ಮ ಮುಂದೆ ಸಿದ್ಧವಾಗಿರುತ್ತದೆ. ಇದನ್ನು ಸಾರಿನ ಜೊತೆಗೆ ಅಥವಾ ಸಾರಿಲ್ಲದೆ ಬೇಕಾದರು ಸೇವಿಸಬಹುದು.

ಪೋಷಕಾಂಶಗಳ ಪ್ರಮಾಣ
*ಈ ಎಗ್ ಪುಲಾವ್ ಆರೋಗ್ಯಕಾರಿಯಾಗಿರುತ್ತದೆ. ಇದರಲ್ಲಿ ಕ್ಯಾಲೊರಿಗಳ ಪ್ರಮಾಣ ಅಧಿಕವಾಗಿರುವುದಿಲ್ಲ. ಕಬ್ಬಿಣಾಂಶ, ಪ್ರೋಟೀನ್ ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರುವ ಈ ಖಾದ್ಯವು ಊಟದ ಸಮಯದಲ್ಲಿ ಸೇವಿಸಲು ಹೇಳಿ ಮಾಡಿಸಿದಂತಿರುತ್ತದೆ. ಒಂದು ಪ್ಲೇಟ್ ರುಚಿಕರ ಎಗ್ ಪುಲಾವ್‍ನಲ್ಲಿ ವಿಟಮಿನ್ ಎ ಮತ್ತು ಸಿ ಗಳು ಸಮೃದ್ಧವಾಗಿರುತ್ತದೆ.

ಸಲಹೆಗಳು
*ಈ ಪುಲಾವ್ ಮಾಡಲು ನಿಮ್ಮ ರೆಫ್ರಿಜಿರೇಟರಿನಲ್ಲಿರುವ ಉಳಿಕೆ ಅನ್ನವನ್ನು ಬಳಸಿಕೊಳ್ಳಬಹುದು. ಇದನ್ನು ಮತ್ತಷ್ಟು ಪೋಷಕಾಂಶ ಭರಿತ ಮಾಡಲು ಕೆಲವೊಂದು ತರಕಾರಿಗಳನ್ನು ಬಳಸಿಕೊಳ್ಳಿ. ನಿಮಗೆ ಅವಶ್ಯಕವಿದ್ದಲ್ಲಿ ಕೋಳಿ ಮಾಂಸದ ತುಣುಕುಗಳನ್ನು ಸಹ ಬಳಸಿಕೊಳ್ಳಬಹುದು.

English summary

Jhatpat Egg Pulao Recipe In Just 15 Minutes

All of us love to eat good food and if it gets ready in minutes, then it's more appreciated. Quick recipes are essential for the busy life that we lead. There is hardly any time for long and complicated recipes, especially during the week.
X
Desktop Bottom Promotion