For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಉಪಹಾರಕ್ಕಾಗಿ ರುಚಿಕರವಾದ ಆಮ್ಲೇಟ್ ರೆಸಿಪಿ!

|

ನಿಮ್ಮ ಬೆಳಗ್ಗಿನ ಆಹಾರ ಹೊಟ್ಟೆ ತುಂಬುವಷ್ಟು ಇರದಿದ್ದರೂ ನ್ಯೂಟ್ರೀನ್ ಭರಿತವಾಗಿರಬೇಕು ಎಂಬುದು ಮುಖ್ಯ. ಆದ್ದರಿಂದಲೇ ಮೊಟ್ಟೆಯ ಬಿಳಿ ಭಾಗ ಹಾಗೂ ಓಟ್‌ಮೀಲ್ ಅನ್ನು ಇಂದಿನ ಬ್ರೇಕ್ ಫಾಸ್ಟ್‌ಗೆ ತಯಾರಿಸಲು ನಾವು ಸಿದ್ಧರಾಗಿರುವುದು.

ಮೊಟ್ಟೆಯ ಬಿಳಿ ಭಾಗವು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಹಾಗೂ ನಿಮ್ಮ ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಇದು ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್ ಅನ್ನು ಹೊಂದಿದ್ದು ನಿಮ್ಮ ದೇಹಕ್ಕೆ ಪೂರಕವಾಗಿದೆ. ಆದ್ದರಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದ ಕಾಳಜಿಗಾಗಿ ನಾವಿಂದು ಮೊಟ್ಟೆ ಬಿಳಿ ಭಾಗ ಹಾಗೂ ಓಟ್ ಮೀಲ್ ರೆಸಿಪಿಯನ್ನು ಇಲ್ಲಿ ನೀಡುತ್ತಿದ್ದು ಇದರಿಂದ ಪರ್ಫೆಕ್ಟ್ ಆದ ಬ್ರೇಕ್‌ಫಾಸ್ಟ್ ಅನ್ನು ನಿಮಗೆ ತಯಾರಿಸಬಹುದು.

ಮೊಟ್ಟೆಶಾವಿಗೆ ಬಾತ್ ಮಾಡಿ ನೋಡಿ

Egg White Oatmeal Omelette For Breakfast

ಪ್ರಮಾಣ: 2
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
.ಓಟ್‌ಮೀಲ್ - 1 ಕಪ್
ಮೊಟ್ಟೆಯ ಬಿಳಿ ಭಾಗ - 4
ಕಾಳುಮೆಣಸು - 1/2 ಸ್ಪೂನ್
ಹಾಲು - 1/2 ಕಪ್
ಆಲೀವ್ ಆಯಿಲ್ -1 ಸ್ಪೂನ್
ಓರ್ಗೇನೋ - 1/2 ಸ್ಪೂನ್
ಚೀಸ್ - 1/2 ಕ್ಯೂಬ್
ಸಿಲಂತ್ರೋ - 2 ಸ್ಟಾಕಲ್ (ಅಲಂಕಾರಕ್ಕೆ)
ಉಪ್ಪು - ರುಚಿಗೆ ತಕ್ಕಷ್ಟು

ತ್ವರಿತ ಬ್ರೇಕ್‌ಫಾಸ್ಟ್‌‌ಗಾಗಿ ಎಗ್ ಸಲ್ಮಾಯ್ ಸ್ಯಾಂಡ್‌ವಿಚ್!

ಮಾಡುವ ವಿಧಾನ:
*ಸಣ್ಣ ಉರಿಯಲ್ಲಿ ಹಾಲು ಬಿಸಿ ಮಾಡಿ
*ನಂತರ ಅದಕ್ಕೆ ಓಟ್‌ಮೀಲ್ ಅನ್ನು ಹಾಕಿ ಚೆನ್ನಾಗಿ ಕಲಸಿ.
*ಓಟ್ಸ್‌ಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ.
*ಈಗ ನೀವು ಅದಕ್ಕೆ ಕಾಳುಮೆಣಸಿನ ಹುಡಿಯ ಒಗ್ಗರಣೆಯನ್ನು ನೀಡಬಹುದು ಅಥವಾ ನಂತರ ಕೂಡ ಸೇರಿಸಬಹುದು.
*ಸಣ್ಣ ಉರಿಯಲ್ಲಿ ಆಲೀವ್ ಆಯಿಲ್ ಅನ್ನು ಬಿಸಿ ಮಾಡಿ.
*ನಂತರ ಪ್ಯಾನ್‌ಗೆ ಮೊಟ್ಟೆ ಹಾಗೂ ಓಟ್ಸ್ ಹಿಟ್ಟನ್ನು ಹುಯ್ಯಿರಿ.
*ಎರಡೂ ಬದಿ ಚೆನ್ನಾಗಿ ಬೆಯುವಂತೆ ಆಮ್ಲೇಟ್ ಅನ್ನು ಕಾಯಿಸಿ.
*ಕಾಳುಮೆಣಸಿನ ಹುಡಿ ಅಥವಾ ಓರ್ಗೋನೋವನ್ನು ಆಮ್ಲೇಟ್ ಮೇಲೆ ಹಾಕಿ ತುರಿದ ಚೀಸ್ ಅನ್ನು ಕೂಡ ನಿಮಗೆ ಸೇರಿಸಬಹುದು.
*ನಂತರ ಸಿಲಂತ್ರೋ ಸ್ಟಾಕಲ್‌ನೊಂದಿಗೆ ಆಮ್ಲೇಟ್ ಅನ್ನು ಅಲಂಕರಿಸಿ.
*ಇದೀಗ ಮೊಟ್ಟೆಯ ಬಿಳಿ ಭಾಗ ಹಾಗೂ ಓಟ್‌ಮೀಲ್ ಬೆರೆತ ಆಮ್ಲೇಟ್ ಸವಿಯಲು ಸಿದ್ಧವಾಗಿದೆ.

X
Desktop Bottom Promotion