For Quick Alerts
ALLOW NOTIFICATIONS  
For Daily Alerts

ಗಣರಾಜ್ಯೋತ್ಸವ ವಿಶೇಷ: ತ್ರಿರಂಗ ಇಡ್ಲಿ ರೆಸಿಪಿ

Posted By:
|

ನಾವು ಈ ವರ್ಷ 73ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ದಿನ ಮಕ್ಕಳಿಗೆ ನಾವು ನಮ್ಮ ಇತಿಹಾಸದ ಬಗ್ಗೆ ತಿಳಿಸಬೇಕು, 1947, ಆಗಸ್ಟ್‌ 15ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು, ಅದಾದ ಬಳಿಕ 1950 ಜನವರಿ 26ರಂದು ಅಧಿಕೃತವಾಗಿ ಭಾರತದಲ್ಲಿ ಸಂವಿಧಾನ ಜಾರಿಗೆ ಬಂತು.

Republic Day Special recipe

ಭಾರತೀಯ ಪೌರರಾಗಿ ನಾವು ಹೇಗೆ ಜೀವಿಸಬೇಕು, ನಮ್ಮ ಹಕ್ಕುಗಳೇನು ಎಲ್ಲವೂ ಸಂವಿಧಾನದಲ್ಲಿದೆ. ಈ ದಿನ ನಾವೆಲ್ಲಾ ಸಡಗರ-ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸುತ್ತೇವೆ. ಹಾರಾಡುವ ರಾಷ್ಟ್ರಧ್ವಜವನ್ನು ನೋಡುವಾಗ ದೇಶಭಕ್ತಿ ಉಕ್ಕಿ ಬರುವುದು. ಈ ದಿನ ಶಾಲೆಗಳಲ್ಲಿ ಮಕ್ಕಳಿಗೆ ವಿಸೇಷ ದಿನವೆನಿಸುವುದು, ಅದೇ ಸಂಭ್ರಮ ಮನೆಯಲ್ಲಿಯೂ ತುಂಬಿ.

ಈ ದಿನ ಮಕ್ಕಳ ಸಂಭ್ರಮ ಹೆಚ್ಚಿಸಲು ನೀವು ಮನೆಯಲ್ಲಿ ಟ್ರೈ ಕಲರ್ ಇಡ್ಲಿ ಮಾಡಿ ಕೊಡಿ, ಇದು ಮಾಮೂಲಿ ಇಡ್ಲಿ ಮಾಡುವ ವಿಧಾನದಲ್ಲಿಯೇ ಮಾಡುವುದು, ಅದಕ್ಕೆ ಪಾಲಾಕ್‌, ಕ್ಯಾರೆಟ್‌ ಸೇರಿಸಿದರೆ ಆಯ್ತು, ಬನ್ನಿ ಮಾಡುವುದು ಹೇಗೆ ಎಂದು ನೋಡೋಣ:

Republic Day Special: Tricolor Idli Recipe, ಗಣರಾಜ್ಯೋತ್ಸವ ವಿಶೇಷ: ತ್ರಿರಂಗ ಇಡ್ಲಿ ರೆಸಿಪಿ
Republic Day Special: Tricolor Idli Recipe, ಗಣರಾಜ್ಯೋತ್ಸವ ವಿಶೇಷ: ತ್ರಿರಂಗ ಇಡ್ಲಿ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: Reena TK

Recipe Type: breakfast

Serves: 3

Ingredients
  • ಬೇಕಾಗುವ ಸಾಮಗ್ರಿ

    ಒಂದು ಲೋಟ ಅಕ್ಕಿ

    ಒಂದು ಕಟ್ಟು ಪಾಲಾಕ್‌

    ಅರ್ಧ ಲೋಟ ಉದ್ದಿನ ಬೇಳೆ

    1/4 ಕೆಜಿ ಕ್ಯಾರೆಟ್

    ರುಚಿಗೆ ತಕ್ಕ ಉಪ್ಪು

Red Rice Kanda Poha
How to Prepare
  • ಮಾಡುವ ವಿಧಾನ

    * ಮೊದಲಿಗೆ ಅಕ್ಕಿ ಮತ್ತು ಉದ್ದಿನ ಬೇಳೆ ನೆನೆ 8 ಗಂಟೆ ಹಾಕಿ. ನಂತರ ರುಬ್ಬಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ 8 ಗಂಟೆ ಸಮಯ ಹುದುಗು ಬರಲು ಇಡಿ.

    * ಬೆಳಗ್ಗೆ ಪಾಲಾಕ್‌ ಮತ್ತು ಕ್ಯಾರೆಟ್‌ ಸಪರೇಟ್‌ ರುಬ್ಬಿ.

    * ಎರಡು ಪಾತ್ರೆಗೆ ಪ್ರತ್ಯೇಕವಾಗಿ ಪಾಲಾಕ್ ಮತ್ತು ಕ್ಯಾರೆಟ್ ಮಿಶ್ರಣ ಹಾಕಿ

    * ಈಗ ಮೊದಲು ಅಕ್ಕಿ ಇಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ, ಅದರ ಒಂದು ಬದಿಯಲ್ಲಿ ಪಾಲಾಕ್‌ ಮಿಶ್ರಣ ಮತ್ತೊಂದು ಬದಿಯಲ್ಲಿ ಕೇಸರಿ ಮಿಶ್ರಣ ಹಾಕಿ ಬೇಯಿಸಿ.

    ಈಗ ರೆಡಿಯಾದ ಇಡ್ಲಿಯನ್ನು ಚಟ್ನಿ ಜೊತೆ ಸರ್ವ್ ಮಾಡಿ.

Instructions
  • ನೀವು ಫುಡ್‌ ಕಲರ್ ಬೇಕಾದರೂ ಬಳಸಬಹುದು
Nutritional Information
[ 3.5 of 5 - 59 Users]
X
Desktop Bottom Promotion