ಹೆಸರುಕಾಳಿನ ಉಸ್ಲಿ ರೆಸಿಪಿ

By: Divya pandith
Subscribe to Boldsky

ಹೆಸರು ಕಾಳು ಹುಸುಳಿ (ಉಸ್ಲಿ) ದಕ್ಷಿಣ ಭಾರತದ ಸಾಂಪ್ರದಾಯಿಕ ಭಕ್ಷ್ಯ. ಸಾಮಾನ್ಯ ದಿನಗಳಲ್ಲಿ ಸಾಯಂಕಾಲದ ಉಪಹಾರವಾಗಿ ಹಾಗೂ ಹಬ್ಬ ಹರಿದಿನಗಳಲ್ಲಿ ಪ್ರಸಾದ ರೂಪದಲ್ಲಿ ಇದನ್ನು ತಯಾರಿಸುತ್ತಾರೆ. ನವರಾತ್ರಿ ಉತ್ಸವದಲ್ಲಿ ಇದನ್ನು ವಿಶೇಷ ಪ್ರಸಾದವಾಗಿ ತಯಾರಿಸಲಾಗುವುದು. ಹುಸುಳಿಯಲ್ಲಿ ಇರುವ ಉಪ್ಪು ಮತ್ತು ಮೆಣಸು ರುಚಿಯನ್ನು ದ್ವಿಗುಣಗೊಳಿಸುತ್ತವೆ.

ಹೆಸರುಕಾಳು ಹುಸುಳಿಯಲ್ಲಿ ಪ್ರೋಟೀನ್ ಮತ್ತು ಫೈಬರ್‍ಅಂಶ ಸಮೃದ್ಧವಾಗಿರುವುದರಿಂದ ಇದನ್ನು ಆರೋಗ್ಯ ಪೂರ್ಣ ಆಹಾರ ಎಂದು ಕರೆಯಬಹುದು. ಇದನ್ನು ಮುಂಜಾನೆಯ ಉತ್ತಮ ಉಪಹಾರವಾಗಿಯೂ ಸೇವಿಸಬಹುದು. ವ್ರತಾಚರಣೆಯ ಸಮಸಯದಲ್ಲಿ ಹಾಗೂ ಮಕ್ಕಳಿಗೆ ಕುರುಕಲು ತಿಂಡಿಯ ಬದಲಿಗೆ ಇದನ್ನು ನೀಡಲು ಒಂದು ಉತ್ತಮ ಆಯ್ಕೆ. ಆರೋಗ್ಯಕರವಾದ ಈ ಹುಸುಳಿಯನ್ನು ಸುಲಭವಾಗಿ ತಯಾರಿಸಬಹುದು.

ಉಸ್ಲಿಯನ್ನು ತಯಾರಿಸಲು ಯಾವುದೇ ಪಾಂಡಿತ್ಯದ ಅಗತ್ಯವಿಲ್ಲ. ಬೇಕೆಂದಾಗ ಸುಲಭವಾಗಿ ತಯಾರಿಸಬಹುದು. ಇದರ ಪಾಕವಿಧಾನಕ್ಕೆ ಅನುಕೂಲವಾಗಲೆಂದು ವೀಡಿಯೋ ಹಾಗೂ ಚಿತ್ರ ವಿವರಣೆಯನ್ನು ಇಲ್ಲಿ ನೀಡಿದ್ದೇವೆ.

green gram usli recipe
ಹೆಸರು ಕಾಳು ಹುಸುಳಿ | ಹೆಸರು ಕಾಳು ಹುಸುಳಿ ರೆಸಿಪಿ ಮಾಡುವ ವಿಧಾನ | ಹೆಸರು ಕಾಳು ಹುಸುಳಿ ಸ್ಟೆಪ್ ಬೈ ಸ್ಟೆಪ್ ಮಾಡುವ ವಿಧಾನ,
ಹೆಸರು ಕಾಳು ಹುಸುಳಿ | ಹೆಸರು ಕಾಳು ಹುಸುಳಿ ರೆಸಿಪಿ ಮಾಡುವ ವಿಧಾನ | ಹೆಸರು ಕಾಳು ಹುಸುಳಿ ಸ್ಟೆಪ್ ಬೈ ಸ್ಟೆಪ್ ಮಾಡುವ ವಿಧಾನ,
Prep Time
6 Hours
Cook Time
15M
Total Time
6 Hours 15 Mins

Recipe By: ಅರ್ಚನಾ ವಿ

Recipe Type: ಉಪಹಾರ/ ಸೈಡ್ ಡಿಶ್

Serves: 2 ಮಂದಿಗೆ

Ingredients
 • ಜೀರಿಗೆ - 3/4 ಚಮಚ

  ಹೆಚ್ಚಿದ ಹಸಿ ಮೆಣಸಿನಕಾಯಿ - 1 ಸಾಮಾನ್ಯ ಗಾತ್ರದ್ದು

  ತುರಿದ ಶುಂಠಿ - 1/4 ಇಂಚ್ ದೊಡ್ಡದು.

  ಎಣ್ಣೆ - 1 ಚಮಚ

  ಸಾಸಿವೆ - 1 ಚಮಚ

  ಕರಿಬೇವಿನ ಎಲೆ - 6 ರಿಂದ 10

  ಬೇಯಿಸಿಕೊಂಡ ಹೆಸರುಕಾಳು - 100 ಗ್ರಾಂ

  ರುಚಿಗೆ ತಕ್ಕಷ್ಟು ಉಪ್ಪು

  ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 2 ಚಮಚ

  ನಿಂಬು - 1/2 ಭಾಗ

  ತೆಂಗಿನ ತುರಿ - 1/2 ಕಪ್

Red Rice Kanda Poha
How to Prepare
 • 1. 1/2 ಚಮಚ ಜೀರಿಗೆ, ಹಸಿಮೆಣಸು, ಶುಂಠಿಯನ್ನು ಒಮ್ಮೆಲೆ ಬೆರೆಸಿ ಜಜ್ಜಿಕೊಳ್ಳಿ.

  2. ಇವುಗಳನ್ನು ಸರಿಯಾಗಿ ಮಿಶ್ರಗೊಂಡ ಪೇಸ್ಟ್‍ನಂತೆ ಮಾಡಿ.

  3. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

  4. ಸಾಸಿವೆ, 1/4 ಚಮಚ ಜೀರಿಗೆಯನ್ನು ಹಾಕಿ ಚಟಪಟ ಎನ್ನುವವರೆಗೆ ಹುರಿಯಿರಿ.

  5. ನಂತರ ಇಂಗು ಮತ್ತು ಕರಿಬೇವಿನ ಎಲೆಯನ್ನು ಹಾಕಿ.

  6. ಇವೆಲ್ಲವು ಸರಿಯಾಗಿ ಮಿಶ್ರಗೊಳ್ಳುವಂತೆ ಹುರಿಯಿರಿ.

  7. ಇದಕ್ಕೆ ಬೇಯಿಸಿಕೊಂಡ ಹೆಸರು ಬೇಳೆಯನ್ನು ಸೇರಿಸಿ, ಮಿಶ್ರಗೊಳಿಸಿ.

  8. ಉಪ್ಪು ಮತ್ತು ಹೆಚ್ಚಿಕೊಂಡ ಕೊತ್ತಂಬರಿಯನ್ನು ಸೇರಿಸಿ.

  9. ಉರಿಯನ್ನು ಆರಿಸಿ, ತೆಂಗಿನ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ.

  10. ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.

Instructions
 • 1. ಹೆಸರುಕಾಳನ್ನು ರಾತ್ರಿ ನೆನೆಸಿಟ್ಟುಕೊಂಡಿರಬೇಕು.
 • 2. ಬೇಳೆಗೆ ಸಮನಾಗಿ ನೀರನ್ನು ಹಾಕಿ, ಒಂದು ಸೀಟಿ ಕೂಗಿಸಬೇಕಷ್ಟೆ.
 • 3. ಪ್ರೆಶರ್ ಹೀಟ್ ಸ್ವಲ್ಪ ಆರುತ್ತಿದ್ದಂತೆಯೇ ಸೀಟಿ ತೆಗೆಯಬೇಕು. ಇಲ್ಲವಾದರೆ ಕಾಳು ಅತಿಯಾಗಿ ಬೇಯುವುದು.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರೀಸ್ - 95 ಕ್ಯಾಲ್
 • ಫ್ಯಾಟ್ - 2.5 ಗ್ರಾಂ
 • ಪ್ರೋಟೀನ್ - 5.1 ಗ್ರಾಂ
 • ಕಾರ್ಬೋಹೈಡ್ರೇಟ್ - 13.3 ಗ್ರಾಂ
 • ಫೈಬರ್ - 4.1 ಗ್ರಾಂ

ಹೆಸರು ಕಾಳು ಹುಸುಳಿ ಸ್ಟೆಪ್ ಬೈ ಸ್ಟೆಪ್ ಮಾಡುವ ವಿಧಾನ

1. 1/2 ಚಮಚ ಜೀರಿಗೆ, ಹಸಿಮೆಣಸು, ಶುಂಠಿಯನ್ನು ಒಮ್ಮೆಲೆ ಬೆರೆಸಿ ಜಜ್ಜಿಕೊಳ್ಳಿ.

green gram usli recipe
green gram usli recipe
green gram usli recipe

2. ಇವುಗಳನ್ನು ಸರಿಯಾಗಿ ಮಿಶ್ರಗೊಂಡ ಪೇಸ್ಟ್‍ನಂತೆ ಮಾಡಿ.

green gram usli recipe

3. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

green gram usli recipe

4. ಸಾಸಿವೆ, 1/4 ಚಮಚ ಜೀರಿಗೆಯನ್ನು ಹಾಕಿ ಚಟಪಟ ಎನ್ನುವವರೆಗೆ ಹುರಿಯಿರಿ.

green gram usli recipe
green gram usli recipe
green gram usli recipe

5. ನಂತರ ಇಂಗು ಮತ್ತು ಕರಿಬೇವಿನ ಎಲೆಯನ್ನು ಹಾಕಿ.

green gram usli recipe
green gram usli recipe

6. ಇವೆಲ್ಲವು ಸರಿಯಾಗಿ ಮಿಶ್ರಗೊಳ್ಳುವಂತೆ ಹುರಿಯಿರಿ.

green gram usli recipe
green gram usli recipe
green gram usli recipe

7. ಇದಕ್ಕೆ ಬೇಯಿಸಿಕೊಂಡ ಹೆಸರು ಬೇಳೆಯನ್ನು ಸೇರಿಸಿ, ಮಿಶ್ರಗೊಳಿಸಿ.

green gram usli recipe
green gram usli recipe

8. ಉಪ್ಪು ಮತ್ತು ಹೆಚ್ಚಿಕೊಂಡ ಕೊತ್ತಂಬರಿಯನ್ನು ಸೇರಿಸಿ.

green gram usli recipe
green gram usli recipe
green gram usli recipe

9. ಉರಿಯನ್ನು ಆರಿಸಿ, ತೆಂಗಿನ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ.

green gram usli recipe
green gram usli recipe
green gram usli recipe

10. ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.

green gram usli recipe
[ 5 of 5 - 91 Users]
Please Wait while comments are loading...
Subscribe Newsletter