Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಎಳನೀರು ಹಾಕಿ ದೋಸೆ ಮಾಡಿದ್ದೀರಾ? ಸಕತ್ ಟೇಸ್ಟಿಯಾಗಿರುತ್ತದೆ, ನಾವಿಲ್ಲಿ
ಎಳನೀರು ಹಾಕಿ ಮಾಡುವ 2 ಬಗೆಯ ರೆಸಿಪಿ ನೀಡಿದ್ದೇವೆ ನೋಡಿ. ಈ ದೋಸೆ ತುಂಬಾ
ರುಚಿಯಾಗಿದ್ದು ಇದನ್ನು ನೀವು ಸಲಭದಲ್ಲಿ ಮಾಡಬಹುದು.
ಇಲ್ಲಿ ನಾವು ರುಬ್ಬಿ, ಅವತ್ತೇ ಮಾಡುವ ರೆಸಿಯೂ ಇದೆ, ಹುದುಗು ಬರಿಸಿ ಮಾಡುವ ರೆಸಿಪಿಯೂ ಇದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಹಿಟ್ಟು ರುಬ್ಬಿ ಇಡಬೇಕಾಗಿಲ್ಲ, ತಕ್ಷಣ ಮಾಡಬಹುದು ಈ ದೋಸೆ
ಬೇಕಾಗುವ ಸಾಮಗ್ರಿ
ಅಕ್ಕಿ 2 ಕಪ್
ತೆಂಗಿನ ತುರಿ 1/2 ಕಪ್
ಎಳನೀರು 1 ಕಪ್
ಸಕ್ಕರೆ 2 ಚಮಚ
1/4 ಚಮಚ ಉಪ್ಪು
ಮಾಡುವ ವಿಧಾನ
- ಅಕ್ಕಿಯನ್ನು ರಾತ್ರಿ ನೆನೆ ಹಾಕಿ
- ಬೆಳಗ್ಗೆ ನೀರನ್ನು ಸೋಸಿ, ಅಕ್ಕಿಯನ್ನು ಜಾರ್ಗೆ ಹಾಕಿ, ತೆಂಗಿನ ತುರಿ ಸೇರಿಸಿ ಸ್ವಲ್ಪ ಎಳನೀರು, ಉಪ್ಪು ಹಾಕಿ ರುಬ್ಬಿ
- ನಂತರ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ದೋಸೆ ಹಾಕಲು ಬೇಕಾದ ಹದಕ್ಕೆ ಎಳನೀರು ಸೇರಿಸಿ, ಸಕ್ಕರೆ ಹಾಕಿ ಮಿಕ್ಸ್ ಮಾಡಿ.
- ನಂತರ ದೋಸೆ ತವಾ ಬಿಸಿ ಮಾಡಿ ಎಣ್ಣೆ, ಅದಕ್ಕೆ ದೋಸೆಯನ್ನು ಸ್ವಲ್ಪ ದಪ್ಪವಾಗಿ ಹಾಕಿ, ತವಾವನ್ನು ಮುಚ್ಚಿ 2-3 ನಿಮಿಷ ಬಿಡಿ, (ದೋಸೆ ಬೇಯುವ ಹೊತ್ತಿನಷ್ಟೇ), ನಂತರ ದೋಸೆಯನ್ನು ದೋಸೆ ತವಾದಿಂದ ತೆಗೆದು ಬಿಸಿ ಬಿಸಿ ದೋಸೆ ಸರ್ವ್ ಮಾಡಿ.
ಈ ದೋಸೆಗೆ ಖಾರ ಚಟ್ನಿ, ಸಾಂಬಾರ್ ಚೆನ್ನಾಗಿರುತ್ತದೆ. ನಾನ್ವೆಜ್ ಪ್ರಿಯರಾಗಿದ್ದರೆ ಚಿಕನ್ ಗ್ರೇವಿ ಕೂಡ ಸೂಪರ್ ಆಗಿರುತ್ತದೆ.
ಎಳನೀರು ಹಾಕಿ ಮಾಡುವ ವೆಳ್ಳಪ್ಪಂ ಅಥವಾ ಆಪಂ ರೆಸಿಪಿ
ಬೇಕಾಗುವ ಸಾಮಗ್ರಿ
ಕುಚಲಕ್ಕಿ 1 ಕಪ್
1/2 ಕಪ್ ಬೆಳ್ತಕ್ಕಿಯಿಂದ ತಯಾರಿಸಿದ 1 ಕಪ್ ಅನ್ನ
2 ಕಪ್ ಎಳನೀರು
1 ಚಮಚ ಯೀಸ್ಟ್
1 ಕಪ್ ತುರಿದ ತೆಂಗಿನಕಾಯಿ
1 ಚಮಚ ಸಕ್ಕರೆ
ಮಾಡುವ ವಿಧಾನ:
ಕುಚಲಕ್ಕಿಯನ್ನು 8-10 ಗಂಟೆಗಳ ನೆನೆಹಾಕಬೇಕು.
ನೀವು ಬೆಳಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿ ನಂತರ ಬೇಯಿಸಿ,
ಹೆಚ್ಚು ಬೆಂದರೆ ಒಳ್ಳೆಯದು
ನೀವು ಕುಚಲಕ್ಕಿಯನ್ನು ರುಬ್ಬಬೇಕು, ನುಣ್ಣನೆ ರುಬ್ಬಿ
ನಂತರ ತೆಂಗಿನಕಾಯಿ, ಅನ್ನವನ್ನು ಜಾರ್ನಲ್ಲಿ ಹಾಕಿ ರುಬ್ಬಿ, ಈ ಎಲ್ಲಾ ಸಾಮಗ್ರಿ
ಮಿಕ್ಸ್ ಮಾಡಿ, ನಂತರ ಸ್ವಲ್ಪ ಬಿಸಿ ನೀರು, ಯೀಸ್ಟ್, ಸಕ್ಕರೆ ಉಪ್ಪು ಹಾಕಿ
ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಇಡಿ.
ನೀವು ಚಿಕ್ಕ ಬಾಣಲೆಯನ್ನು ತೆಗೆದುಕೊಳ್ಳಬೇಕು
ಅದನ್ನು ಬಿಸಿ ಮಾಡಿ ಎಣ್ಣೆ ಸವರಿ, ಒಂದು ಸೌಟ್ ಹುಟ್ಟು ಹಾಕಿ ಬಾಣಲೆಯನ್ನು
ಹಿಡಿದು ಮೆಲ್ಲನೆ ತಿರುಗಿಸಬೇಕು, ಆವಾಗ ಮಧ್ಯದಲ್ಲಿ ದಪ್ಪವಾಗಿ ಸುತ್ತ ತೆಳುವಾಗಿ
ಆಪಂ ಬರುವುದು, ನಂತರ ಬಾಣಲೆ ಬಾಯಿ ಮುಚ್ಚಿ 3-4 ನಿಮಿಷ ಬಿಟ್ಟ ಮೇಲೆ ನೋಡಿದರೆ
ಆಪಂ ತವಾದಿಂದ ಬಿಟ್ಟಿರುತ್ತದೆ, ಅದನ್ನು ತೆಗೆದು ತಟ್ಟೆಗೆ ಹಾಕಿ. ಈ ಆ
ಈ ಆಪಂ ವೆಜ್ ಗ್ರೇವಿ ಜೊತೆ ಸೂಪರ್ ಆಗಿರುತ್ತದೆ.
ಪ್ರಯೋಜನಗಳು
- ಈ ದೋಸೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಎಳನೀರು ಬಳಸಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
- ನೀವು ಎಳನೀರಿನ ಗಂಜಿ ಕೂಡ ಈ ದೋಸೆಗೆ ಬಳಸಬಹುದು
- ತಾಜಾ ಎಳನೀರು ಬಳಸಿ, ತಂದು ತುಂಬಾ ದಿನವಾದ ಅಥವಾ ಬಾಟಲಿಯಲ್ಲಿ ಬರುವ ಎಳನಿರು ಬಳಸಬೇಡಿ.



Click it and Unblock the Notifications
