Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಎಲೆಕೋಸು ಪಲ್ಯ ಪಾಕವಿಧಾನ
ಎಲೆಕೋಸು ಪಲ್ಯ ಎನ್ನುವುದು ದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನದಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ತೆಂಗಿನ ತುರಿಯ ಜೊತೆಗೆ ಬೆರೆತುಕೊಳ್ಳುವ ಎಲೆಕೂಸಿನ ಪಲ್ಯ ಅನನ್ಯವಾದ ಸುವಾಸನೆಯನ್ನು ನೀಡುತ್ತದೆ. ಇದನ್ನು ತಮಿಳುನಾಡಿನಲ್ಲಿ ಕೂಸು ಪೊರಿಯಲ್ ಎಂದು ಕರೆದರೆ, ಕೇರಳದಲ್ಲಿ ಕೇಸೇಜ್ ಥೋರನ್ ಎಂದು ಕರೆಯುತ್ತಾರೆ.
ಎಲೆಕೋಸು ಪಲ್ಯವನ್ನು ಸಾಂಬರ್ ರೈಸ್, ರಸಮ್ ರೈಸ್ ಜೊತೆಗೆ ಸೈಡ್ ಡಿಶ್ ರೀತಿಯಲ್ಲಿ ಸವಿಯಬಹುದು. ಅಲ್ಲದೆ ದೋಸೆ, ರೊಟ್ಟಿಗೆ ಕರ್ರೀಯ ರೀತಿಯಲ್ಲಿ ತಿನ್ನಬಹುದು. ಉತ್ತಮ ಮಸಾಲದೊಂದಿಗೆ ತಯಾರಿಸಲಾಗುವ ಈ ಪಾಕವಿಧಾನ ಆರೋಗ್ಯಕ್ಕೂ ಪೂರಕವಾಗಿದೆ. ಈ ಪಲ್ಯವನ್ನು ಸುಲಭವಾಗಿ ಹಾಗೂ ಅಗತ್ಯವಿದ್ದಾಗ ಬಹು ಬೇಗ ತಯಾರಿಸಬಹುದು. ಈ ರುಚಿಕರ ಪಲ್ಯವನ್ನು ತಯಾರಿಸುವ ಬಗೆಯ ಕುರಿತು ವಿಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ನಾವಿಲ್ಲಿ ನೀಡಿದ್ದೇವೆ...
ಕ್ಯಾಬೇಜ್ ಸ್ಟಿರ್ ಫ್ರೈ ವಿಡಿಯೋ ರೆಸಿಪಿ

Recipe By: ಅರ್ಚನಾ ವಿ.
Recipe Type: ಪಲ್ಯ/ಸೈಡ್ ಡಿಶ್
Serves: 2 ಮಂದಿಗೆ
-
ಹೆಚ್ಚಿಕೊಂಡ ತೆಂಗಿನಕಾಯಿ - 1/4 ಬೌಲ್
ಸಾಸಿವೆ ಕಾಳು - 2 ಟಿಚಮಚ
ಬ್ಯಾಡಗಿ ಮೆಣಸು - 1 1/2
ಹುಣಸೆ ಹಣ್ಣು - 1/2 ನಿಂಬೆ ಹಣ್ಣಿನ ಗಾತ್ರದಷ್ಟು
ಎಣ್ಣೆ - 1 ಟೇಬಲ್ ಚಮಚ
ಜೀರಿಗೆ - 1 ಟೀ ಚಮಚ
ಇಂಗು - ಒಂದು ಚಿಟಕಿ
ಕರಿ ಬೇವಿನ ಎಲೆ - 7-10
ಹೆಚ್ಚಿಕೊಂಡ ಎಲೆಕೋಸು - 1/2 ಎಲೆಕೋಸು
ರುಚಿಗೆ ತಕ್ಕಷ್ಟು ಉಪ್ಪು
-
1. ತೆಂಗಿನಕಾಯಿ ಮತ್ತು 1 ಟೀ ಚಮಚ ಸಾಸಿವೆಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.
2. ಅದೇ ರೀತಿ ಬ್ಯಾಡಗಿ ಮೆಣಸು, ಮತ್ತು ಹುಣಸೆ ಹಣ್ಣನ್ನು ಸೇರಿಸಿ.
3. ಹಾಗೇ ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಅಗತ್ಯಬಿದ್ದರೆ ಒಂದು ಟೇಬಲ್ ಚಮಚ ನೀರನ್ನು ಸೇರಿಸಿ ರುಬ್ಬಿ.
4. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
5. ಸಾಸಿವೆ ಕಾಳು, ಜೀರಿಗೆ, ಇಂಗು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.
6. ನಂತರ ಎಲೆಕೋಸನ್ನು ಬೆರೆಸಿ ಚೆನ್ನಾಗಿ ಕಲುಕಿರಿ.
7. ಈ ಮಿಶ್ರಣವು ಬೇಯಲು 4-5 ನಿಮಿಷಗಳ ಕಾಲ ಬಿಡಿ.
8. ಮುಚ್ಚಳನ್ನು ಮುಚ್ಚಿ ಬೇಯಿಸಿದರೆ ಅದು ನೀರನ್ನು ಬಿಟ್ಟುಕೊಂಡು ಅರ್ಧ ಬೇಯುತ್ತದೆ.
9. ಇದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
10. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ.
11. ಪುನಃ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಲು ಬಿಡಿ.
12. ಚೆನ್ನಾಗಿ ಮಿಶ್ರಗೊಳಿಸಿ ನಂತರ ಸವಿಯಲು ನೀಡಿ.
- 1. ಎಲೆಕೋಸನ್ನು ತುಂಬಾ ಮೃದುವಾಗಿ ಬೇಯಿಸಿಕೊಳ್ಳಬಾರದು. ಇದು ಬಹುಬೇಗ ಬೇಯುವ ಸಾಧ್ಯತೆ ಇರುತ್ತದೆ.
- 2. ಬ್ಯಾಡಗಿ ಮೆಣಸು ಬಳಸುವುದರಿಂದ ಹೆಚ್ಚುವರಿ ಪರಿಮಳ ಹಾಗೂ ರುಚಿಯನ್ನು ನೀಡುತ್ತದೆ. ಇಲ್ಲದಿದ್ದರೆ ಯಾವುದಾದರೂ ಒಣ ಮೆಣಸನ್ನು ಬಳಸಬಹುದು.
- 3. ಮಸಾಲ ರುಬ್ಬಿಕೊಳ್ಳುವಾಗ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಬಳಸಬಹುದು.
- 4. ಎಲೆಕೋಸನ್ನು ಅರ್ಧ ಬೇಯಿಸಿಕೊಂಡರೆ ಹೆಚ್ಚು ರುಚಿಯಾಗಿರುತ್ತದೆ.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರಿ - 80 ಕ್ಯಾಲ್
- ಫ್ಯಾಟ್ - 5 ಗ್ರಾಂ.
- ಪ್ರೋಟೀನ್ - 2 ಗ್ರಾಂ.
- ಕಾರ್ಬೋಹೈಡ್ರೇಟ್ - 7 ಗ್ರಾಂ.
- ಫೈಬರ್ - 3 ಗ್ರಾಂ.
ಎಲೆಕೋಸು ಪಲ್ಯ ಪಾಕವಿಧಾನ
1. ತೆಂಗಿನಕಾಯಿ ಮತ್ತು 1 ಟೀ ಚಮಚ ಸಾಸಿವೆಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.


2. ಅದೇ ರೀತಿ ಬ್ಯಾಡಗಿ ಮೆಣಸು, ಮತ್ತು ಹುಣಸೆ ಹಣ್ಣನ್ನು ಸೇರಿಸಿ.


3. ಹಾಗೇ ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಅಗತ್ಯಬಿದ್ದರೆ ಒಂದು ಟೇಬಲ್ ಚಮಚ ನೀರನ್ನು ಸೇರಿಸಿ ರುಬ್ಬಿ.

4. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

5. ಸಾಸಿವೆ ಕಾಳು, ಜೀರಿಗೆ, ಇಂಗು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.




6. ನಂತರ ಎಲೆಕೋಸನ್ನು ಬೆರೆಸಿ ಚೆನ್ನಾಗಿ ಕಲುಕಿರಿ.


7. ಈ ಮಿಶ್ರಣವು ಬೇಯಲು 4-5 ನಿಮಿಷಗಳ ಕಾಲ ಬಿಡಿ.

8. ಮುಚ್ಚಳನ್ನು ಮುಚ್ಚಿ ಬೇಯಿಸಿದರೆ ಅದು ನೀರನ್ನು ಬಿಟ್ಟುಕೊಂಡು ಅರ್ಧ ಬೇಯುತ್ತದೆ.

9. ಇದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

10. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ.


11. ಪುನಃ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಲು ಬಿಡಿ.

12. ಚೆನ್ನಾಗಿ ಮಿಶ್ರಗೊಳಿಸಿ ನಂತರ ಸವಿಯಲು ನೀಡಿ.





Click it and Unblock the Notifications
