ಗುಜರಾತಿ ಬೇಸನ್ ಖಾಂಡವಿ ರೆಸಿಪಿ, ನೀವೂ ಪ್ರಯತ್ನಿಸಿ ನೋಡಿ

Posted By: Roopa
Subscribe to Boldsky

ಬೇಸನ್ ಖಾಂಡವಿ ಅಥವಾ ಗುಜರಾತಿ ಖಾಂಡವಿ ಎಂದು ಕರೆಯಲಾಗುವ ಈ ಗುಜರಾತಿ ತಿಂಡಿ ಮನೆಯಲ್ಲಿ ತಯಾರಿಸುವುದು ಬಲು ಸುಲಭ. ಇದು ಕಡಲೇ ಹಿಟ್ಟು ಮತ್ತು ಮೊಸರನ್ನು ಬಳಸಿ ಮಾಡುವ ಸಣ್ಣದಾದ, ಮೃದುವಾದ ಒಂದು ತಿನಿಸು. ಬರಿ ಎರಡೇ ಸಾಮಗ್ರಿಯನ್ನು ಬಳಸಿ ಗುಜರಾತಿ ಖಾಂಡವಿಯನ್ನು ಮನೆಯಲ್ಲೇ ತಯಾರಿಸುವುದು ಬಲು ಸುಲಭ. ಇದು ಕಡಿಮೆ ಸಮಯದಲ್ಲಿ ಮಾಡಬಹುದಾದ ಬಾಯಲ್ಲಿ ನೀರು ತರಿಸುವಂತಹ ಒಂದು ತಿಂಡಿ.

ಕಡಲೇ ಹಿಟ್ಟಿನ ಹದ ಸರಿಯಾಗಿರುವುದೇ ಈ ತಿಂಡಿ ಮೃದುವಾಗಿ ರುಚಿಯಾಗಿ ಬರಲು ಮುಖ್ಯ ಕಾರಣ. ಸ್ವಲ್ಪ ಉಪ್ಪುಪ್ಪಾಗಿ ಸ್ವಲ್ಪ ಹುಳಿಯಾಗಿ ಇರುವುದೇ ಈ ತಿಂಡಿಯ ವಿಶೇಷತೆ. ಇದನ್ನು ಸಂಜೆಯ ಟೀ ಸಮಯದಲ್ಲಿ ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್‍ನೊಂದಿಗೆ ತಿನ್ನುತ್ತಾರೆ. ಸಂಜೆಯ ಟೀ ಸಮಯದಲ್ಲಿ ಮನೆ ಮಂದಿಯೊಂದಿಗೆ ಕುಳಿತು ತಿನ್ನುವ ಮೃದುವಾದ,ಬಾಯಲ್ಲಿ ನೀರು ತರಿಸುವಂತಹ ಈ ಬೇಸನ್ ಖಾಂಡವಿ ಅಥವಾ ಗುಜರಾತಿ ಖಾಂಡವಿಯನ್ನು ಮಾಡುವ ವಿಧಾನ ಹೀಗಿದೆ.

ಖಾಂಡವಿ ರೆಸಿಪಿ ವಿಡಿಯೋ

besan khandvi recipe
ಖಾಂಡವಿ ರೆಸಿಪಿ ! ಖಾಂಡವಿ ಮಾಡುವ ವಿಧಾನ ! ಗುಜರಾತಿ ಖಾಂಡವಿ ರೆಸಿಪಿ ವಿಡಿಯೋ
Prep Time
10 Mins
Cook Time
35M
Total Time
45 Mins

Recipe By: ಪ್ರಿಯಾಂಕಾ ತ್ಯಾಗಿ

Recipe Type: ಸ್ನ್ಯಾಕ್ಸ್

Serves: 4 ಜನರಿಗೆ ಸಾಕಾಗುವಷ್ಟು

Ingredients
 • ಕಡಲೇ ಹಿಟ್ಟು-1ಕಪ್

  ಮೊಸರು-1/2ಕೆಜಿ

  ನೀರು-1ಕಪ್

  ಅರಿಶಿನ - 1 ಟೀ ಚಮಚ

  ಇಂಗು-1/2 ಟೀ ಚಮಚ

  ಎಣ್ಣೆ-3- ಟೀ ಚಮಚ

  ಸಾಸಿವೆ-1 ಟೀ ಚಮಚ

  ಕರಿಬೇವಿನ ಎಲೆ -5 ರಿಂದ 6

  ಸಣ್ಣಗೆ ಹೆಚ್ಚಿದ ಕೊತ್ತಂಬರಿ- 4ಟೀ ಚಮಚ

  ಕಾಯಿ ತುರಿ- 4 ಟೀ ಚಮಚ

Red Rice Kanda Poha
How to Prepare
 • 1. ಮೊದಲು ಮೊಸರನ್ನು ಸಣ್ಣ ಪಾತ್ರೆಯಲ್ಲಿ ಸರಿಯಾಗಿ ವಿಕ್ಸ್ ಮಾಡಿ

  2. ಇದಕ್ಕೆ ಅರಿಶಿನ, ಇಂಗು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ.

  3. ಇನ್ನು ಕಡಲೇ ಹಿಟ್ಟನ್ನು ಹಾಕಿ ತೆಳುವಾಗಿ ಹರಿಯುವ ಹಿಟ್ಟಿನ ಹದಕ್ಕೆ ಕಲಿಸಿ.

  4. ಒಂದು ಕಡಾಯಿ (ಪಾತ್ರೆ) ಸಣ್ಣ ಉರಿಯಲಿಟ್ಟು ಈ ಮಿಶ್ರಣವನ್ನು ಅದರಲ್ಲಿ ಹಾಕಿ.

  5. ತದ ನಂತರ ಸಣ್ಣ ಉರಿಯಲ್ಲೆ ಕೈಬಿಡದೆ ಗಂಟಾಗದ ರೀತಿಯಲ್ಲಿ ಮಿಶ್ರಣ ಗಟ್ಟಿಯಾಗುವ ವರೆಗೆ ಕೈಯಾಡಿಸಿ.

  6. ಅದೇ ಸಮಯದಲ್ಲಿ 1 ಅಥವಾ 2 ತಟ್ಟೆಗೆ ಎಣ್ಣೆ ಸವರಿ ಇಡಿ.

  7. ಮಿಶ್ರಣವನ್ನು 5 ನಿಮಿಷ ಆರಲು ಬಿಡಿ.

  8. ನಂತರ 2 ಪೀಸ್‌ಗಳಾಗಿ ಮಾಡಿ

  9. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಹಾಗು ಕಾಯಿ ತುರಿಯನ್ನು ಅದರ ಮೇಲೆ ಉದುರಿಸಿ.

  10. ಬಿರುಕು ಬಿಡದ ರೀತಿಯಲ್ಲಿ ಖಾಂಡವಿಯನ್ನು ರೋಲ್ ಮಾಡಿ.

  11. ಕೊನೆಯಲ್ಲಿ ಎಣ್ಣೆಯಲ್ಲಿ ಸಾಸಿವೆ,ಕರಿಬೇವು ಸಿಡಿಸಿ ಉಳಿದ ಕೊತ್ತಂಬರಿ ಹಾಗು ಕಾಯಿ ತುರಿಯನ್ನು ಅದರ ಮೇಲೆ ಉದುರಿಸಿ.

Instructions
 • 1. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಹಾಗು ಕಾಯಿ ತುರಿಯನ್ನು ಒಂದು ಸಣ್ಣ ಬಟ್ಟಲಿನಲ್ಲಿ ಮಿಕ್ಸ್ ಮಾಡಿ ಇಡಿ.
 • 2. ಖಾಂಡವಿ ಬೆಂದಿರುವುದೇ ಎಂದು ತಿಳಿಯಲು, ಸ್ವಲ್ಪ ಮಿಶ್ರಣವನ್ನು ತಟ್ಟೆಯಲ್ಲಿ ತೆಗೆದು ಆರಿದ ನಂತರ ರೋಲ್ ಮಾಡಿ ನೋಡಿ.ಸರಿಯಾಗಿ ಬಿರುಕು ಬಿಡದೆ ಪೂರ್ಣವಾಗಿ ಬಂದರೆ ಮಿಶ್ರಣವು ಸರಿಯಾಗಿದ್ದು ತಿನ್ನಲು ಸಿದ್ಧ ಎಂದರ್ಥ.
Nutritional Information
 • ಸರ್ವಿಂಗ್ ಸೈಜ್ - 15 ಪೀಸ್
 • ಕ್ಯಾಲೋರಿಸ್ - 94 cal
 • ಫ್ಯಾಟ್ - 4.5 g
 • ಪ್ರೋಟೀನ್ - 3.8 g
 • ಕಾಬ್ರೋಹೈಡ್ರೇಟ್ - 9.4 g
 • ಫೈಬರ್ - 2.5 g

ಮಾಡುವ ವಿಧಾನ:

1. ಮೊದಲು ಮೊಸರನ್ನು ಸಣ್ಣ ಪಾತ್ರೆಯಲ್ಲಿ ಸರಿಯಾಗಿ ವಿಕ್ಸ್ ಮಾಡಿ.

besan khandvi recipe
besan khandvi recipe

2. ಇದಕ್ಕೆ ಅರಿಶಿನ ಇಂಗು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ.

besan khandvi recipe
besan khandvi recipe
besan khandvi recipe

3. ಇನ್ನು ಕಡಲೇ ಹಿಟ್ಟನ್ನು ಹಾಕಿ ತೆಳುವಾಗಿ ಹರಿಯುವ ಹಿಟ್ಟಿನ ಹದಕ್ಕೆ ಕಲಿಸಿ.

besan khandvi recipe
besan khandvi recipe

4. ಒಂದು ಕಡಾಯಿ (ಪಾತ್ರೆ) ಸಣ್ಣ ಉರಿಯಲಿಟ್ಟು ಈ ಮಿಶ್ರಣವನ್ನು ಅದರಲ್ಲಿ ಹಾಕಿ.

besan khandvi recipe

5. ತದ ನಂತರ ಸಣ್ಣ ಉರಿಯಲ್ಲೆ ಕೈಬಿಡದೆ ಗಂಟಾಗದ ರೀತಿಯಲ್ಲಿ ಮಿಶ್ರಣ ಗಟ್ಟಿಯಾಗುವ ವರೆಗೆ ಕೈಯಾಡಿಸಿ.

besan khandvi recipe

6. ಅದೇ ಸಮಯದಲ್ಲಿ 1 ಅಥವಾ 2 ತಟ್ಟೆಗೆ ಎಣ್ಣೆ ಸವರಿ ಇಡಿ.

besan khandvi recipe
besan khandvi recipe
besan khandvi recipe

7. ಮಿಶ್ರಣವನ್ನು 5 ನಿಮಿಷ ಆರಲು ಬಿಡಿ.

besan khandvi recipe

8. ನಂತರ 2" ಪೀಸ್‌ಗಳಾಗಿ ಮಾಡಿ.

besan khandvi recipe

9. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಹಾಗು ಕಾಯಿ ತುರಿಯನ್ನು ಅದರ ಮೇಲೆ ಉದುರಿಸಿ.

besan khandvi recipe

10. ಬಿರುಕು ಬಿಡದ ರೀತಿಯಲ್ಲಿ ಖಾಂಡವಿಯನ್ನು ರೋಲ್ ಮಾಡಿ.

besan khandvi recipe

11. ಕೊನೆಯಲ್ಲಿ ಎಣ್ಣೆಯಲ್ಲಿ ಸಾಸಿವೆ ಕರಿಬೇವು ಸಿಡಿಸಿ ಉಳಿದ ಕೊತ್ತಂಬರಿ ಹಾಗು ಕಾಯಿ ತುರಿಯನ್ನು ಅದರ ಮೇಲೆ ಉದುರಿಸಿ.

besan khandvi recipe

12. ಇದಕ್ಕೆ ಸಾಸಿವೆ ಬೀಜಗಳನ್ನು ಸೇರಿಸಿ ಮತ್ತು ಅದನ್ನು ಬೇರ್ಪಡಿಸಲು ಅವಕಾಶ ಮಾಡಿಕೊಡಿ.

besan khandvi recipe

13. ಇನ್ನು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಉರಿಯನ್ನು ಆಫ್ ಮಾಡಿ.

besan khandvi recipe
besan khandvi recipe

14. ಇದನ್ನು ಖಂಡ್ವಿ ಮೇಲೆ ಸುರಿಯಿರಿ, ಹಾಗೂ ಕೊಬ್ಬರಿ-ಕೊತ್ತಂಬರಿ ಮಿಶ್ರಣದಿಂದ ಅಲಂಕರಿಸ.

besan khandvi recipe
[ 5 of 5 - 83 Users]