For Quick Alerts
ALLOW NOTIFICATIONS  
For Daily Alerts

ಕ್ಯಾಪ್ಸಿಕಂ ಮಟನ್ ಮಿನ್ಸ್-ರಂಜಾನ್ ಸ್ಪೆಷಲ್

|

ರಂಜಾನ್ ತಿಂಗಳಿನಲ್ಲಿ ವಿಶೇಷ ಅಡುಗೆ ಮಾಡಬಯಸುವುದಾದರೆ, ನಿಮಗಾಗಿ ಇಲ್ಲಿದೆ ಸ್ಪೆಷಲ್ ಕ್ಯಾಪ್ಸಿಕಂ ಮಟನ್ ಮಿನ್ಸ್ ರೆಸಿಪಿ.

ಮಟನ್ ಖೀಮಾವನ್ನು ಕ್ಯಾಪ್ಸಿಕಂ ಜೊತೆ ಬೇಯಿಸಿ ತಯಾರಿಸುವ ಈ ಕ್ಯಾಪ್ಸಿಕಂ ಮಿನ್ಸ್ ಟೇಸ್ಟ್ ನಲ್ಲಿ ಸೂಪರ್ ಮತ್ತು ಬೇಗನೆ ಜೀರ್ಣವಾಗುವುದು ಕೂಡ (ದಿನಾವಿಡೀ ಉಪವಾಸವಿದ್ದು ನಂತರ ಏನಾದರೂ ತಿನ್ನುವಾಗ ಸುಲಭದಲ್ಲಿ ಜೀರ್ಣವಾಗುವ ಆಹಾರಗಳನ್ನು ತಿಂದರೆ ಒಳ್ಳೆಯದು).

ಇದನ್ನು ತಯಾರಿಸುವ ವಿಧಾನ ಕೂಡ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

Capsicum Mutton Mince: Ramzan Special

ಬೇಕಾಗುವ ಸಾಮಾಗ್ರಿಗಳು
ಖೀಮಾ ಮಟನ್ ಅರ್ಧ ಕೆಜಿ
ಈರುಳ್ಳಿ 2(ಕತ್ತರಿಸಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಟೊಮೆಟೊ 1 (ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2
ಕ್ಯಾಪ್ಸಿಕಂ 1(ಕತ್ತರಿಸಿದ್ದು)
ಮೆಂತೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿದ್ದು 1 ಚಮಚ(Dry fenugreek leaves)
ಮೊಸರು 2 ಚಮಚ
ಕೊತ್ತಂಬರಿ ಸೊಪ್ಪು 2 ಚಮಚ (ಕತ್ತರಿಸಿದ್ದು)
ಖಾರದ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ತಳ ಅಗಲವಿರುವ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಹಸಿ ಮೆಣಸಿನಕಾಯಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ 4-5 ನಿಮಿಷ ಸಾಧಾರಣ ಉರಿಯಲ್ಲಿ ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ.

* ಈಗ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ 3-4 ನಿಮಿಷ ಫ್ರೈ ಮಾಡಿ, ನಂತರ ಖೀಮಾವನ್ನು ಹಾಕಿ, ಸೌಟ್ ನಿಂದ ಚೆನ್ನಾಗಿ ಮಿಕ್ಸ್ ಮಾಡಿ, ಸೌಟ್ ನಿಂದ ಆಡಿಸುತ್ತಾ 5 ನಿಮಿಷ ಬೇಯಿಸಿ.

* ಈಗ ಟೊಮೆಟೊ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಮತ್ತೆ 3-4 ನಿಮಿಷ ಫ್ರೈ ಮಾಡಿ.

* ಈಗ ಖಾರದ ಪುಡಿ, ಮೆಂತೆ ಸೊಪ್ಪಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ 1 ಕಪ್ ನೀರು ಹಾಕಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ 5 ನಿಮಿಷ ಬೇಯಿಸಿ, ನಂತರ ಮೊಸರು ಹಾಕಿ ಖೀಮಾ ಡ್ರೈಯಾಗುವವರೆಗೆ ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ನಂತರ ಉರಿಯಿಂದ ಇಳಿಸಿದರೆ ಕ್ಯಾಪ್ಸಿಕಂ ಮಟನ್ ಮಿನ್ಸ್ ರೆಡಿ.

English summary

Capsicum Mutton Mince: Ramzan Special

In this recipe the mutton mince is cooked with capsicum and a blend of other aromatic spices. The dish gets a tangy flavour due to addition of curd to it. The dish is simple and easy to digest which is very essential after you have fasted for a whole day.
X
Desktop Bottom Promotion