For Quick Alerts
ALLOW NOTIFICATIONS  
For Daily Alerts

ಮ್ಯಾಗಿ ಎಳೆಗಳಂಥ ರುಚಿರುಚಿ ಹೋಮ್ ಮೇಡ್ ಶಾವಿಗೆ ರೆಸಿಪಿ

Posted By:
|

ಮ್ಯಾಗಿ, ನೂಡಲ್ಸ್ ಇವೆಲ್ಲವೂ ನಮ್ಮ ದೈನಂದಿನ ಆಹಾರಗಳಲ್ಲ. ಚೀನಿಯರು ಹೆಚ್ಚಾಗಿ ಇಂತಹ ಆಹಾರವನ್ನು ಸೇವಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.

ಆದರೆ ಭಾರತೀಯ ಆಹಾರ ಪದ್ದತಿಯಲ್ಲೂ ಕೂಡ ಈ ರೀತಿ ಎಳೆಎಳೆಯಾಗಿ ತಯಾರಿಸುವ ಖಾದ್ಯಗಳಿದ್ದವು. ಒತ್ತು ಶಾವಿಗೆ, ಖಾರದ ಶಾವಿಗೆ, ಕರುಂಕರುಂ ಎನ್ನುವ ಗರಿಗರಿ ಶಾವಿಗೆ ಸಂಡಿಗೆ ಇತ್ಯಾದಿಗಳು ಭಾರತೀಯ ಆಹಾರ ಪದ್ಧತಿಯಲ್ಲ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.

home made shavige recipe

ನಮ್ಮ ಅಜ್ಜಿ ಒಂದು ಕಥೆ ಹೇಳುತ್ತಿದ್ದರು. ಹಿಂದೊಮ್ಮೆ ವಿದೇಶಿಗನೊಬ್ಬ ನಮ್ಮಲ್ಲಿ ತಯಾರಿಸಿದ ಶಾವಿಗೆ ನೋಡಿ ಎಷ್ಟು ದಿನದಿಂದ ಇಷ್ಟು ತೆಳು ಮಾಡಿ ಅಡುಗೆ ಮಾಡೋಕೆ ಪ್ರಾರಂಭಿಸಿದ್ದಿರಿ ಎಂದು ಕೇಳಿದ್ದನಂತೆ. ಆನಂತರ ವಿದೇಶದಲ್ಲೂ ಶಾವಿಗೆ ಮಾಡುವ ಪದ್ಧತಿ ಶುರುವಾಯ್ತು ಎಂಬುದು ಅವರ ಜಾನಪದದ ನಗೆಚಟಾಕಿಯ ಕಥೆಯ ಸಾರಾಂಶವಾಗಿತ್ತು.

ನಾವಿಂದು ಅಕ್ಕಿಯಿಂದ ಮನೆಯಲ್ಲಿಯೇ ಶಾವಿಗೆ ತಯಾರಿಸುವುದು ಹೇಗೆ ಎಂಬ ಬಗ್ಗೆ ನಿಮಗೆ ಸರಳವಾಗಿ ತಿಳಿಸಿಕೊಡುತ್ತಿದ್ದೇವೆ. ಸ್ವಲ್ಪ ಹೆಚ್ಚು ಸಮಯ ಹಿಡಿಯುವ ಅಡುಗೆಯೇ ಆಗಿದ್ದರೂ ಮನೆಯಲ್ಲೇ ತಾಜಾವಾಗಿ ತಯಾರಿಸುವುದರಿಂದಾಗಿ ಇದರ ಗುಣಮಟ್ಟದ ಬಗ್ಗೆ ಚಕಾರವಿಲ್ಲ. ಖಂಡಿತ ನೀವು ಈ ವಿಧಾನದ ಅಡುಗೆಯನ್ನು ಮನೆಯಲ್ಲಿ ಪ್ರಾರಂಭಿಸುವುದರಿಂದಾಗಿ ಹೆಚ್ಚು ಆರೋಗ್ಯವಾಗಿರುವುದಕ್ಕೆ ಸಾಧ್ಯವಾಗುತ್ತದೆ.

ಒಣ ಶಾವಿಗೆಯನ್ನು ಪ್ಯಾಕ್ ಮಾಡುವ ಯಾವುದೋ ಯುಟ್ಯೂಬ್ ವೀಡಿಯೋ ನೋಡಿ ಒಮ್ಮೆ ವಾಕರಿಕೆ ಬರುವಂತಾಗಿತ್ತು. ಹಾಗಾಗಿ ಇದೀಗ ಪ್ಯಾಕ್ಡ್ ಶಾವಿಗೆ ಪ್ಯಾಕ್ ಗೆ ಗುಡ್ ಬಾಯ್ ಹೇಳಿ ಮನೆಯಲ್ಲೇ ಶಾವಿಗೆ ತಯಾರಿಸುವುದಕ್ಕೆ ನಾವಂತೂ ಮುಂದಾಗಿದ್ದೇವೆ. ಹಾಗಾಗಿ ನಿಮಗೂ ಹೇಳಿಕೊಡುತ್ತಿದ್ದೇವೆ.ಮುಂದೆ ಓದಿ.

home made shavige recipe, ಒತ್ತು ಶಾವಿಗೆ ರೆಸಿಪಿ
home made shavige recipe, ಒತ್ತು ಶಾವಿಗೆ ರೆಸಿಪಿ
Prep Time
30 Mins
Cook Time
15M
Total Time
45 Mins

Recipe By: Sushma Chatra

Recipe Type: breakfast

Serves: 4

Ingredients
  • ಬೇಕಾಗುವ ಸಾಮಗ್ರಿಗಳು-

    ಅಕ್ಕಿ - ಒಂದು ಸೇರು

    ನೀರು- ರುಚಿಗೆ ತಕ್ಕಷ್ಟು

    ಉಪ್ಪು - ನಾಲ್ಕು ಲೋಟ

Red Rice Kanda Poha
How to Prepare
  • ಮಾಡುವ ವಿಧಾನ -

    . ಅಕ್ಕಿಯನ್ನು ನೀವು ಶಾವಿಗೆ ತಯಾರಿಸುವುದಕ್ಕೂ 6 ತಾಸುಗಳ ಮುಂಚೆ ನೀರಿನಲ್ಲಿ ತೊಳೆದು ನೆನೆಸಿಡಿ.

    . ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿವಾಗ ಅಗತ್ಯವಿರುವಷ್ಟು ನೀರು ಸೇರಿಸಿಕೊಳ್ಳಿ.

    . ದೋಸೆ ಹಿಟ್ಟಿನ ಹದದಲ್ಲಿ ಅಕ್ಕಿಯ ರುಬ್ಬಿದ ಮಿಶ್ರಣ ಸಿದ್ಧವಾಗಲಿ.

    . ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ

    . ನಂತರ ಅದನ್ನು ಒಂದು ಬಾಣಲೆಯಲ್ಲಿ ಹಾಕಿ ಕೈಯಾಡುತ್ತಾ ಮಗಚುತ್ತಲೆ ಇರಿ. ರಾಗಿಮುದ್ದೆ ಮಾಡುವಾಗ ಅನುಸರಿಸುವ ವಿಧಾನವನ್ನು ಅನುಸರಿಸಬೇಕಾಗುತ್ತದೆ.

    . ಮಿಶ್ರಣವು ಗಟ್ಟಿಯಾಗಿ ಉಂಡೆಕಟ್ಟುವ ಹದಕ್ಕೆ ತಲುಪಿದ ನಂತರ ಬಾಣಲೆಯನ್ನು ಒಲೆಯಿಂದ ಇಳಿಸಿ. ಹದವಾಗಿ ಮಿಶ್ರಣವು ತಣಿಯಲು ಬಿಡಿ.

    . ನಂತರ ನಿಮ್ಮ ಶಾವಿಗೆ ಅಚ್ಚಿನೊಳಗೆ ಎಷ್ಟು ದೊಡ್ಡ ಉಂಡೆಯನ್ನು ಹಾಕುವುದಕ್ಕೆ ಸಾಧ್ಯವಿದೆಯೋ ಅಷ್ಟು ದೊಡ್ಡದಾದ ಉದ್ದನೆಯ ಅಂದರೆ ಸಿಲಿಂಡರ್ ಆಕೃತಿಯ ಉಂಡೆಗಳನ್ನು ತಯಾರಿಸಿ.

    . ಬಿಸಿಯಾದ ಮಿಶ್ರಣದಿಂದ ಉಂಡೆಯನ್ನು ತಯಾರಿಸಬೇಕಾಗಿರುವುದರಿಂದಾಗಿ ಸ್ವಲ್ಪ ನೀರನ್ನು ಮುಟ್ಟುತ್ತಾ ಮುಟ್ಟುತ್ತಾ ಉಂಡೆ ತಯಾರಿಸಿದರೆ ಕೈ ಸುಡುವುದಿಲ್ಲ.

    . ತಯಾರಿಸಿದ ಉಂಡೆಗಳನ್ನು ಅಟ್ಟದಲ್ಲಿ ಇಟ್ಟು ಸುಮಾರು 30 ನಿಮಿಷ ಬೇಯಿಸಿ.

    . ಬೆಂದ ಉಂಡೆಗಳನ್ನು ಇದೀಗ ಶಾವಿಗೆ ಅಚ್ಚಿನೊಳಗೆ ಹಾಕಿ ಒತ್ತಬೇಕಾಗುತ್ತದೆ.

    . ಅನೇಕ ರೀತಿಯ ಶಾವಿಗೆ ಅಚ್ಚುಗಳಿರುತ್ತದೆ. ತಾಮ್ರದ, ಹಿತ್ತಾಳೆಯ, ಮರದ ಶಾವಿಗೆ ಅಚ್ಚುಗಳು ಲಭ್ಯ. ಅಷ್ಟೇ ಅಲ್ಲ ಒಬ್ಬರೆ ಶಾವಿಗೆ ತಯಾರಿಸಬಹುದಾದ ಅಚ್ಚುಗಳೂ ಇವೆ.

    . ಶಾವಿಗೆ ಒತ್ತುವಾಗ ಎಳೆಎಳೆಯಾಗಿ, ವೃತ್ತಾಕಾರದಲ್ಲಿ ಸುಂದರವಾಗಿ ಕಾಣುವಂತೆ ಸಿದ್ಧಗೊಳಿಸಿ.

    . ಈ ಶಾವಿಗೆಗೆ ಸಿಹಿಯಾದ ಕಾಯಿಹಾಲು, ಸಾಸಿವೆ ಎಣ್ಣೆ, ಉಪ್ಪಿನಕಾಯಿ ರಸ, ಸಾಂಬಾರಿನ ಜೊತೆಗೆ ಸೇವಿಸಬಹುದು. ಅಥವಾ ಒಗ್ಗರಣೆ ಹಾಕಿ ರುಚಿರುಚಿಯಾಗಿ ಸೇವಿಸಬಹುದು.

Instructions
  • ಅಕ್ಕಿಯ ಆಹಾರ ಆಗಿರುವುದರಿಂದಾಗಿ ಹೊಟ್ಟೆ ತುಂಬಿಸುತ್ತದೆ. ನಿಧಾನವಾಗಿ ಜೀರ್ಣವಾಗಿ ಆರೋಗ್ಯ ಹೆಚ್ಚಿಸುತ್ತದೆ. ದೇಹಕ್ಕೆ ಬೇಕಾಗುವ ಕ್ಯಾಲೋರಿ ಮತ್ತು ಪೋಷಕಾಂಶಗಳು ಲಭ್ಯವಾಗುತ್ತದೆ. ಪ್ರಮುಖವಾಗಿ ಕಾರ್ಬೋಹೈಡ್ರೇಟ್ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರುಚಿ,ತಾಜಾತನ ಅಧಿಕವಾಗಿರುತ್ತದೆ.
Nutritional Information
  • ಫ್ಯಾಟ್- - 0.3 ಗ್ರಾಂ
  • ಪ್ರೊಟೀನ್- - 2.7 ಗ್ರಾಂ
  • ಕಾರ್ಬೋಹೈಡ್ರೇಟ್- - 28 ಗ್ರಾಂ

ಮಾಡುವ ವಿಧಾನ -
. ಅಕ್ಕಿಯನ್ನು ನೀವು ಶಾವಿಗೆ ತಯಾರಿಸುವುದಕ್ಕೂ 6 ತಾಸುಗಳ ಮುಂಚೆ ನೀರಿನಲ್ಲಿ ತೊಳೆದು ನೆನೆಸಿಡಿ.

. ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿವಾಗ ಅಗತ್ಯವಿರುವಷ್ಟು ನೀರು ಸೇರಿಸಿಕೊಳ್ಳಿ.

. ದೋಸೆ ಹಿಟ್ಟಿನ ಹದದಲ್ಲಿ ಅಕ್ಕಿಯ ರುಬ್ಬಿದ ಮಿಶ್ರಣ ಸಿದ್ಧವಾಗಲಿ.
. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ

home made shavige recipe

. ನಂತರ ಅದನ್ನು ಒಂದು ಬಾಣಲೆಯಲ್ಲಿ ಹಾಕಿ ಕೈಯಾಡುತ್ತಾ ಮಗಚುತ್ತಲೆ ಇರಿ. ರಾಗಿಮುದ್ದೆ ಮಾಡುವಾಗ ಅನುಸರಿಸುವ ವಿಧಾನವನ್ನು ಅನುಸರಿಸಬೇಕಾಗುತ್ತದೆ.
. ಮಿಶ್ರಣವು ಗಟ್ಟಿಯಾಗಿ ಉಂಡೆಕಟ್ಟುವ ಹದಕ್ಕೆ ತಲುಪಿದ ನಂತರ ಬಾಣಲೆಯನ್ನು ಒಲೆಯಿಂದ ಇಳಿಸಿ. ಹದವಾಗಿ ಮಿಶ್ರಣವು ತಣಿಯಲು ಬಿಡಿ.

home made shavige recipe

. ನಂತರ ನಿಮ್ಮ ಶಾವಿಗೆ ಅಚ್ಚಿನೊಳಗೆ ಎಷ್ಟು ದೊಡ್ಡ ಉಂಡೆಯನ್ನು ಹಾಕುವುದಕ್ಕೆ ಸಾಧ್ಯವಿದೆಯೋ ಅಷ್ಟು ದೊಡ್ಡದಾದ ಉದ್ದನೆಯ ಅಂದರೆ ಸಿಲಿಂಡರ್ ಆಕೃತಿಯ ಉಂಡೆಗಳನ್ನು ತಯಾರಿಸಿ.
. ಬಿಸಿಯಾದ ಮಿಶ್ರಣದಿಂದ ಉಂಡೆಯನ್ನು ತಯಾರಿಸಬೇಕಾಗಿರುವುದರಿಂದಾಗಿ ಸ್ವಲ್ಪ ನೀರನ್ನು ಮುಟ್ಟುತ್ತಾ ಮುಟ್ಟುತ್ತಾ ಉಂಡೆ ತಯಾರಿಸಿದರೆ ಕೈ ಸುಡುವುದಿಲ್ಲ.

home made shavige recipe

. ತಯಾರಿಸಿದ ಉಂಡೆಗಳನ್ನು ಅಟ್ಟದಲ್ಲಿ ಇಟ್ಟು ಸುಮಾರು 30 ನಿಮಿಷ ಬೇಯಿಸಿ.
. ಬೆಂದ ಉಂಡೆಗಳನ್ನು ಇದೀಗ ಶಾವಿಗೆ ಅಚ್ಚಿನೊಳಗೆ ಹಾಕಿ ಒತ್ತಬೇಕಾಗುತ್ತದೆ.

. ಅನೇಕ ರೀತಿಯ ಶಾವಿಗೆ ಅಚ್ಚುಗಳಿರುತ್ತದೆ. ತಾಮ್ರದ, ಹಿತ್ತಾಳೆಯ, ಮರದ ಶಾವಿಗೆ ಅಚ್ಚುಗಳು ಲಭ್ಯ. ಅಷ್ಟೇ ಅಲ್ಲ ಒಬ್ಬರೆ ಶಾವಿಗೆ ತಯಾರಿಸಬಹುದಾದ ಅಚ್ಚುಗಳೂ ಇವೆ.

home made shavige recipe

. ಶಾವಿಗೆ ಒತ್ತುವಾಗ ಎಳೆಎಳೆಯಾಗಿ, ವೃತ್ತಾಕಾರದಲ್ಲಿ ಸುಂದರವಾಗಿ ಕಾಣುವಂತೆ ಸಿದ್ಧಗೊಳಿಸಿ.

home made shavige recipe
. ಈ ಶಾವಿಗೆಗೆ ಸಿಹಿಯಾದ ಕಾಯಿಹಾಲು, ಸಾಸಿವೆ ಎಣ್ಣೆ, ಉಪ್ಪಿನಕಾಯಿ ರಸ, ಸಾಂಬಾರಿನ ಜೊತೆಗೆ ಸೇವಿಸಬಹುದು. ಅಥವಾ ಒಗ್ಗರಣೆ ಹಾಕಿ ರುಚಿರುಚಿಯಾಗಿ ಸೇವಿಸಬಹುದು.
[ 4.5 of 5 - 111 Users]
X
Desktop Bottom Promotion