Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ರಾಮೇಶ್ವರಂ ಕೆಫೆಗೂ ಅಬ್ದುಲ್ ಕಲಾಂಗೂ ಇದೆ ನಂಟು..! ಕೆಫೆಯ ವಾರ್ಷಿಕ ಆದಾಯ ಎಷ್ಟು ಗೊತ್ತಾ?
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ 9 ಮಂದಿ ಗಾಯಗೊಂಡಿರುವ ಘಟನೆ ನಿಮಗೆಲ್ಲ ತಿಳಿದಿದೆ. ನಿಗೂಢ ಸ್ಫೋಟ ಹೇಗೆ ಸಂಭವಿಸಿತು ಕಾರಣ ಯಾರು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿನ ಈ ಪ್ರಸಿದ್ಧ ಕೆಫೆ ಇಡೀ ದೇಶದಲ್ಲೇ ಸುದ್ದಿಯಾಗಿದೆ. ಬೆಂಗಳೂರಲ್ಲೂ ಸಹ ಈ ಕೆಫೆಯಲ್ಲಿ ತಿಂಡಿ, ಊಟ ಸವಿಯಲು ಜನ ಕ್ಯೂ ನಿಲ್ಲುತ್ತಾರೆ.
ಅಲ್ಲಿಯ ಸ್ವಾದಿಷ್ಟಕರ ಆಹಾರಕ್ಕೆ ಮನಸೋತು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಈ ಕೆಫೆಗೆ ಬರುತ್ತಾರೆ. ಸಿಎ ಮಾಡಿದ್ದ ವ್ಯಕ್ತಿಯೊಬ್ಬ ಸಣ್ಣದಾಗಿ ಕಟ್ಟಿದ ಉದ್ಯಮ ಈಗ ಕೋಟಿ ಕೋಟಿ ರೂಪಾಯಿ ಉದ್ಯಮವಾಗಿ ಬದಲಾಗಿದೆ. ಇಂದಿರಾನಗರದಲ್ಲಿ ಸಣ್ಣ ಅಂಗಡಿ ತೆರೆದಿದ್ದ ರಾಘವೇಂದ್ರ ರಾವ್ ಎಂಬುವರು ನೋಡ ನೋಡುತ್ತ ಔಟ್‌ಲೆಟ್‌ಗಳ ತೆರೆದು ಉದ್ಯಮವಾಗಿ ಬದಲಾಗಿಸಿದ್ರು.

ಹಾಗಾದರೆ ಬೆಂಗಳೂರಲ್ಲಿ ಫೇಮಸ್ ಆಗಿರುವ ರಾಮೇಶ್ವರಂ ಕೆಫೆಯ ಆದಾಯ ಎಷ್ಟಿದೆ? ಇಷ್ಟು ಫೇಮಸ್ ಆಗಿದ್ದು ಹೇಗೆ? ರಾಮೇಶ್ವರಂ ಕೆಫೆಯ ಪ್ರತಿಯೊಂದು ಔಟ್‌ಲೆಟ್ ಪ್ರತಿ ತಿಂಗಳಿಗೆ 4.5 ಕೋಟಿ ರೂಪಾಯಿ ಆದಾಯ ಮಾಡುತ್ತಿವೆ ಎಂಬ ಮಾತಿದೆ. ಜೊತೆಗೆ ವಾರ್‍ಷಿಕವಾಗಿ 50 ಕೋಟಿ ರೂಪಾಯಿಗೆ ಹೆಚ್ಚು ಆದಾಯ ಮಾಡುತ್ತಿವೆ ಎಂದು ಅಂದಾಜಿಸಲಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ತುಪ್ಪದ ಖಾದ್ಯಗಳೇ ಹೆಚ್ಚು ಫೇಮಸ್ ಆಗಿವೆ. ತುಪ್ಪದ ಇಡ್ಲಿ, ತುಪ್ಪ ಸುರಿದು ಮಾಡುವ ದೋಸೆ ಇಡೀ ದಿನ ಮಾರಾಟವಾಗುತ್ತೆ. ರಾಮೇಶ್ವರಂ ದೋಸೆ ಸವಿಯಲೆಂದೆ ಹುಡುಕಿಕೊಂಡು ಬರುವವರಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಸಾಂಪ್ರದಾಯಿಕ ಊಟವನ್ನು ಇಲ್ಲಿ ಸವಿಯಬಹುದು.
ಹಾಗಾದರೆ ವಾರ್ಷಿಕವಾಗಿ ಇಷ್ಟೊಂದು ಲಾಭ ಮಾಡಿದ್ದು ಹೇಗೆ? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದು ಏಕೆ? ಹೌದು ರಾಮೇಶ್ವರಂ ಕೆಫೆಯ ಆದಾಯ ಕುರಿತು ಈಗ ಎಲ್ಲೆಡೆ ಚರ್ಚೆ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕೆಫೆಯ ಆದಾಯ ಕೇಳಿ ಜನ ದಂಗಾಗಿದ್ದಾರೆ. ಸೇಜಲ್ ಸುದ್ ಎನ್ನುವವರು ತಮ್ಮ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಈ ರೆಸ್ಟೋರೆಂಟ್ ತಿಂಗಳಿಗೆ ₹4.5 ಕೋಟಿ, ವಾರ್ಷಿಕವಾಗಿ ₹50 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುತ್ತದೆ. ಬೆಂಗಳೂರಿನ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಹಾರವನ್ನು "ರಾಮೇಶ್ವರಂ ಕೆಫೆ" ನೀಡುತ್ತದೆ. ಇನ್ನು ಇದನ್ನು ಪ್ರಾರಂಭಿಸಿದ ಸಿಎ ಮತ್ತು ಫುಟ್ ಕಾರ್ಟ್ ಮಾಲೀಕರ ಬಗ್ಗೆ ಇಲ್ಲಿ ತಿಳಿಯಿರಿ. ಈ ರಾಮೇಶ್ವರಂ ಕೆಫೆಯು ಪ್ರತಿ ತಿಂಗಳು ₹4.5 ಕೋಟಿ ಆದಾಯ ಗಳಿಸುತ್ತಿದೆ ಎಂದು ಸೇಜಲ್ ಎಂಬುವವರು ಮಾಹಿತಿ ನೀಡಿದ್ದಾರೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ಇನ್ನಷ್ಟೇ ತಿಳಿಯಬೇಕು.
"ಇನ್ನು ಬೆಂಗಳೂರಿನಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆದಿದ್ದಾರೆ ಮತ್ತು ಭಾರತ, ವಿದೇಶಗಳಲ್ಲಿನ ಇತರ ನಗರಗಳಲ್ಲೂ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಿದ್ದಾರೆ. ಇದರ ಸಂಸ್ಥಾಪಕರು ತಮ್ಮ ಬ್ರ್ಯಾಂಡ್ ಅನ್ನು ಜಾಗತಿಕ ಉಪಸ್ಥಿತಿಯೊಂದಿಗೆ ಫ್ರಾಂಚೈಸ್ ಮಾಡುವ ದೊಡ್ಡ ಗುರಿಯನ್ನು ಹೊಂದಿದ್ದಾರೆ. ಅವರು ಹೆಚ್ಚು ಹೊಸ ಮತ್ತು ಆರೋಗ್ಯಕರ ಭಕ್ಷ್ಯಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದ್ದಾರೆ" ಎಂದು ಸುದ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಮೇಶ್ವರಂ ಎಂದು ಹೆಸರಿಟ್ಟಿದ್ದೇಕೆ.?
ಬೆಂಗಳೂರಿನ ಹೊಸ ಹಾಟ್ ಸ್ಪಾಟ್ ಆಗಿದ್ದ ರಾಮೇಶ್ವರಂ ಕೆಫೆಗೆ ಈ ಹೆಸರಿಡಲು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಕಾರಣವಂತೆ. ಅವರಿಂದ ಸ್ಪೂರ್ತಿ ಪಡೆದು ಅವರ ಹರಸರಿಗೆ ಸಮರ್ಪಿಸಿ ರಾಮೇಶ್ವರಂ ಎಂದು ಹೆಸರಿಡಲಾಗಿದೆಯಂತೆ. ಅಬ್ದುಲ್ ಕಲಾಂ ಅವರ ಹುಟ್ಟೂರು ತಮಿಳುನಾಡಿನ ರಾಮೇಶ್ವರಂ ಆಗಿದೆ. ಇದೇ ನೆನಪಲ್ಲಿ ಕೆಫೆಗೆ ರಾಮೇಶ್ವರಂ ಎಂದು ಹೆಸರಿಡಲಾಗಿದೆ ಎಂದು ಮಾಲೀಕರೆ ಒಮ್ಮೆ ಹೇಳಿಕೊಂಡಿದ್ದರು.



Click it and Unblock the Notifications

