Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಬೋಡೆ ರೆಸಿಪಿ: ಮಸಾಲಾ ವಡೆ ಮಾಡುವುದು ಹೇಗೆ?
ಅಂಬೋಡೆ ಕರ್ನಾಟಕದ ಪ್ರಸಿದ್ಧ ತಿಂಡಿಯಲ್ಲಿ ಒಂದು. ಇದನ್ನು ಬಹುತೇಕ ಉತ್ಸವಗಳಲ್ಲಿ ಹಾಗೂ ಮದುವೆ ಮುಂಜಿಗಳ ಊಟದ ಒಂದು ಅಗತ್ಯ ತಿನಿಸನ್ನಾಗಿ ತಯಾರಿಸಲಾಗುತ್ತದೆ. ಇದನ್ನು ತಮಿಳುನಾಡಿನಲ್ಲಿ ಪರುಪು ವಡೆ ಅಥವಾ ಮಸಾಲ ವಡೆ ಎಂದು ಕರೆಯುತ್ತಾರೆ. ಕೇರಳದಲ್ಲಿ ಚಹಾದ ಜೊತೆ ಸವಿಯುವ ತಿಂಡಿಯನ್ನಾಗಿ ಉಪಯೋಗಿಸುತ್ತಾರೆ. ಮಳೆಗಾಲದ ಚಳಿಯಲ್ಲಿ ಬಿಸಿಬಿಸಿಯಾಗಿ ಇದನ್ನು ತಿನ್ನಲು ತಯಾರಿಸುತ್ತಾರೆ.
ಕಡ್ಲೆಬೇಳೆಯ ಮುಖ್ಯ ಪಾತ್ರದಲ್ಲಿ ವಿವಿಧ ಬಗೆಯ ಮಸಾಲ ಪದಾರ್ಥಗಳು ಹಾಗೂ ಈರುಳ್ಳಿಯನ್ನು ಸೆರಿಸಿ ಅಂಬೋಡೆಯನ್ನು ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಮತ್ತು ಉತ್ಸವದ ಸಮಯದಲ್ಲಿ ತಯಾರಿಸಬೇಕಾದರೆ ಈರುಳ್ಳಿಯನ್ನು ಸೇರಿಸುವುದಿಲ್ಲ. ಈರುಳ್ಳಿಯನ್ನು ಸೇರಿಸಿದರೆ ಪರಿಮಳ ಮತ್ತು ರುಚಿ ಹೆಚ್ಚಾಗುತ್ತದೆ.
ಕಡ್ಲೆಬೇಳೆಯನ್ನು ಒಮ್ಮೆ ನೆನೆಸಿಟ್ಟುಕೊಂಡರೆ ಅಂಬೋಡೆ ತಯಾರಿಸುವುದು ಸುಲಭ. ಕಡಿಮೆ ಸಮಯದಲ್ಲಿ ಬೇಕೆಂದಾಗ ತಯಾರಿಸಿಕೊಳ್ಳಬಹುದಾದ ಈ ತಿಂಡಿಯನ್ನು ನೀವೂ ಮಾಡಲು ಇಷ್ಟ ಪಡುವುದಾದರೆ ಇಲ್ಲಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ಬರಹವನ್ನು ವೀಕ್ಷಿಸಿ.

Recipe By: ಕಾವ್ಯಶ್ರೀ ಎಸ್
Recipe Type: ಕುರುಕಲು ತಿಂಡಿ/ ಸ್ನ್ಯಾಕ್ಸ್
Serves: 10 ಅಂಬೋಡೆ
-
ಕಡ್ಲೆ ಬೇಳೆ - 1 ಬೌಲ್
ನೀರು - 2 ಗ್ಲಾಸ್
ತೆಂಗಿನ ತುರಿ - 1 ಕಪ್
ಹಸಿ ಮೆಣಸಿನ ಕಾಯಿ - ದೊಡ್ಡ ಗಾತ್ರದ್ದು 4
ಶುಂಠಿ - 1 ಇಂಚು
ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಕಪ್
ಸಬ್ಬಸ್ಸಿಗೆ ಸೊಪ್ಪು - 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
-
1. ಒಂದು ಬೌಲ್‍ನಲ್ಲಿ ಕಡ್ಲೆ ಬೇಳೆಯನ್ನು 4-5 ತಾಸುಗಳ ಕಾಲ ನೆನೆಯಿಡಬೇಕು.
2. ನೆನೆಸಿಕೊಂಡ ಕಡ್ಲೆ ಬೇಳೆ ಮತ್ತು ತೆಂಗಿನ ತುರಿಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.
3. ಇದರೊಟ್ಟಿಗೆ ಹಸಿಮೆಣಸು, ಶುಂಠಿಯನ್ನು ಸೇರಿಸಿ.
4. ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ.
5. ಒಂದು ಬೌಲ್‍ಗೆ ಮಿಶ್ರಣವನ್ನು ವರ್ಗಾಯಿಸಿಕೊಳ್ಳಿ.
6. ಹಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಸಬ್ಬಸ್ಸಿಗೆ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.
7. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.
8. ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.
9. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿ.
10. ಉಂಡೆಯನ್ನು ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಬಿಡಿ.
11. ಚೆನ್ನಾಗಿ ಹೊಂಬಣ್ಣ ಬರುವವರೆಗೂ ಕೈಯಾಡಿಸುತ್ತಾ ಫ್ರೈ ಮಾಡಿ.
- 1. ಈ ಪಾಕವಿಧಾನದಲ್ಲಿ ಈರುಳ್ಳಿಯನ್ನು ಬಳಸಲಾಗುತ್ತದೆ. ಹಬ್ಬದ ಸಮಯದಲ್ಲಿ ಈರುಳ್ಳಿಯನ್ನು ಸೇರಿಸದಿದ್ದರೆ ಆಯಿತು.
- 2. ಸಬ್ಬಸ್ಸಿಗೆ ಸೊಪ್ಪನ್ನು ನಿಮ್ಮ ಆಯ್ಕೆಯಾಗಿ ಬಳಸಬಹುದು.
- 3. ವಡೆಯು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಬೇಕು.
- ಸರ್ವಿಂಗ್ ಸೈಜ್ - 1 ವಡೆ
- ಕ್ಯಾಲೋರಿ - 150 ಕ್ಯಾಲ್
- ಫ್ಯಾಟ್ - 3 ಗ್ರಾಂ
- ಪ್ರೋಟೀನ್ - 4 ಗ್ರಾಂ
- ಕಾರ್ಬೋಹೈಡ್ರೇಟ್ - 20 ಗ್ರಾಂ
- ಫೈಬರ್ - 5 ಗ್ರಾಂ
ಪಾಕವಿಧಾನ:
1. ಒಂದು ಬೌಲ್‍ನಲ್ಲಿ ಕಡ್ಲೆ ಬೇಳೆಯನ್ನು 4-5 ತಾಸುಗಳ ಕಾಲ ನೆನೆಯಿಡಬೇಕು.


2. ನೆನೆಸಿಕೊಂಡ ಕಡ್ಲೆ ಬೇಳೆ ಮತ್ತು ತೆಂಗಿನ ತುರಿಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.


3. ಇದರೊಟ್ಟಿಗೆ ಹಸಿಮೆಣಸು, ಶುಂಠಿಯನ್ನು ಸೇರಿಸಿ.


4. ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ.

5. ಒಂದು ಬೌಲ್‍ಗೆ ಮಿಶ್ರಣವನ್ನು ವರ್ಗಾಯಿಸಿಕೊಳ್ಳಿ.

6. ಹಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಸಬ್ಬಸ್ಸಿಗೆ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.



7. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

8. ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

9. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿ.

10. ಉಂಡೆಯನ್ನು ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಬಿಡಿ.

11. ಚೆನ್ನಾಗಿ ಹೊಂಬಣ್ಣ ಬರುವವರೆಗೂ ಕೈಯಾಡಿಸುತ್ತಾ ಫ್ರೈ ಮಾಡಿ.





Click it and Unblock the Notifications
