For Quick Alerts
ALLOW NOTIFICATIONS  
For Daily Alerts

ರೆಸಿಪಿ: ಚಳಿಗಾಲದಲ್ಲಿ ಆರೋಗ್ಯ ಒಳ್ಳೆಯದು ಈ ಗಾರ್ಲಿಕ್ ರೈಸ್

Posted By:
|
garlic rice recipe

ನೀವು ಗಾರ್ಲಿಕ್‌ ರೈಸ್‌ ಅಂದ್ರೆ ಬೆಳ್ಳುಳ್ಳಿ ಅನ್ನ ಟೇಸ್ಟ್ ಮಾಡಿದ್ದೀರಾ? ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿಯಿದು. ಈ ಅನ್ನ ತುಂಬಾನೇ ರುಚಿಯಾಗಿರುತ್ತೆ, ಚಿತ್ರಾನ್ನಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತೆ. ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಸುಲಭವಾಗಿ ಮಾಡಬಹುದಾದ ರೆಸಿಪಿ ಇದಾಗಿದ್ದು, ಇದರ ರುಚಿ ಖಂಡಿತ ಇಷ್ಟವಾಗುವುದು.

garlic rice recipe

ಬನ್ನಿ ಬೆಳ್ಳುಳ್ಳಿ ಅನ್ನ ಮಾಡುವುದು ಹೇಗೆ ಎಂದು ನೋಡೋಣ:

garlic rice recipe, ಗಾರ್ಲಿಕ್ ರೈಸ್ ರೆಸಿಪಿ
garlic rice recipe, ಗಾರ್ಲಿಕ್ ರೈಸ್ ರೆಸಿಪಿ
Prep Time
15 Mins
Cook Time
10M
Total Time
25 Mins

Recipe By: Reena TK

Recipe Type: breakfast

Serves: 3

Ingredients
  • ಬೇಕಾಗುವ ಸಾಮಗ್ರಿ

    1 ಕಪ್ ಅಕ್ಕಿ

    30-35 ಎಸಳು ಬೆಳ್ಳುಳ್ಳಿ

    2 ಈರುಳ್ಳಿ (ಸಾಧಾರಣ ಗಾತ್ರದ್ದು)

    2 ಹಸಿ ಮೆಣಸು

    2 ಒಣ ಮೆಣಸು

    2 ಚಮಚ ತುಪ್ಪ / ಎಣ್ಣೆ

    1/ 4 ಚಮಚ ಸಾಸಿವೆ

    1 ಚಮಚ ಉದ್ದಿನ ಬೇಳೆ

    2 ಚಮಚ ಕಡಲೆ ಬೇಳೆ

    ಕರಿಬೇವು

    ಕೊತ್ತಂಬರಿ ಸೊಪ್ಪು (Optional)

    ರುಚಿಕೆ ತಕ್ಕ ಉಪ್ಪು

    1/2 ನಿಂಬೆ ಹಣ್ಣು

Red Rice Kanda Poha
How to Prepare
  • ಮಾಡುವ ವಿಧಾನ:

    * ಅನ್ನ ಮಾಡಿಡಿ.

    * ಈಗ ಬಾಣಲೆ ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿ, ತೆಗೆದಿಡಿ.

    * ಈಗ ಎಣ್ಣೆಗೆ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್‌ ಶಬ್ದ ಮಾಡುವಾಗ ಅದಕ್ಕೆ ಕರಿಬೇವು ಹಾಕಿ.

    * ಈಗ ತೊಗರಿ ಬೇಳೆ ಹಾಗೂ ಕಡಲೆ ಬೇಳೆ ಸೇರಿಸಿ. ಒಣ ಮೆಣಸು ಮುರಿದು ಹಾಕಿ.

    * ಈಗ ಈರುಳ್ಳಿ, ಹಸಿ ಮೆಣಸು ಹಾಕಿ , ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ, ಫ್ರೈ ಮಾಡಿದ ಬೆಳ್ಳುಳ್ಳಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಗ್ಯಾಸ್ ಸ್ಟೌವ್ ಆಫ್‌ ಮಾಡಿ.

    * ಈಗ ಅನ್ನ ಹಾಕಿ, ಮಿಕ್ಸ್ ಮಾಡಿ ಸ್ವಲ್ಪ ನಿಂಬೆ ರಸ ಹಿಂಡಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.

Instructions
  • ನಾನಿಲ್ಲಿ 1 ಚಮಚ ಎಣ್ಣೆ, 1 ಚಮಚ ತುಪ್ಪ ಬಳಸಿದ್ದೇನೆ, ನಿಮಗೆ ಖಾರ ಬೇಕೆಂದರೆ ಇನ್ನೂ ಎರಡು ಹಸಿ ಮೆಣು ಅಧಿಕ ಸೇರಿಸಿ ಮಾಡಬಹುದು. ಮಕ್ಕಳಿಗಾದರೆ ಕಡಿಮೆ ಖಾರದಲ್ಲಿ ಮಾಡಿ ಕೊಟ್ಟರೆ ಇಷ್ಟಪಡುತ್ತಾರೆ.
Nutritional Information
[ 5 of 5 - 113 Users]
X
Desktop Bottom Promotion